Breaking News
Home / ರಾಜ್ಯ / ಮಾಗಡಿ ರಸ್ತೆಯ ಅಂಡರ್ ಪಾಸ್ ಮೇಲ್ಭಾಗದಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಳಾಂತರದ ಬಗ್ಗೆ ನಟ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಗಡಿ ರಸ್ತೆಯ ಅಂಡರ್ ಪಾಸ್ ಮೇಲ್ಭಾಗದಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಳಾಂತರದ ಬಗ್ಗೆ ನಟ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.

Spread the love

ಬೆಂಗಳೂರು: ಮಾಗಡಿ ರಸ್ತೆಯ ಅಂಡರ್ ಪಾಸ್ ಮೇಲ್ಭಾಗದಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಳಾಂತರದ ಬಗ್ಗೆ ನಟ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದಜೊತೆ ಮಾತನಾಡಿದ ಅನಿರುದ್ಧ್, ಪ್ರತಿಷ್ಠಾಪನೆಯಾಗಿರುವ ಮೂರ್ತಿಯನ್ನ ರಾತ್ರೋ ರಾತ್ರಿ ಯಾರಿಗೂ ಹೇಳದೇ ತೆಗೆಯುವುದು ಎಷ್ಟು ಸೂಕ್ತ. ಈ ರೀತಿಯ ಕೆಲಸಗಳಿಂದ ಹಿರಿಯ ವ್ಯಕ್ತಿಗೆ ಅವಮಾನ ಮಾಡಿದಂತೆ ಆಗಲ್ವಾ? ಇದರಿಂದ ಅಭಿಮಾನಿಗಳಿಗೆ ದುಃಖ ಆಗುತ್ತೆ. ವಿಷ್ಣುವರ್ಧನ್ ಅಪ್ಪಾಜಿ ಪ್ರತಿಮೆಯನ್ನ ಯಾರು ತೆಗೆದ್ರು ಮತ್ತು ಯಾಕೆ ತೆಗೆದರು ಎಂದು ಬೇಸರ ವ್ಯಕ್ತಪಡಿಸಿದರು.
: ನಮ್ಮ ಕುಟುಂಬ ಎಲ್ಲರನ್ನ ಗೌರವಿಸುತ್ತೆ. ನಾವು ಯಾರ ಮಾತಿಗೆ ತಿರುಗೇಟು ನೀಡುವುದು ನಮಗೆ ಗೊತ್ತಿಲ್ಲ. ಸಚಿವರಾಗಿರುವ ಸೋಮಣ್ಣ ಅವರ ಮಾತುಗಳಿಗೆ ನಾವು ಗೌರವ ನೀಡುತ್ತೇವೆ. ಒಂದು ಪುತ್ಥಳಿಯನ್ನ ಪ್ರತಿಷ್ಠಾಪನೆ ಮಾಡುವಾಗಲೇ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಪ್ರತಿಷ್ಠಾಪನೆ ವಿಚಾರದಲ್ಲಿ ಯಾವ ತೊಂದರೆಯೂ ಇಲ್ಲ ಅಂದ್ಮೇಲೆ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಅಪ್ಪಾಜಿ ಅವರ ಬಗ್ಗೆಯೇ ಈ ರೀತಿ ಯಾಕೆ ಆಗ್ತಿದೆ. ಒಂದು ವೇಳೆ ಪ್ರತಿಮೆ ಸ್ಥಳಾಂತರಿಸುವದಿದ್ದರೆ ಎಲ್ಲರ ಜೊತೆ ಮಾತುಕತೆ ನಡೆಸಿ ಗೌರವಯುತವಾಗಿ ತೆಗೆಯಬಹದಿತ್ತು ಎಂದರು.

 ವಿ.ಸೋಮಣ್ಣ ಹೇಳಿದ್ದೇನು?: 40 ವರ್ಷಗಳ ಹಿಂದೆಯೇ ಬಾಲಗಂಗಾಧರೇಶ್ವರ ವೃತ್ತ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾನು ಮತ್ತು ವಿಷ್ಣುವರ್ಧನ್ ಆತ್ಮೀಯರು. ಆದ್ರೆ ಈ ಪ್ರತಿಮೆ ಏಕೆ ತೆರವು ಆಯ್ತು ಅಂತ ಮಾಹಿತಿ ಇಲ್ಲ. ಆದ್ರೆ ಈ ಪ್ರದೇಶದಲ್ಲಿ ತಿಳಿದೋ ಅಥವಾ ತಿಳಿಯದೋ ಅಲ್ಲಿ ಪ್ರತಿಮೆ ಇರಿಸಲಾಗಿತ್ತು. ಮುಂದಿನ ನಾಲ್ಕೈದು ದಿನಗಳಲ್ಲಿ ಒಳ್ಳೆ ಕಡೆ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ವಿಷ್ಣುವರ್ಧನ್ ನನಗೆ ಆತ್ಮೀಯರಲ್ಲಿ ಆತ್ಮೀಯರು. ನನ್ನ ಜೊತೆಗಿನ ಅವರ ಒಡನಾಟ ಹೇಗಿತ್ತು ಅನ್ನೋದು ಈಗ ಹೇಳಲು ಸಮಯ ಇಲ್ಲ. ಇದೊಂದು ಸೂಕ್ಷ್ಮ ಘಟನೆಯಾಗಿದ್ದು, ನಡೆದ ಅತಾಚುರ್ಯಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿ ಬೇಕಾದ್ರೂ ಸ್ಥಾಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ