Home / Uncategorized / ವಿಶ್ವ ಮಾರುಕಟ್ಟೆಗೆ Mi 11 ಸ್ಮಾರ್ಟ್ ಫೋನ್ ಎಂಟ್ರಿ; ವಿಶೇಷತೆಗಳೇನು?

ವಿಶ್ವ ಮಾರುಕಟ್ಟೆಗೆ Mi 11 ಸ್ಮಾರ್ಟ್ ಫೋನ್ ಎಂಟ್ರಿ; ವಿಶೇಷತೆಗಳೇನು?

Spread the love

ನವದೆಹಲಿ: ವಿಶ್ವದ ಸ್ಮಾರ್ಟ್ ಪೋನ್ ,ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಯೋಮಿ ಕಂಪನಿಯು ತನ್ನ Mi 11 ಸರಣಿಯ ಹೊಸ ಸ್ಮಾರ್ಟ್ ಫೋನ್ ಒಂದನ್ನು ವಿಶ್ವದಾದ್ಯಂತ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದು ತನ್ನ ವಿಭಿನ್ನ ಫೀಚರ್ ಗಳ ಮೂಲಕ ಮಾರುಕಟ್ಟೆಯಲ್ಲಿ ದೂಳೆಬ್ಬಿಸುತ್ತಿದೆ.

ಗ್ರಾಹಕ ಸ್ನೇಹಿ ಸ್ಮಾರ್ಟ್ ಪೋನ್ ಎಂಬ ಪ್ರಖ್ಯಾತಿಗೆ ಪಾತ್ರವಾಗಿರುವ Mi ಸ್ಮಾರ್ಟ್ ಪೋನ್ ಕಳೆದ ವರ್ಷದ ಕೊನೆಯಲ್ಲಿ ಈ ಹೊಸ ಆವೃತ್ತಿಯ Mi 11 ಮೊಬೈಲ್ ಪೋನ್ ಅನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದು ಸ್ನ್ಯಾಪ್ ಗ್ರ್ಯಾಗನ್ 888 SoC ಪ್ರೊಸೆಸರ್ ಅನ್ನು ಒಳಗೊಗೊಂಡಿದೆ.

Mi 11 ವೈಶಿಷ್ಟ್ಯತೆಗಳು

2 K ಡಿಸ್ ಪ್ಲೇ ಸೌಲಭ್ಯದೊಂದಿಗೆ ಟ್ರಿಪಲ್ ರೇರ್ ಕ್ಯಾಮರಾವನ್ನು ಒಳಗೊಂಡಿರುವ ಈ ಮೊಬೈಲ್ ಫೋನ್ ತನ್ನಲ್ಲಿ ಹಲವಾರು ವಿಭಿನ್ನ ಫೀಚರ್ ಗಳನ್ನು ಹೊಂದಿದೆ.

ಕ್ಯಾಮರಾ

Mi 11 ಮೊಬೈಲ್ ಪೋನಿನ ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮರಾಗಳಿರಲಿದ್ದು, 108 MP ಪ್ರಾಥಮಿಕ ಕ್ಯಾಮರಾ ಮತ್ತು 20MP ಸೆಲ್ಫೀ ಕ್ಯಾಮರಾವನ್ನು ಒಳಗೊಂಡಿರಲಿದೆ.

ಡಿಸ್ ಪ್ಲೇ

ಇದು ಆಯಂಡ್ರಾಯಿಡ್ 10 ಜೊತೆಗೆ MIUI 12 ಅನ್ನು ಒಳಗೊಂಡಿರುವ ಈ ಮೊಬೈಲ್ ನಲ್ಲಿ 6.8 ಇಂಚಿನ ಅಮೋಲ್ಡ್ ಡಿಸ್ ಪ್ಲೇ ಇರಲಿದೆ. ಇದರ ಜೊತೆಗೆ ಇದರ ಡಿಸ್ ಪ್ಲೇ 2 k ವೀಡಿಯೊ ಪ್ಲೇ ಆಗುವ ಸಾಮರ್ಥ್ಯವನ್ನು ಹೊಂದಿದೆ.

 

ಸ್ಟೋರೇಜ್ ಮತ್ತು ಬೆಲೆ

Mi 11 ಒಟ್ಟು 2 ರೀತಿಯ ಸ್ಟೋರೇಜ್ ಮಾದರಿಯಲ್ಲಿ ಲಾಂಚ್ ಆಗಿದ್ದು, 8 GB RAM ಮತ್ತು 128 GB ಸ್ಟೋರೇಜ್ ಅನ್ನು ಒಳಗೊಂಡಿರುವ ಮೊಬೈಲ್ ಅಂದಾಜು 65,800 ರೂ.ಗಳಲ್ಲಿ ಲಭ್ಯವಿದೆ. ಇನ್ನು 8 GB RAM ಮತ್ತು 256 GB ಸ್ಟೋರೇಜ್ ಅನ್ನು ಒಳಗೊಂಡಿರುವ ಮೊಬೈಲ್ ಅಂದಾಜು 70,100 ರೂ. ಗಳಲ್ಲಿ ಬಳಕೆದಾರರಿಗೆ ಲಭ್ಯಗೊಳ್ಳಲಿದೆ.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ