Breaking News
Home / ಜಿಲ್ಲೆ / ರಾಜ್ಯದಲ್ಲಿಂದು 2,627 ಕೊರೊನ ಪ್ರಕರಣಗಳು, ಬೆಳಗಾವಿಯಲ್ಲಿ 2 ಪ್ರಕರಣಗಳು ಮಹಾಮಾರಿ ವೈರಸ್ ಮೂವರ ಬಲಿ …….

ರಾಜ್ಯದಲ್ಲಿಂದು 2,627 ಕೊರೊನ ಪ್ರಕರಣಗಳು, ಬೆಳಗಾವಿಯಲ್ಲಿ 2 ಪ್ರಕರಣಗಳು ಮಹಾಮಾರಿ ವೈರಸ್ ಮೂವರ ಬಲಿ …….

Spread the love

ಬೆಂಗಳೂರು: ರಾಜ್ಯದಲ್ಲಿಂದು ಸಹ ಮಹಾಮಾರಿ ಕೊರೊನಾ ವೈರಸ್ ತನ್ನು ರುದ್ರ ನರ್ತನವನ್ನು ಮುಂದುವರಿಸಿದೆ. ಇಂದು ಒಂದೇ ದಿನ 2,627 ಕೊರೊನ ಪ್ರಕರಣಗಳು ಕರುನಾಡಿನಲ್ಲಿ ವರದಿಯಾಗಿವೆ. ಇಂದು 71 ಜನ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು 1,525 ಜನರಲ್ಲಿ ಸೋಂಕು ಸೇರಿಕೊಂಡಿದೆ. ಇಂದು ಬೆಂಗಳೂರಿನಲ್ಲಿ 206 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ನಗರದಲ್ಲಿ 14,067 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ ಒಂದೇ ದಿನ 45 ಜನರನ್ನು ಕೊರೊನಾ ರಾಕ್ಷಸಿ ಬಲಿ ಪಡೆದಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,525, ದಕ್ಷಿಣ ಕನ್ನಡ 196, ಧಾರವಾಡ 129, ಯಾದಗಿರಿ 120, ಕಲಬುರಗಿ 79, ಬಳ್ಳಾರಿ 63, ಬೀದರ್ 62, ರಾಯಚೂರು 48, ಉಡುಪಿ 43, ಮೈಸೂರು 42, ಶಿವಮೊಗ್ಗ 42, ಚಿಕ್ಕಬಳ್ಳಾಪುರ 39, ಹಾಸನ 31, ಕೊಪ್ಪಳ 27, ತುಮಕೂರು 26, ಕೋಲಾರ 24, ದಾವಣಗೆರೆ 20, ಬೆಂಗಳೂರು ಗ್ರಾಮಾಂತರ 19, ಕೊಡಗು 15, ಗದಗ 14, ಚಾಮರಾಜನಗರ 13, ಉತ್ತರ ಕನ್ನಡ 12, ಹಾವೇರಿ 12, ಚಿಕ್ಕಮಗಳೂರು 10, ಬಾಗಲಕೋಟೆ 7, ಮಂಡ್ಯ 4, ರಾಮನಗರ 3 ಮತ್ತು ಬೆಳಗಾವಿಯಲ್ಲಿ 2 ಪ್ರಕರಣಗಳು ಬೆಳಕಿಗೆ ಬಂದಿವೆ.

 

ರಾಜ್ಯದಲ್ಲಿ ಇಂದು 693 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 22,746 ಸಕ್ರಿಯ ಪ್ರಕರಣಗಳಿವೆ. 532 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಚೆಲ್ಲಾಟ ನಡೆಸಿದೆ,ಇಂದು ಭಾನುವಾರ ಒಂದೇ ದಿನ ಈ ಮಹಾಮಾರಿ ವೈರಸ್ ಮೂವರ ಬಲಿ ಪಡೆದಿದೆ.

ಕೊರೋನಾ ಸೊಂಕಿಗೆ ಮರಣ ಹೊಂದಿರುವ ಮೂವರ ಕುರಿತ ಮಾಹಿತಿ.ಇಲ್ಲಿದೆ ನೋಡಿ

೧. ಅಥಣಿ – ಪುರುಷ(62)

೨. ಶಿವಬಸವನಗರ, ಬೆಳಗಾವಿ- ಮಹಿಳೆ(80)

೩. ವಿಜಯನಗರ, ಬೆಳಗಾವಿ – ಪುರುಷ(57)

 


Spread the love

About Laxminews 24x7

Check Also

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಜೀವ ಉಳಿಸಿ ದೇವರಾದ ವೋಟ್ ಮಾಡಲು ಬಂದ ಡಾಕ್ಟರ್

Spread the love ಬೆಂಗಳೂರು: ಮತದಾನ ಮಾಡಲು ಬಂದಿದ್ದ ಮತದಾರರೊಬ್ಬರಿಗೆ ಹೃದಯಾಘಾತವಾಗಿದ್ದು (Cardiac arrest), ಈ ವೇಳೆ ಅಲ್ಲಿಯೇ ಇದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ