Home / Uncategorized / ಸಚಿವರಿಗೆ ಸುಳ್ಳು ಮಾಹಿತಿ ಕೊಟ್ಟ ಎಂಇಎಸ್ ಮುಖಂಡನಿಗೆ ಶಾಸಕ ಅಭಯ ಪಾಟೀಲ್ ಹಿಗ್ಗಾಮುಗ್ಗಾ ತರಾಟೆ

ಸಚಿವರಿಗೆ ಸುಳ್ಳು ಮಾಹಿತಿ ಕೊಟ್ಟ ಎಂಇಎಸ್ ಮುಖಂಡನಿಗೆ ಶಾಸಕ ಅಭಯ ಪಾಟೀಲ್ ಹಿಗ್ಗಾಮುಗ್ಗಾ ತರಾಟೆ

Spread the love

ಬೆಳಗಾವಿ(ಜ.9): ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಎಂಇಎಸ್ ಮಾಜಿ ಮೇಯರ್ ಮಧ್ಯೆ ವಾಗ್ವಾದ ನಡೆಯಿತು. ಎಂಇಎಸ್ ಮಾಜಿ ಮೇಯರ್ ಸುಳ್ಳು ಆರೋಪಕ್ಕೆ ಶಾಸಕ ಅಭಯ ಪಾಟೀಲ್ ಫುಲ್ ಗರ್ಂ ಆದರು. ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಮ್ಮುಖದಲ್ಲಿ ವಾಗ್ವಾದ ನಡೆಯಿತು. ಸ್ಮಾರ್ಟ್ ಸಿಟಿ ಕಾಮಗಾರಿ ಸರಿಯಾಗಿಲ್ಲ ಎಂದು ಮಾಜಿ ಎಂಇಎಸ್ ಮೇಯರ್ ನಾಗೇಶ ಸಾತೇರಿ ಸಚಿವರ ಮುಂದೆ ಆರೋಪ ಮಾಡಿದ್ರು. ಎಂಇಎಸ್ ಮುಖಂಡರ ಆರೋಪವನ್ನು ತಳ್ಳಿ ಹಾಕಿದ ಶಾಸಕ ಅಭಯ ಪಾಟೀಲ್ ಸಚಿವರಿಗೆ ನಿಖರವಾದ ಕಾಮಗಾರಿ ಬಗ್ಗೆ ಹೇಳಿ ಅದನ್ನ ಬಿಟ್ಟು ಸುಮ್ಮನೆ ಸುಳ್ಳು ಆರೋಪ ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಕೆಲ ಕಾಲ ಇಬ್ಬರು ಮಧ್ಯೆ ಮಾತಿನ ಚಕಮಕಿ ನಡೆಯಿತು. ಯಾವಾಗ ಬಿಜೆಪಿ ಶಾಸಕ ಅಭಯ ಪಾಟೀಲ್ ಅವರಿಗೆ ಕೀಪ್ ಕ್ವಾಯ್ಟ್ ಎಂದ ಎಂಇಎಸ್ ಮಾಜಿ ಮೇಯರ್ ನಾಗೇಶ ಸಾತೇರಿ ಉದ್ಧಟತನದ ಪದ ಬಳಸಿದರು. ಈ ಕೀಪ್ ಕ್ವಾಯ್ಟ್ ಹೇಳಿಕೆ ಕೆರಳಿದ ಶಾಸಕ ಅಭಯ ಪಾಟೀಲ್ ಸರಿಯಾಗಿ ಮಾತನಾಡುವುದನ್ನ ಕಲಿಯಿರಿ ಎಂದು ಎಂಇಎಸ್ ಮುಖಂಡ ನನ್ನ ತರಾಟೆಗೆ ತೆಗೆದುಕೊಂಡರು ಶಾಸಕ ಅಭಯ ಪಾಟೀಲ್. ಅಲ್ಲದೆ ಎಂಇಎಸ ಮುಖಂಡನಿಗೆ ಮಾತಿನ ಚಾಟಿ ಬೀಸಿದರು.ಸಭೆಯಲ್ಲಿ ಸಚಿವ ಭೈರತಿ ಬಸವರಾಜ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಶಾಸಕರು, ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನೆ ನಡೆಸಿದರು. ಕಾಮಗಾರಿ ಬಗ್ಗೆ ಏನಾದರೂ ಲೋಪಗಳಿದ್ದರೆ ಹೇಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ರು. ಆಗಲೇ ಈ ಎಂಇಎಸ್ ಮಾಜಿ ಮೇಯರ್ ನಾಗೇಶ ಸಾತೇರಿ ಸರ್ಕಾರಿ ಕಾಮಗಾರಿಗಳ ಬಗ್ಗೆ ಆರೋಪ ಮಾಡಲು ಆರಂಭಿಸಿದ್ರು. ಇದರಿಂದ ಸಭೆಯಲ್ಲಿ ಶಾಸಕರು ಎಂಇಎಸ್ ಮುಖಂಡನ ಮಧ್ಯೆ ಜಟಾಪಟಿಗೆ ಕಾರಣವಾಯಿತು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ