Breaking News
Home / ರಾಜ್ಯ / ಕಾರಿನಲ್ಲಿ ಸ್ಪೋಟಕ ಪತ್ತೆ ಪ್ರಕರಣ : ತಿಹಾರ್‌ ಜೈಲಿಗೆ ಮುಂಬಯಿ ಪೊಲೀಸ್‌ ಭೇಟಿ

ಕಾರಿನಲ್ಲಿ ಸ್ಪೋಟಕ ಪತ್ತೆ ಪ್ರಕರಣ : ತಿಹಾರ್‌ ಜೈಲಿಗೆ ಮುಂಬಯಿ ಪೊಲೀಸ್‌ ಭೇಟಿ

Spread the love

ಮುಂಬಯಿ: ಅಂಬಾನಿ ನಿವಾಸದ ಬಳಿ ಸ್ಫೋಟಕವಿದ್ದ ಕಾರನ್ನು ತಾವೇ ನಿಲ್ಲಿಸಿದ್ದು ಎಂದು “ಜೈಶ್‌-ಉಲ್‌-ಹಿಂದ್‌’ ಸಂಘಟನೆಯ ಹೆಸರಿನಲ್ಲಿ ಟೆಲಿಗ್ರಾಂ ಆಯಪ್‌ ಸಂದೇಶದ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರು, ಶನಿವಾರ ತಿಹಾರ್‌ ಜೈಲಿಗೆ ಭೇಟಿ ನೀಡಿ, ಅಲ್ಲಿ ಸೆಂಟ್ರಲ್‌ ಜೈಲ್‌ ಸಂಖ್ಯೆ 8ರಲ್ಲಿ ಬಂಧಿತನಾಗಿರುವ ತಹ್ಸಿನ್‌ ಅಖ್ತರ್‌ ಎಂಬಾತನನ್ನು ವಿಚಾರಣೆ ಗೊಳಪಡಿಸಿದರು. ಭಾರತದಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ ಗುಂಪುಗಳನ್ನು ನಿರ್ವಹಿಸುತ್ತಿದ್ದ ಆರೋಪದಡಿ 2014ರಲ್ಲಿ ಈತ ಬಂಧನಕ್ಕೊಳಗಾಗಿದ್ದ.

ವೇಝ್ ಅರ್ಜಿ ವಜಾ: ಇದೇ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಮನ್ಸುಖ್‌ ಹಿರಾನ್‌ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸ್‌ ಅಧಿಕಾರಿ ಸಚಿನ್‌ ವೇಝ್, ಮುಂಬಯಿಯ ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ವಜಾಗೊಂಡಿದೆ.

ವಿಚಾರಣೆಗೆ ಹಾಜರು: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಚಿನ್‌ ವೇಝ್ ಅವರು ಶನಿವಾರ ಮುಂಬಯಿಯಲ್ಲಿ ಇರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ಮತ್ತೂಂದೆಡೆ, ಇದೇ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಮನ್ಸುಖ್‌ ಹಿರಾನ್‌ ಅವರನ್ನು ದುಷ್ಕರ್ಮಿ ಗಳು ಹತ್ಯೆ ಮಾಡಿರಬಹುದೆಂದು, ಈ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾ ರಾಷ್ಟ್ರ ಉಗ್ರ ನಿಗ್ರಹ ಪಡೆ ಸಂಶಯ ವ್ಯಕ್ತ ಪಡಿಸಿದೆ ಎಂದು ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ