Home / ರಾಷ್ಟ್ರೀಯ / ಬಿಜೆಪಿಯು ಸಮುದಾಯಗಳಲ್ಲಿ ಗಲಭೆ ಮತ್ತು ದ್ವೇಷದ ಹೊಸ ಧರ್ಮವನ್ನು ಸೃಷ್ಟಿಸಿದೆ’:

ಬಿಜೆಪಿಯು ಸಮುದಾಯಗಳಲ್ಲಿ ಗಲಭೆ ಮತ್ತು ದ್ವೇಷದ ಹೊಸ ಧರ್ಮವನ್ನು ಸೃಷ್ಟಿಸಿದೆ’:

Spread the love

ಜಲ್‌ಪೈಗುರಿ: ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರವನ್ನು ನಡೆಸುತ್ತಿರುವ ಕೇಂದ್ರ ಸರ್ಕಾರವು, ಪಶ್ಚಿಮ ಬಂಗಾಳವನ್ನು ಗಲಭೆಪೀಡಿತ ಗುಜರಾತ್ ರೀತಿಯಾಗಿ ಮಾರ್ಪಡಿಸಲು ಹೊರಟಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ನಡೆದ ರ‍್ಯಾಲಿಯೊಂದರಲ್ಲಿ ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ರಾಜ್ಯದ ಐಪಿಎಸ್‌ ಅಧಿಕಾರಿಗಳಿಗೆ ಸಮನ್ಸ್ ನೀಡುವ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯ ಕೇಡರ್‌ನ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಕೇಂದ್ರದ ಅಧಿಕಾರಿಗಳನ್ನು ಇಲ್ಲಿಗೆ ತಂದು ನಮ್ಮನ್ನು ಹೆದರಿಸಬಹುದು ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಭಾವಿಸಿದರೆ ಅದು ಅವರ ತಪ್ಪು ಆಲೋಚನೆ’ ಎಂದು ಕಿಡಿಕಾರಿದರು.

‘ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿಲ್ಲ’ ಎಂದು ಪುನರುಚ್ಚರಿಸಿದ ಅವರು, ‘ನಡ್ಡಾ ಅವರ ಬೆಂಗಾವಲು ಪಡೆಯೊಂದಿಗೆ ಅಷ್ಟೊಂದು ಕಾರುಗಳು ಏಕೆ ಬಂದವು? ಅವರೊಂದಿಗೆ ಕ್ರಿಮಿನಲ್ ಆರೋಪ ಹೊಂದಿರುವವರು ಏಕೆ ಬಂದಿದ್ದರು?’ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

‘ಬಿಜೆಪಿಯು ಸಮುದಾಯಗಳಲ್ಲಿ ಗಲಭೆ ಮತ್ತು ದ್ವೇಷದ ಹೊಸ ಧರ್ಮವನ್ನು ಸೃಷ್ಟಿಸಿದೆ’ ಎಂದೂ ಆರೋಪಿಸಿದರು.


Spread the love

About Laxminews 24x7

Check Also

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ

Spread the love ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ ಸಿಕ್ಕಿದ್ದು, ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ