Breaking News
Home / ರಾಜ್ಯ / 3.9 ಡಿಗ್ರಿ ಕೊರೆವ ಮಹಾಚಳಿಗೆ ತತ್ತರಿಸಿದ ದೆಹಲಿ,

3.9 ಡಿಗ್ರಿ ಕೊರೆವ ಮಹಾಚಳಿಗೆ ತತ್ತರಿಸಿದ ದೆಹಲಿ,

Spread the love

ನವದೆಹಲಿ, ಡಿ.20- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದಲ್ಲೇ ಅತ್ಯಂತ ಕಡಿಮೆ ಶೀತ ವಾತವರಣ ದಾಖಲಾಗಿದ್ದು, ಜನ ಜೀವನ ಗಡಗಡ ನಡುಗಿ ಹೋಗಿದೆ. ಶನಿವಾರ ಸಫ್ಜಜಂಗ್‍ನ ಮಾಪಕ ಕೇಂದ್ರದಲ್ಲಿ 3.9 ಡಿಗ್ರಿ ಸೆಲ್ಸಿಯಸ್ ಶೀತ ವಾತವರಣ ದಾಖಲಾಗಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಶನಿವಾರ ಅತ್ಯಂತ ಕನಿಷ್ಠ ತಾಪಮಾನ 3.4 ಡಿಗ್ರಿ ದಾಖಲಾಗಿದೆ.

ಲೋದಿ ರಸ್ತೆಯಲ್ಲಿ ಮಾಪನ ಕೇಂದ್ರದಲ್ಲಿ 3.3 ಡಿಗ್ರಿ ಸೆಲ್ಸಿಯಸ್ ತೇವಾಂಶ ವರದಿಯಾಗಿದೆ. ಪಶ್ಚಿಮ ಹಿಮಾಲಯ ಪ್ರದೇಶ ಭಾಗದ ಮೂಲ ಹಿಮಗಾಳಿ ಅಪ್ಪಳಿಸುತ್ತಿರುವುದರಿಂದ ದೆಹಲಿ ಮಂಜಿನ ಕೋಟೆಯಾಗಿದೆ. ಶುಕ್ರವಾರ ಜಫರ್‍ಪುರ್ ಮಾಪನ ಕೇಂದ್ರದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ಶೀತವಾತಾವರಣ ದಾಖಲಾಗಿದೆ.

ರಾಸರಿ ಉಷ್ಣತೆ ಗುರುವಾರ ಗರಿಷ್ಠ 15.2 ಡಿಗ್ರಿ ಸೆಲ್ಸಿಯಸ್‍ಗೆ ಕುಸಿದಿತ್ತು. ಶುಕ್ರವಾರ ಅದು 19.8ಕ್ಕೆ, ಶನಿವಾರ 21.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.ದೆಹಲಿಯ ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ 10 ಡಿಗ್ರಿಗಿಂತ ಕಡಿಮೆ ಇಲ್ಲದ ಮತ್ತು ಗರಿಷ್ಠ 4.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ ಅದನ್ನು ಶೀತದಿನ ಎಂದು ಉಲ್ಲೇಖಿಸಲಾಗುತ್ತದೆ.

6.5 ಡಿಗ್ರಿಗಿಂತ ಕಡಿಮೆ ತೇವಾಂಶ ಇರುವ ದಿನವನ್ನು ಗಂಭೀರ ಗಂಭೀರ ಶೀತದಿನ ಎಂದು ಪರಿಗಣಿಸಲಾಗುತ್ತದೆ. ಮುಂದಿನ ಐದು ದಿನಗಳಲ್ಲಿ ದೆಹಲಿಯ ಉಷ್ಣಾಂಶ 5 ಡಿಗ್ರಿ ಸೆಲ್ಸಿಯಸ್‍ಗಿಂತಗಳು ಕಡಿಮೆ ದಾಖಲಾಗುವ ಸಾಧ್ಯತೆಗಳಿವೆ. ಸಣ್ಣ ಪ್ರದೇಶವಾಗಿರುವ ದೆಹಲಿಯನ್ನು ಶೀತಗಾಳಿ ದಿನೇ ದಿನೇ ಬಾಧೀಸುತ್ತಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ