Breaking News
Home / ರಾಜ್ಯ / ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳತನ ಕೆಲವು ಪ್ರಕರಣದಲ್ಲಿ ಆರೋಪಿ ಸುಳಿವು ಸಿಕ್ಕಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳತನ ಕೆಲವು ಪ್ರಕರಣದಲ್ಲಿ ಆರೋಪಿ ಸುಳಿವು ಸಿಕ್ಕಿಲ್ಲ.

Spread the love

ಕಾರವಾರ: ಕೊರೋನಾ ಮಹಾಮಾರಿ ತಂದಿಟ್ಟ ಸಂಕಷ್ಟ ಒಂದೆರಡಲ್ಲ ಹತ್ತಾರು ಮಾರ್ಗದಲ್ಲಿ ಜನರನ್ನ ಸಂಕಷ್ಟದ ಗುಹೆಗೆ ನೂಕಿಸಿದೆ. ಇದರ ಬಾಗವಾಗಿ ಲಾಕ್ಡೌನ್​ ನಂತರ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮನೆಗಳಲ್ಲಿ ಕಳ್ಳತನ ಪ್ರಕರಣಗಳು ಅಧಿಕವಾಗಿದೆ. ಲಾಕ್​ಡೌನ್ ಬಳಿಕ ನಾಲ್ವತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿವೆ ಇದಕ್ಕೆಲ್ಲ ಕಾರಣ ಲಾಕ್​ಡೌನ್ ನಲ್ಲಿ ಕೆಲಸ ಇಲ್ಲದವರ ಕೃತ್ಯ ಎನ್ನಲಾಗಿದೆ. ಈ ಪೈಕಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಅತೀ ಹೆಚ್ಚು ಕಳ್ಳತವಾಗಿದೆ ದೇವಸ್ಥಾನ ಮತ್ತು ಮನೆಯಲ್ಲಿ ಕಳ್ಳತನವಾದ ಬಗ್ಗೆ ವರದಿ ಆಗಿದೆ. ಲಾಕ್ ಡೌನ್ ಬಳಿಕವೇ ಅತೀ ಹೆಚ್ಚು ಕಳ್ಳತನವಾದ ಬಗ್ಗೆ ಸ್ವತಃ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳೆ ಒಪ್ಪಿಕೊಳ್ಳುತ್ತಿದ್ದಾರೆ.

ಕಳ್ಳತನ ತಡೆಯಲು ಜಿಲ್ಲೆಯಲ್ಲಿ ಹೊಸ ತಂಡವನ್ನ ಕೂಡಾ ರಚನೆ ಮಾಡಲಾಗಿದೆ. ಕೆಲವು ಪ್ರಕರಣದಲ್ಲಿ ಆರೋಪಿಗಳು ಪತ್ತೆ ಆದ್ರೆ ಇನ್ನು ಕೆಲವು ಪ್ರಕರಣದಲ್ಲಿ ಆರೋಪಿ ಸುಳಿವು ಸಿಕ್ಕಿಲ್ಲ. ಇನ್ನು ಎಟಿಂ ಕಾರ್ಡ್ ವಂಚಕರ ಜಾಲ ಕೂಡಾ ದೊಡ್ಡ ಮಟ್ಟದಲ್ಲಿ ಬೆರೂರಿದ್ದು ಇದರ ಬೆನ್ನ ಹಿಂದೆ ಬಿದ್ದ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ತಂಡ ಆರೋಪಿಗಳನ್ನ ಬಂದಿಸಿದೆ. ಹೀಗೆ ಹತ್ತು ಹಲವು ಪ್ರಕರಣಗಳು ಈಗ ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿದ್ದು ಇದಕ್ಕೆಲ್ಲ ಕಾರಣ ಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡು ಕೆಲಸ ಕಾರ್ಯ ಇಲ್ಲದೆ ಇಂತ ಕೃತ್ಯದಲ್ಲಿ ಕೆಲವರು ಹಣದ ಆಸೆಗಾಗಿ ಜೀವನೋಪಾಯಕ್ಕಾಗಿ ಬಾಗಿ ಆಗುತ್ತಿದ್ದಾರೆ ಎನ್ನಲಾಗಿದೆ. ಪೋಲಿಸ್ ಬಲ್ಲ ಮೂಲವು ಕೂಡಾ ಇದನ್ನೆ ಸ್ಪಷ್ಟ ಪಡಿಸುತ್ತಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ