Breaking News
Home / ರಾಜ್ಯ / ವೈಷ್ಣವಿಯ ಬಟ್ಟೆ ಎಳೆದ ಶಮಂತ್​ ಬ್ರೋ ಗೌಡ! ಕಿಚ್ಚನ ಎದುರು ವೈಷ್ಣವಿ ಗಂಭೀರ ಆರೋಪ

ವೈಷ್ಣವಿಯ ಬಟ್ಟೆ ಎಳೆದ ಶಮಂತ್​ ಬ್ರೋ ಗೌಡ! ಕಿಚ್ಚನ ಎದುರು ವೈಷ್ಣವಿ ಗಂಭೀರ ಆರೋಪ

Spread the love

ಆರಂಭದಲ್ಲಿ ಸ್ವಲ್ಪ ಸಪ್ಪೆ ಆಗಿದ್ದ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಈಗ ಹೊಸ ಹೊಸ ಟ್ವಿಸ್ಟ್​ ಸಿಗುತ್ತಿದೆ. ಅದರಲ್ಲೂ ಎರಡನೇ ವಾರವಂತೂ ದೊಡ್ಮನೆಯಲ್ಲಿ ಒಂದು ಯುದ್ಧವೇ ನಡೆದು ಹೋಯ್ತು. ಆ ಘಟನೆಯಲ್ಲಿ ಶಮಂತ್​ ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ನಟಿ ವೈಷ್ಣವಿ ಆರೋಪಿಸಿದ್ದಾರೆ. ಕಿಚ್ಚನ ಎದುರಿನಲ್ಲಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.

ಎರಡನೇ ವಾರದಲ್ಲಿ ಮನೆಯೊಳಗಿನ ಸ್ಪರ್ಧಿಗಳಿಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ ನೀಡಲಾಗಿತ್ತು. ಅದರಲ್ಲಿ ಎಲ್ಲರೂ ತುಂಬ ಆಕ್ರಮಣಕಾರಿಯಾಗಿ ಆಟ ಆಡಿದರು. ಈ ಟಾಸ್ಕ್​ ನಿಭಾಯಿಸುವಾಗ ಶಮಂತ್​ ಅವರು ತಮ್ಮ ಬಟ್ಟೆ ಎಳೆದರು ಎಂದು ವೈಷ್ಣವಿ ಹೇಳಿದ್ದಾರೆ. ಈ ವಿಚಾರವನ್ನೇ ಇಟ್ಟುಕೊಂಡು ಕಿಚ್ಚ ಸುದೀಪ್​ ವಾರದ ಪಂಚಾಯಿತಿಯಲ್ಲಿ ಮಾತುಕತೆ ಮಾಡಿದ್ದಾರೆ. ಮನೆಯೊಳಗಿನ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಸುದೀಪ್​ ಕಾಳಜಿ ವಹಿಸಿದ್ದಾರೆ.

‘ಶಮಂತ್​ ಮೊದಲ ಬಾರಿಗೆ ನನ್ನ ಬಟ್ಟೆ ಎಳೆದರು. ಕೈ ಕಾಲು ಎಳೆಯಿರಿ. ಆದರೆ ಬಟ್ಟೆ ಎಳೆಯಬೇಡಿ ಎಂದು ನಾನು ಶಮಂತ್​ಗೆ ಹೇಳಿದೆ. ಒಮ್ಮೆ ಸುಮ್ಮನಾದೆ. ಆಮೇಲೆ ಅವರು ಸಾರಿ ಕೇಳಿದರು. ಆದರೆ ಮತ್ತೊಮ್ಮೆ ಅದೇ ರೀತಿ ಮಾಡಿದರು. ಅಲ್ಲದೆ, ನನ್ನನ್ನು ಅವರು ತಳ್ಳಿದರು. ಆಗಲೂ ನನಗೆ ಬೇಜಾರಾಯಿತು’ ಎಂದು ತಮ್ಮ ಅಳಲನ್ನು ವೈಷ್ಣವಿ ತೋಡಿಕೊಂಡಿದ್ದಾರೆ. ನಿಮ್ಮ ಪ್ರಕಾರ ನಿಮ್ಮ ತಂಡದವರು ಎದುರಾಳಿ ತಂಡದವರ ಜೊತೆ ಈ ರೀತಿ ನಡೆದುಕೊಂಡಿಲ್ಲವೇ ಎಂದು ಸುದೀಪ್​ ಕೇಳಿದ್ದಕ್ಕೆ ‘ಇರಬಹುದು’ ಎಂದು ವೈಷ್ಣವಿ ಉತ್ತರ ನೀಡಿದರು.​

ಮಂಜು ಮತ್ತು ಶಮಂತ್​ ಅವರು ನಿಧಿ ಜೊತೆ ಬೇರೆ ರೀತಿ ನಡೆದುಕೊಂಡರು ಎಂಬ ಆರೋಪ ಕೂಡ ಕೇಳಿಬಂತು. ಅದಕ್ಕೂ ಸುದೀಪ್​ ಪ್ರತಿಕ್ರಿಯೆ ನೀಡಿದರು. ‘ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಆರೋಪ ಮೊದಲನೇ ಸಲ ಅಲ್ಲ. ನಿಮಗೆ ಅನ್​ಕಂಫರ್ಟೆಬಲ್ ಆಗಿಲ್ಲ ಎಂದು ನಾನು ಹೇಳ್ತಾ ಇಲ್ಲ. ಆದರೆ ಯಾರಾದರೂ ಕೆಟ್ಟ ಉದ್ದೇಶದಿಂದ, ಅಕಸ್ಮಾತ್ ಆಗಿ ಅಂಥದ್ದೇನಾದರೂ ನಡೆಸ್ತಾ ಇದಾರೆ ಅಂತ ಗೊತ್ತಾದರೆ ಬಿಗ್​ ಬಾಸ್​ ಖಡಾಖಂಡಿತವಾಗಿ ತಕ್ಷಣ ಮಧ್ಯ ಪ್ರವೇಶಿಸ್ತಾರೆ. ನೀವು ನಂಬಲೇ ಬೇಕು. ಬಿಗ್​ ಬಾಸ್​ ನಿಮ್ಮ ಜೊತೆ ಇದ್ದೇ ಇರ್ತಾರೆ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ: ‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ