Breaking News
Home / ರಾಜ್ಯ / ಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಸಂಚಾರವನ್ನು ಮಾರ್ಚ್ 14ರಿಂದ ಆರಂಭ

ಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಸಂಚಾರವನ್ನು ಮಾರ್ಚ್ 14ರಿಂದ ಆರಂಭ

Spread the love

ಮೈಸೂರು, ಮಾರ್ಚ್ 12; ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಸಂಚಾರವನ್ನು ಮಾರ್ಚ್ 14ರಿಂದ ಆರಂಭಿಸಲಾಗುತ್ತದೆ ಎಂದು ಐಆರ್‌ಸಿಟಿಸಿ ಹೇಳಿದೆ. 2020ರಲ್ಲಿ ಕೆಎಸ್‌ಟಿಡಿಸಿಯಿಂದ ರೈಲಿನ ನಿರ್ವಹಣೆಯನ್ನು ಐಆರ್‌ಸಿಟಿಸಿ ಪಡೆದಿದೆ.

6 ರಾತ್ರಿ 7 ಹಗಲುಗಳ ಪ್ರವಾಸಿ ಪ್ಯಾಕೇಜ್‌ ಪ್ರಯಾಣ ಮೊದಲು ಆರಂಭವಾಗಲಿದೆ. ಬೆಂಗಳೂರು ನಗರದಿಂದ ಆರಂಭವಾಗುವ ಪ್ರಯಾಣ ಬೆಂಗಳೂರಿನಲ್ಲಿಯೇ ಕೊನೆಗೊಳ್ಳಲಿದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ಯಾಕೇಜ್‌ಗಳ ದರಗಳು ಲಭ್ಯವಿದೆ.

 

ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪಟ್ಟದಕಲ್ಲು ಮತ್ತು ಗೋವಾ ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಬಹುದು. ಒಟ್ಟು 2 ಪ್ಯಾಕೇಜ್‌ಗಳ ಸಂಚಾರಕ್ಕೆ ಈಗ ಒಪ್ಪಿಗೆ ನೀಡಲಾಗಿದೆ.

3 ರಾತ್ರಿ 4 ಹಗಲುಗಳ ಮತ್ತೊಂದು ಪ್ಯಾಕೇಜ್ ಮಾರ್ಚ್ 21ರಂದು ಆರಂಭವಾಗಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮೈಸೂರು, ಹಂಪಿ, ಮಹಾಬಲಿಪುರಂಗೆ ಹೋಗಿ ಬೆಂಗಳೂರಿಗೆ ವಾಪಸ್ ಆಗಲಿದೆ.

 

ಐಆರ್‌ಸಿಟಿಸಿ ತೆಗೆದುಕೊಂಡಿದೆ

2008ರಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭಿಸಿತ್ತು. 2020ರಲ್ಲಿ ಐಆರ್‌ಸಿಟಿಸಿ ಇದನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಹೊಸ ವಿನ್ಯಾಸ, ವ್ಯವಸ್ಥೆಯ ಜೊತೆ ರೈಲು ಸಂಚಾರವನ್ನು ಆರಂಭಿಸುತ್ತಿದೆ.

ರೈಲಿನಲ್ಲಿ ಹೊಸ ಸೇವೆಗಳು

ಐಆರ್‌ಸಿಟಿಸಿ ವೈ-ಫೈ, ಓಟಿಟಿ ಪ್ರದರ್ಶನದ ವ್ಯವಸ್ಥೆ, ವಿದೇಶಿ ಮತ್ತು ಭಾರತೀಯ ಖಾದ್ಯಗಳ ವ್ಯವಸ್ಥೆ, ಪ್ರವಾಸದ ಮಾಹಿತಿ ನೀಡುವ ವ್ಯವಸ್ಥೆ ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ರೈಲಿನಲ್ಲಿ ಮಾಡಿದೆ. ಇದರಿಂದಾಗಿ ಪ್ರವಾಸಿಗರಿಗೆ ಅಗತ್ಯ ಹಲವು ಹೊಸ ಸೌಲಭ್ಯಗಳು ಸಿಗಲಿವೆ.

ಮಾರ್ಗದ ಆಯ್ಕೆ ಹೇಗೆ?

ಮೂರು ಅಂಶಗಳ ಆಧಾರದ ಮೇಲೆ ಗೋಲ್ಡನ್ ಚಾರಿಯಟ್ ಸಂಚಾರ ಮಾಡುವ ಮಾರ್ಗವನ್ನು ನಿರ್ಧರಿಸಲಾಗಿದೆ. ಕಲೆ, ಸಂಸ್ಕೃತಿ ಮತ್ತು ಇತಿಹಾಸ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ಯಾಕೇಜ್ ರಚನೆ ಮಾಡಲಾಗಿದೆ ಎಂದು ಐಆರ್‌ಸಿಟಿಸಿ ಹೇಳಿದೆ.

ರಾಜರ ಹೆಸರುಗಳು

ಗೋಲ್ಡನ್ ಚಾರಿಯಟ್ ರೈಲಿನ ಅತಿಥಿಗಳ ಕೋಣೆಗಳಿಗೆ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ರಾಜರುಗಳ ಹೆಸರುಗಳನ್ನು ಇಡಲಾಗಿದೆ. ಪ್ರತಿ ಕೋಣೆ ನಾಲ್ಕು ಕ್ಯಾಬಿನ್‌ಗಳನ್ನು ಒಳಗೊಂಡಿರುತ್ತದೆ. ಬೋಗಿಯ ಒಳಗಿನ ಕೋಣೆಗಳು ಸಹ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿವೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ