Home / Uncategorized / ದೂರು ನೀಡಿರುವ ದಿನೇಶ್ ಕಲ್ಲಹಳ್ಳಿ 3ನೇ ವ್ಯಕ್ತಿ,ಸಂತ್ರಸ್ತೆ ಅಥವಾ ರಕ್ತ ಸಂಬಂಧಿಗಳು ದೂರು ಸಲ್ಲಿಸದ ಹೊರತು ಪ್ರಕರಣಕ್ಕೆ ಕಾನೂನಾತ್ಮಕವಾಗಿ ಮಾನ್ಯತೆ ಸಿಗುವುದಿಲ್ಲ..?

ದೂರು ನೀಡಿರುವ ದಿನೇಶ್ ಕಲ್ಲಹಳ್ಳಿ 3ನೇ ವ್ಯಕ್ತಿ,ಸಂತ್ರಸ್ತೆ ಅಥವಾ ರಕ್ತ ಸಂಬಂಧಿಗಳು ದೂರು ಸಲ್ಲಿಸದ ಹೊರತು ಪ್ರಕರಣಕ್ಕೆ ಕಾನೂನಾತ್ಮಕವಾಗಿ ಮಾನ್ಯತೆ ಸಿಗುವುದಿಲ್ಲ..?

Spread the love

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ  ಸಿಡಿ ವಿವಾದ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಶುಕ್ರವಾರ ಎಫ್​ಐಆರ್ ದಾಖಲಿಸುವ ಸಾಧ್ಯತೆ ಇದೆ. ಆದರೆ ಯಾವ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ದೂರು ನೀಡಿರುವ ದಿನೇಶ್ ಕಲ್ಲಹಳ್ಳಿ 3ನೇ ವ್ಯಕ್ತಿ ಆಗಿದ್ದಾರೆ. ಈತ ಕೊಟ್ಟಿರುವ ದೂರಿನ ಮೇಲೆ ಅಥವಾ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಆಶ್ಲೀಲ ದೃಶ್ಯಾವಳಿ ಆಧರಿಸಿ ಎಫ್​ಐಆರ್ ದಾಖಲಿಸಹುದೇ ಎಂಬ ಜಿಜ್ಞಾಸೆ ಪೊಲೀಸ್ ಅಧಿಕಾರಿಗಳಲ್ಲಿ ಉಂಟಾಗಿದೆ. ಗೊಂದಲ ನಿವಾರಣೆಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಸಭೆ ನಡೆದಿದೆ. ಎಫ್​ಐಆರ್ ದಾಖಲಿಗೆ ಸರ್ಕಾರ ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆ ಅಥವಾ ರಕ್ತ ಸಂಬಂಧಿಗಳು ದೂರು ಸಲ್ಲಿಸದ ಹೊರತು ಪ್ರಕರಣಕ್ಕೆ ಕಾನೂನಾತ್ಮಕವಾಗಿ ಮಾನ್ಯತೆ ಸಿಗುವುದಿಲ್ಲ. ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರಿಗೆ ಸೇರಿದ ಲೈಂಗಿಕ ವಿವಾದ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದರೂ ಪೊಲೀಸರು ಮೌನವಹಿಸುವುದು ಸರಿಯಲ್ಲ. ಇದನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದರೆ ಕೊನೆಗೆ ಪೊಲೀಸರಿಗೆ ಸಂಕಷ್ಟ ಉಂಟಾಗಲಿದೆ. ದಿನೇಶ್ ಕಲ್ಲಹಳ್ಳಿ ದೂರಿನ ಅನ್ವಯ ವಂಚನೆ (ಐಪಿಸಿ 420) ಹಾಗೂ 506 (ಜೀವ ಬೆದರಿಕೆ) ಸೇರಿ ಇತರೆ ಸೆಕ್ಷನ್ ಅಡಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್​ಐಆರ್ ದಾಖಲಿಸಬಹುದು. ಆದರೆ ತನಿಖೆ ವೇಳೆ ಸಂತ್ರಸ್ತೆಯ ಹೇಳಿಕೆ ಬಹುಮುಖ್ಯ ಆಗಿರುತ್ತದೆ. ಒಂದು ವೇಳೆ ಸಂತ್ರಸ್ತೆ ಹೇಳಿಕೆ ದೂರಿನ ವಿರುದ್ಧವಾಗಿ ಇದ್ದರೆ ಆಗ ದಿನೇಶ್ ಕಲ್ಲಹಳ್ಳಿ ಮತ್ತು ಪೊಲೀಸರಿಗೆ ಸಮಸ್ಯೆ ಎದುರಾಗುತ್ತದೆ.

ಇದಲ್ಲದೆ, 3ನೇ ವ್ಯಕ್ತಿಯ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡರೆ ಆರೋಪಿತರು ಕೋರ್ಟ್​ನಲ್ಲಿ ಪ್ರಶ್ನಿಸಬಹುದು. ಆಗಲೂ ಪೊಲೀಸರಿಗೆ ಹಿನ್ನಡೆಯಾಗಲಿದೆ. ಇಡೀ ಪ್ರಕರಣವನ್ನು ರದ್ದು ಮಾಡುವ ಸಾಧ್ಯತೆ ಇರುತ್ತದೆ ಎಂದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

 


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ