Breaking News
Home / ರಾಜ್ಯ / ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಋಣ ತೀರಿಸಿ-ಗುನ್ನಳ್ಳಿ ರಾಘವೇಂದ್ರ-

ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಋಣ ತೀರಿಸಿ-ಗುನ್ನಳ್ಳಿ ರಾಘವೇಂದ್ರ-

Spread the love

ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಋಣ ತೀರಿಸಿ-ಗುನ್ನಳ್ಳಿ ರಾಘವೇಂದ್ರ-ಸರ್ಕಾರಿ ನೌಕರರು ಸಾರ್ವಜನಿಕ ಕ್ಷೇತ್ರದಲ್ಲಿರುವವರು ಸಂಘಟನಾಕಾರರು ಹಾಗೂ ಜನಪ್ರತಿನಿಧಿಗಳು,ಮೊದಲು ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಿದೆ ಎಂದು ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ಹೇಳಿದರು.

ಅವರು ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ,ಎಸ್ಡಿಎಮ್ಸಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸರ್ಕಾರಿ ನೌಕರರು ಮೊದಲು ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲಿ,ಈ ಮೂಲಕ ಅವರು ಸರ್ಕಾರದ ಋಣ ತೀರಿಸಲಿ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಕೇವಲ ಭಾಷಣಕ್ಕೆ ಸೀಮಿತರಾಗವಾರದೆಂದು ಗುಡುಗಿದರು.ನೌಕರರಿಗೆ ಹಾಗೂ ಜನಪ್ರತಿನಿಧಿಗಳಿಗೆ ಅವರ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸುವಂತೆ ಖಡ್ಡಾಯಗೊಳಿಸಿ,ಸರ್ಕಾರ ಶೀಘ್ರವೇ ನಿಯಮ ಜಾರಿಗೆ ತರಬೇಕಿದೆ ಎಂದು ಅವರು ತಾಕೀತು ಮಾಡಿದರು.ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ವಿಷೇಶ ಸ್ಥಾನಮಾನ ನೀಡುವಂತಾಗಬೇಕಿದೆ,ನೇಮಕಾತಿ ಹಾಗೂ ಸೌಲಭ್ಯ ನೀಡುವಾಗ ಸರ್ಕಾರಿ ಶಾಲ ವಿದ್ಯಾರ್ಥಿಗಳನ್ನ ವಿಶೇಷ ಮಾನ್ಯತೆ ನೀಡಬೇಕು,ಈ ನಿಟ್ಟಿನಲ್ಲಿ ಅಗತ್ಯ ನಿಯಮ ಜಾರಿತರಬೇಕಿದೆ ಅಂದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದರು.

ಎಸ್ಡಿ ಎಮ್ಸಿ ಕುರಿತು ಅವರು ಸಭೆಯಲ್ಲಿ ಸಮಗ್ರವಾದ ಮಾಹಿತಿ ನೀಡಿದರು,ಸರ್ಕಾರದ ಅನುದಾನ ಬಳಕೆ ಹಾಗೂ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ಒದಗಿಸುವ ಕುರಿತು ಮಾಹಿತಿ ನೀಡಿದರು.ಎಸ್ಢಿ ಎಮ್ಸಿ ಪದಾಧಿಕಾರಿಗಳ ಆಯ್ಕೆ ನಡೆಯಿತು,ಶಾಲಾ ಮುಖ್ಯ ಶಿಕ್ಷಕ ರೇವಣರಾಧ್ಯ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಸವಾಲುಗಳ ಸರಮಾಲೆಗಳಿರುತ್ತವೆ.ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಮಕ್ಕಳಲ್ಲಿನ ಉತ್ತಮ ಪಲಿತಾಂಶಕ್ಕಾಗಿ, ಇಲಾಖಾಧಿಕಾರಿಗಳ ಸೂಚನೆಗಳಂತೆಯೇ ಹೆಚ್ಚಿನ ಆಧ್ಯತೆ ನೀಡಲಾಗುವುದು,ಈ ನಿಟ್ಟಿನಲ್ಲಿ ಎಸ್ಡಿ ಎಮ್ಸಿ ಯವರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಪಪಂ ಸದಸ್ತರಾದ ಶ್ರೀಮತಿ ಸರಸ್ವತಿ ರಮೇಶ,ಶಿಕ್ಷಕರಾದ ಕೊಟ್ರಶ್,ಎಸ್ಡಿ ಎಮ್ಸಿ ಮಾಜಿ ಅಧ್ಯಕ್ಷ ಎಂ.ಎಂ.ವೀರಯ್ಯ ಸೇರಿದಂತೆ ಹಾಗೂ ಎಸ್ಡಿ ಎಮ್ಸಿ ಸದಸ್ಯರು,ಯುವ ಮುಖಂಡ ರಮೇಶ,ಶಿಕ್ಷಕರು ವೇದಿಕೆಯಲ್ಲಿದ್ದರು,ವಿದ್ಯಾರ್ಥಿಗಳಪೋಷಕರು ಹಾಗೂ ಸಿಬ್ಬಂದಿ ವರ್ಗ ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ