Breaking News
Home / ರಾಜ್ಯ / ಆ ಮಹಾನಾಯಕನ ವಿರುದ್ಧ ಬಿಜೆಪಿ ಕಿಡಿಕಾರಿದ ಬೆನ್ನಲ್ಲೇ ಬಿಎಸ್​ವೈಗೆ ಗುರಿಯಾಗಿಸಿದ ಕಾಂಗ್ರೆಸ್!

ಆ ಮಹಾನಾಯಕನ ವಿರುದ್ಧ ಬಿಜೆಪಿ ಕಿಡಿಕಾರಿದ ಬೆನ್ನಲ್ಲೇ ಬಿಎಸ್​ವೈಗೆ ಗುರಿಯಾಗಿಸಿದ ಕಾಂಗ್ರೆಸ್!

Spread the love

ಬೆಂಗಳೂರು: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣ ಸಂಬಂಧ ಕೆಪಿಸಿಸಿ ಮತ್ತು ರಾಜ್ಯ ಬಿಜೆಪಿ ಘಟಕದ ನಡುವೆ ಟ್ವಿಟರ್​ನಲ್ಲಿ ವಾರ್​ ಶುರುವಾಗಿದೆ. ‘ನನ್ನ ವಿರುದ್ಧ ಹಿಂದೆ ಮಾಡಿದ್ದ ಷಡ್ಯಂತ್ರಗಳು ಈಗಲೂ ಮುಂದುವರಿಯುತ್ತಿದೆ. ಸಿಡಿ ಪ್ರಕರಣದಲ್ಲೂ ನನ್ನನ್ನು ಸಿಲುಕಿಸಲು ನೋಡುತ್ತಿದ್ದಾರೆ’ ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಇತ್ತೀಚಿಗೆ ಆರೋಪಿಸಿದ್ದರು.

ಇಂದು ಇದೇ ವಿಚಾರ ಪ್ರಸ್ತಾಪಿಸಿರುವ ಬಿಜೆಪಿ ರಾಜ್ಯ ಘಟಕ, ‘ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎನ್ನುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ. ರಾಹುಲ್‌ ಗಾಂಧಿ ಏಕೆ ಸುಕನ್ಯಾ ದೇವಿಯ ಪರವಾಗಿ ಒಮ್ಮೆಯೂ ಧ್ವನಿ ಎತ್ತಿಲ್ಲ? ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ? ಬೆಂಕಿಯಿಲ್ಲದೆ ಹೊಗೆಯಾಡುವುದೇ? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್‌ ಹಗೆತನ ಸಾಧಿಸುತ್ತಿದೆ’ ಎಂದು ಟ್ವೀಟ್​ ಮಾಡಿದೆ. ಆ ಮೂಲಕ ಡಿಕೆಶಿಯೇ ಇದರ ಸೂತ್ರಧಾರಿ ಎಂದು ಪರೋಕ್ಷವಾಗಿ 

ಬಿಜೆಪಿಯ ಟ್ವೀಟ್​ಗೆ ಪ್ರತ್ಯುತ್ತರ ಕೊಟ್ಟಿರುವ ರಾಜ್ಯ ಕಾಂಗ್ರೆಸ್, ‘ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾನಾಯಕ ಎನ್ನುತ್ತ ಬಿಎಸ್​ವೈ ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ? @BasanagoudaBJP ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್ಮೇಲ್ ಮಾಡಲಾಗುತ್ತದೆ ಎಂಬ ಮಾತನ್ನ ನೀವೂ ಪರೋಕ್ಷವಾಗಿ ಹೇಳುತ್ತಾ ಬಿಎಸ್​ವೈ ಮುಕ್ತ ಬಿಜೆಪಿ ಅಭಿಯಾನ ಮುಂದುವರಿಸುತ್ತಿರುವಿರಾ?’ ಎಂದು ಟಾಂಗ್​ ಕೊಟ್ಟಿದೆ.

‘ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಬ್ಲಾಕ್ಮೇಲ್‌ ಸಂಪುಟ. ಹನಿಟ್ರ್ಯಾಪ್‌ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ @BSYBJP ಫ್ಯಾಮಿಲಿ ಸರ್ಕಾರ. ‘ದಂಡ’ದ ಸರ್ಕಾರಕ್ಕೆ ‘ಮಾನ’ ಎಲ್ಲಿದೆ? ತಾಕತ್ತಿದ್ದರೆ ಆಪರೇಷನ್ ಕಮಲದ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ’ ಎಂದು ಟ್ವೀಟ್​ ಮೂಲಕ ಕಾಂಗ್ರೆಸ್ ಸವಾಲು ಹಾಕಿದೆ.

ಹೀಗೆ ಸರಣಿ ಟ್ವೀಟ್​ಗಳ ಮೂಲಕ ಸಿಡಿ ಕೇಸ್​ ವಿಚಾರವಾಗಿ ಇಂದು ಕಾಂಗ್ರೆಸ್​-ಬಿಜೆಪಿ ನಡುವೆ ಟ್ವೀಟ್​ ವಾರ್​ ನಡೆದಿದ್ದು, ಸಿಡಿ ವಿಚಾರವಾಗಿ ಬಿಜೆಪಿ ಮಾಡಿದ್ದ ಟ್ವೀಟ್​ಗೆ ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ವಿಶ್ವನಾಥ್​, ‘ಈ ರೀತಿ ಟ್ವೀಟ್ ಮಾಡಬಾರದು. ಮಹಾನ್ ನಾಯಕ ಎಂಬ ಪದ ಬಳಸಬಾರದು. ಸಿದ್ದರಾಮಯ್ಯ ಬಿಟ್ಟರೆ ಎಲ್ಲ ಪಕ್ಷದ ನಾಯಕರೂ ಬೇಲ್ ಮೇಲೆ ಇದ್ದಾರೆ. ಯಾರೂ ಅಂತ ಹೇಳ್ತೀರಾ? ಇದಕ್ಕೆ ಕೊನೆ ಹಾಡಿ. ಯಾಕೆ ಮಾನ ಕಳೆಯುತಿದ್ದೀರಿ?’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಷ್ಟೇ ಅಲ್ಲ ಕಾಂಗ್ರೆಸ್​ ನಡೆ ಬಗ್ಗೆಯೂ ವಿಶ್ವನಾಥ್​ ಆಕ್ರೋಶ ಹೊರಹಾಕಿದ್ದಾರೆ. ‘ಸದನದಲ್ಲಿ ಒಬ್ಬ ಮಂತ್ರಿ ಉತ್ತರಿಸೋ ಸಂದರ್ಭದಲ್ಲಿ ನೀನು ಕೋರ್ಟ್​ಗೆ ಹೋಗಿದ್ದೀಯಾ? ನೀನು ಕಳಂಕಿತ ಅನ್ನೋದು ತಪ್ಪು. ಅವರ ಉತ್ತರಕ್ಕೆ ತಡೆ ಮಾಡೋದು ತಪ್ಪು. ಮೇಟಿ ಕೋರ್ಟ್​ಗೆ ಹೋಗಿರಲಿಲ್ಲವಾ? ನೀವು ಮಾಡಿದ ಪಾಪವನ್ನು ಜ್ಞಾಪಕ ಮಾಡಿಕೊಳ್ಳಿ. ಆ ಮೇಲೆ ಬಿಜೆಪಿ ಮೇಲೆ ಅಟ್ಯಾಕ್ ಮಾಡಿ’ ಎಂದು ವಿಶ್ವನಾಥ್ ಮಾತಿನಲ್ಲೇ ಚಾಟಿ ಬೀಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ