Breaking News
Home / ರಾಜಕೀಯ / ಫಲಾನುಭವಿಗಳಿಗೆ ಬೇಸಿಗೆ ಶಾಕ್! ಶೇಕಡಾ 20ರಷ್ಟು ಮಂದಿಗೆ ಬಂದಿದೆ ಫುಲ್ ಬಿಲ್​!

ಫಲಾನುಭವಿಗಳಿಗೆ ಬೇಸಿಗೆ ಶಾಕ್! ಶೇಕಡಾ 20ರಷ್ಟು ಮಂದಿಗೆ ಬಂದಿದೆ ಫುಲ್ ಬಿಲ್​!

Spread the love

ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Govt) ಗ್ಯಾರಂಟಿಗಳಲ್ಲಿ (Congress Guarantee) ಗೃಹಜ್ಯೋತಿ ಯೋಜನೆಯೂ (Gruha Jyothi Yojana) ಒಂದು. ಬೇಸಿಗೆ ಬಿಸಿಲು ಹೆಚ್ಚಾಗ್ತಿದ್ದಂತೆ ಜನರಿಗೆ ಕರೆಂಟ್‌ ಶಾಕ್ (Current Shock) ಸಿಕ್ಕಿದೆ. ಹೌದು ಗೃಹಜ್ಯೋತಿ ಗುಂಗಲ್ಲಿರುವ ಜನರಿಗೆ ಬೇಸಿಗೆ ಕಾಲ (Summer) ಶಾಕ್ ಕೊಟ್ಟಿದೆ.

ಕಳೆದ ತಿಂಗಳು ಲೆಕ್ಕಕ್ಕೂ ಮೀರಿ ವಿದ್ಯುತ್ ಬಳಸಿರುವ ಹಿನ್ನೆಲೆ ಫಲಾನುಭವಿಗಳ ಪೈಕಿ ಶೇಕಡಾ 20 ರಷ್ಟು ಮಂದಿ ಸಂಪೂರ್ಣ ಬಿಲ್ ಪಾವತಿ ಟೆನ್ಷನ್‌ ಶುರುವಾಗಿದೆ. ಬೇಸಿಗೆ ಗುಂಗಲ್ಲಿ ಬೇಕಾಬಿಟ್ಟಿ ವಿದ್ಯುತ್ (Electricity) ಬಳಸಿರುವ ಪರಿಣಾಮ ಶೇಕಡಾ 20 ರಷ್ಟು ಗ್ರಾಹಕರು ಫುಲ್ ಬಿಲ್ ಪಾವತಿ ಮಾಡುವಂತಾಗಿದೆ.

200 ಯೂನಿಟ್ ಗಡಿದಾಟಿ ಕರೆಂಟ್ ಬಳಕೆ

Gruha Jyothi ಫಲಾನುಭವಿಗಳಿಗೆ ಬೇಸಿಗೆ ಶಾಕ್! ಶೇಕಡಾ 20ರಷ್ಟು ಮಂದಿಗೆ ಬಂದಿದೆ ಫುಲ್ ಬಿಲ್​!ರಾಜ್ಯದಲ್ಲಿ ಅಂದಾಜು 1.20 ಕೋಟಿ ಮಂದಿ ಗೃಹಜ್ಯೋತಿ ಅರ್ಹತೆ ಪಡೆದುಕೊಂಡಿದ್ದಾರೆ. ಈ ಪೈಕಿ ಶೇಕಡಾ 20ರಷ್ಟು ಮಂದಿಗೆ ಬೇಸಿಗೆ ಆರಂಭದಲ್ಲೇ ಫುಲ್ ಬಿಲ್ ಬರೋದಕ್ಕೆ ಶುರುವಾಗಿದೆ. ಎಸಿ, ಫ್ಯಾನ್, ಕೂಲರ್ ಹಾಗೂ ಇತರೆ ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ವಿದ್ಯುತ್ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಡಿದಾಟಿ ಕರೆಂಟ್ ಬಳಕೆಯಾಗುತ್ತಿದೆ. ಹೀಗಾಗಿ ಸಂಪೂರ್ಣ ಬಿಲ್ ಪಾವತಿ ಮಾಡಬೇಕಿರುವ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ.

ವಿದ್ಯುತ್ ಬಳಕೆ 330 ರಿಂದ 340 ಲಕ್ಷ ಯೂನಿಟ್‌ಗೆ ಏರಿಕೆ

ರಾಜ್ಯದ ಪ್ರತಿ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ದಿನ ಅಂದಾಜು 300 ಲಕ್ಷ ಯೂನಿಟ್ ಕರೆಂಟ್ ಬಳಕೆಯಾಗುತ್ತಿದೆ. ಆದರೆ ಗೃಹಜ್ಯೋತಿ ಫಲಾನುಭವಿಗಳು 200 ಯೂನಿಟ್‌ಗೂ ಮೀರಿ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ 330 ರಿಂದ 340 ಲಕ್ಷ ಯೂನಿಟ್‌ಗೆ ಏರಿಕೆ ಆಗುವ ಸಾಧ್ಯತೆಯಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ