Breaking News
Home / Uncategorized / ರಾಜ್ಯದಲ್ಲಿ ಕನ್ನಡದ ಬಗ್ಗೆ ಅಭಿಮಾನ ಇರುವಂತಹ ಸರ್ಕಾರ ಇಲ್ಲ

ರಾಜ್ಯದಲ್ಲಿ ಕನ್ನಡದ ಬಗ್ಗೆ ಅಭಿಮಾನ ಇರುವಂತಹ ಸರ್ಕಾರ ಇಲ್ಲ

Spread the love

ಬೆಂಗಳೂರು: ರಾಜ್ಯದಲ್ಲಿ ಕನ್ನಡದ ಬಗ್ಗೆ ಅಭಿಮಾನ ಇರುವಂತಹ ಸರ್ಕಾರ ಇಲ್ಲ. ಈಗ ಏನಿದ್ದರೂ ಬಿಜೆಪಿ ಹಾಗೂ ಹಿಂದಿ ಪರ ಇರುವ ಸರ್ಕಾರ. ಯಡಿಯೂರಪ್ಪನವರಿಗೆ ಪ್ರಾಮಾಣಿಕತೆ ಇಲ್ಲ. ಬದ್ಧತೆ ಇದ್ದಿದ್ದರೆ ನಿನ್ನೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಜೊತೆ ನೇರವಾಗಿ ಮಾತನಾಡಬೇಕಿತ್ತು, ಯಾವುದೂ ಮಾತಾಡಿಲ್ಲ. ಅಲ್ಲಿ ಬಿಜೆಪಿಯವರಿಗೆ ಮರಾಠಿಗರ ವೇಷ-ಭೂಷಣಗಳನ್ನು ಹಾಕಿ ಸಭೆಯೆಲ್ಲ ಸಂಪೂರ್ಣ ಮರಾಠಿ ಸಭೆಯಂತಿತ್ತು. ಅಲ್ಲದೆ ಬಿಎಸ್‍ವೈ ಅವರು ಮಾತನಾಡುವಾಗ ಉದ್ಧವ್ ಠಾಕ್ರೆ ಬಗ್ಗೆ ಒಂದು ಅಕ್ಷರ ಕೂಡ ಮಾತಾಡಿಲ್ಲ. ಬೆಳಗಾವಿ, ಕನ್ನಡಗರ, ರಾಜಕರಾಣಿಗಳ ಬಗ್ಗೆ ಮಾತನಾಡಿಲ್ಲ ಎಂದು ಕನ್ನಡಪರ ಸಂಘಟನೆಯ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

 ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಉಳಿಸಿಕೊಳ್ಳಲು ಪಕ್ಷಾಂತರ ಮಾಡಿಸಿದರು. ಮರಾಠಿ ಪ್ರಾಧಿಕಾರ ಮಾಡಲು ಬಿಎಸ್‍ವೈಗೆ ಅಧಿಕಾರ ಕೊಟ್ಟವರು ಯಾರು..?. ನೀವು ಯಾಕೆ ಇಂದು ಉದ್ಧವ್ ಠಾಕ್ರೆ ಬಗ್ಗೆ ಮಾತಾಡ್ತಿಲ್ಲ. ನಿಮ್ಮ ಸಂಸದರು, ಶಾಸಕರು, ಮಂತ್ರಿಗಳು ಎಲ್ಲಿ ಹೋಗಿದ್ದಾರೆ. ಈ ರಾಜ್ಯ ದಿಕ್ಕೆಟ್ಟು ಹೋಗಿದ್ತ್ಯಾ? ಏನಾಗ್ತಿದೆ ಇಲ್ಲಿ. ಮುಂದಿನ ನೀವು ಏನು ಮಾಡಬೇಕು ಅಂತ ಇದ್ದೀರಿ. ಧೈರ್ಯವಾಗಿ ಗಡಿನಾಡಿನ ಬಗ್ಗೆ ಮಾತಾಡಿ ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿರುವ ಆಡಳಿತ, ರಾಜಕಾರಣ ಎಲ್ಲವೂ ಸಂಪೂರ್ಣ ಮರಾಠಿಮಯವಾಗಿದೆ. ಅದರ ಬಗ್ಗೆ ಇಲ್ಲಿ ಪ್ರಾಮಾಣಿಕವಾದ ಚಿಂತನೆ ಇಲ್ಲ. ಕರ್ನಾಟಕ ಸರ್ಕಾರ, ವಿರೋಧ ಪಕ್ಷಗಳು, ಶಾಸಕರು, ಸಂಸದರಲ್ಲಿ ಹೊಂದಾಣಿಕೆ ಇಲ್ಲವೇ ಇಲ್ಲ. ಈ ಕ್ಷಣದವರೆಗೂ ಒಬ್ಬ ಎಂಪಿ, ಶಾಸಕ, ಮಂತ್ರಿಗಳು ಬಾಯಿ ಬಿಟ್ಟಿಲ್ಲ. ಅಲ್ಲದೆ ನಿನ್ನೆ ಯಡಿಯೂರಪ್ಪ ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ. ಇದೇನ್ ರಾಜ್ಯ ಅಂತ ನನಗನಿಸುತ್ತಿದೆ. ಮಹಾರಾಷ್ಟರದಲ್ಲಿ ಕೂಗಾಡುತ್ತಿದ್ದಾರೆ. ಅಲ್ಲದೆ ಬೇರೆ ರಾಜ್ಯಗಳಲ್ಲಿ ಅವರವರ ಭಾಷೆಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ವಿರೋಧ ಪಕ್ಷಗಳು ಕೂಡ ಸತ್ತೋಗಿವೆ ಎಂದು ಕಿಡಿಕಾರಿದರು.
ವಿರೋಧ ಪಕ್ಷದವರ ಬಗ್ಗೆ ನನಗೆ ಬಹಳ ಗೌರವ ಇದೆ. ಆದರೆ ಅವರು ಕೂಡ ಯಾಕೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಈ ಸಂಬಂಧ ಯಾರೂ ಬೀದಿಗಿಳಿದು ಹೋರಾಟ ಮಾಡಲು ಬಂದಿಲ್ಲ. ಎಚ್ಚರಿಕೆ ಸಹ ಕೊಡದೆ ಮೌನವಾಗಿದ್ದಾರೆ. ಕಾರ್ನಟಕದಲ್ಲಿ ಇಷ್ಟೊತ್ತಿಗಾಗಲೇ ಸಚಿವ ಸಂಪುಟದ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ ಅದಾಗಿಲ್ಲ, ಬದಲು ಮರಾಠ ಪ್ರಾಧಿಕಾರವನ್ನು ರಚನೆ ಮಾಡಿದ್ದಾರೆ. ಇದು ಅತ್ಯಂತ ಅಗೌರವವಾಗಿದೆ. ಈಗಲಾದರೂ ಉದ್ಧವ್ ಠಾಕ್ರೆ ಮಾತಿಗೆ ವಿರುದ್ಧವಾಗಿ ಪ್ರಾಧಿಕಾರವನ್ನು ರದ್ದು ಮಾಡಿದ್ದೇವೆ ಎಂದು ಹೇಳಿ ಅಂತ ಮುಖ್ಯಮಂತ್ರಿ ಬಿಎಸ್‍ವೈಗೆ ಒತ್ತಡ ಹಾಕಿದರು


Spread the love

About Laxminews 24x7

Check Also

ಮತದಾನ ಮಾಡಿದವ್ರಿಗೆ ಫ್ರೀ ಮಸಾಲೆ ದೋಸೆ ,

Spread the loveಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಶುಕ್ರವಾರ 13 ರಾಜ್ಯಗಳ 88 ಸ್ಥಾನಗಳಿಗೆ ಮತದಾನ ಬಿರುಸಿನದ ಸಾಗಿದೆ. ಎರಡನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ