Breaking News
Home / ರಾಜಕೀಯ / ವಿಶ್ವಾದ್ಯಂತ ಶಿಕ್ಷಣದಿಂದ ವಂಚಿತರಾಗುತ್ತಿರುವ 888 ಮಿಲಿಯನ್ ಗೂ ಹೆಚ್ಚು ಮಕ್ಕಳು: ಯುನಿಸೆಫ್ ವರದಿ

ವಿಶ್ವಾದ್ಯಂತ ಶಿಕ್ಷಣದಿಂದ ವಂಚಿತರಾಗುತ್ತಿರುವ 888 ಮಿಲಿಯನ್ ಗೂ ಹೆಚ್ಚು ಮಕ್ಕಳು: ಯುನಿಸೆಫ್ ವರದಿ

Spread the love

ನವದೆಹಲಿ : ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಪ್ರಪಂಚದ ಬಹುತೇಕ ಭಾಗ ಲಾಕ್ ಡೌನ್ ಆಗಿತ್ತು. ಅಂತೆಯೇ ಭಾರತವು ಈ ಒಂದು ಪರಿಸ್ಥಿತಿಯನ್ನು ಅನುಭವಿಸಿದ್ದು ಇದರಿಂದ ದೇಶದ ಆರ್ಥಿಕತೆ, ನಾಗರಿಕತೆ ಹಾಗೂ ಶಿಕ್ಷಣ ವ್ಯವಸ್ಥೆ ಅಂತಹ ಹಲವಾರು ಕ್ಷೇತ್ರಗಳ ಮೇಲೆ ವಿಭಿನ್ನ ರೀತಿಯ ಪರಿಣಾಮಗಳು ಬೀರಿತ್ತು.

ಅದರಲ್ಲಿಯೂ ಶಿಕ್ಷಣ ವ್ಯವಸ್ಥೆಯಲ್ಲಿ ಬೀರಿದ ಪರಿಣಾಮವನ್ನು ಅವಲೋಕಿಸಿದರೆ, 2020 ರಲ್ಲಿ 1.5 ಮಿಲಿಯನ್ ಶಾಲೆಗಳು ಮುಚ್ಚಲ್ಪಟ್ಟವು. ಇದರಿಂದಾಗಿ ಭಾರತದಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದಾಖಲಾದ 247 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಯುನಿಸೆಫ್ (UNICEF, United Nations International Children’s Emergency Fund) ತಿಳಿಸಿದೆ.

ಯುನಿಸೆಫ್ ಬಿಡುಗಡೆ ಮಾಡಿದ ದತ್ತಾಂಶವು ವಿಶ್ವಾದ್ಯಂತ 888 ಮಿಲಿಯನ್ ಗೂ ಹೆಚ್ಚು ಮಕ್ಕಳು ಪೂರ್ಣ ಮತ್ತು ಭಾಗಶಃ ಶಾಲಾ ಮುಚ್ಚುವಿಕೆಯಿಂದಾಗಿ ತಮ್ಮ ಶಿಕ್ಷಣಕ್ಕೆ ಅಡೆತಡೆಗಳನ್ನು ಎದುರಿಸುತ್ತಲೇ ಇದ್ದಾರೆ. ಅದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ತುಂಬಾ ಪ್ರಭಾವ ಬೀರಿದೆ ಎಂದು ಹೇಳಿದೆ.

ಶಾಲಾ ಮುಚ್ಚುವಿಕೆಯ ವರದಿಗಳ ವಿಶ್ಲೇಷಣೆಯು ಮಾರ್ಚ್ 2020 ರಿಂದ ಫೆಬ್ರವರಿ 2021 ರವರೆಗೆ ವಿಶ್ವದಾದ್ಯಂತ 14 ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಲನ್ನು ಮುಚ್ಚಲ್ಪಟ್ಟಿದೆ ಎಂದು ಹೇಳುತ್ತದೆ. ಆ ದೇಶಗಳಲ್ಲಿ ಮೂರನೇ ಎರಡರಷ್ಟು ಭಾಗವು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಲ್ಲಿವೆ, ಇದು ಸುಮಾರು 98 ಮಿಲಿಯನ್ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಮಾಡಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ