Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಊರಿನ ಸುತ್ತಲೂ ಕ್ರಷರ್ ಮಷಿನ್‌ಗಳ ಕರ್ಕಶ ಧ್ವನಿ. ದೂಳಿನ ಹಾವಳಿ.

ಊರಿನ ಸುತ್ತಲೂ ಕ್ರಷರ್ ಮಷಿನ್‌ಗಳ ಕರ್ಕಶ ಧ್ವನಿ. ದೂಳಿನ ಹಾವಳಿ.

Spread the love

ಚಿಕ್ಕೋಡಿ: ಊರಿನ ಸುತ್ತಲೂ ಕ್ರಷರ್ ಮಷಿನ್‌ಗಳ ಕರ್ಕಶ ಧ್ವನಿ. ದೂಳಿನ ಹಾವಳಿ. ಗ್ರಾಮದೊಳಗೆ ತಿಪ್ಪೆಗಳ ಸಾಲು. ಗ್ರಾಮ ಪಂಚಾಯಿತಿ ಕಚೇರಿ ಹತ್ತಿರವೇ ಕಸದ ರಾಶಿ. ತ್ಯಾಜ್ಯ ವಿಲೇವಾರಿ ಘಟಕದ ಬಳಿಯಂತೂ ಕಸವೋ ಕಸ.

ವೀಳ್ಯದೆಲೆಗೆ ಪ್ರಸಿದ್ಧವಾದ ತಾಲ್ಲೂಕಿನ ಜೈನಾಪೂರ ಗ್ರಾಮದ ಸದ್ಯದ ನೋಟವಿದು.

ಅಂದಾಜು 8,000 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 3 ವಾರ್ಡ್‌ಗಳಿದ್ದು, 10 ಸದಸ್ಯರಿದ್ದಾರೆ. ಈ ಪಂಚಾಯಿತಿ ವ್ಯಾಪ್ತಿಯ ತೋರಣಹಳ್ಳಿ ಗ್ರಾಮದಲ್ಲಿ 5,000 ಜನಸಂಖ್ಯೆ ಇದ್ದು, 6 ಸದಸ್ಯರಿದ್ದಾರೆ.

ಜೈನಾಪೂರದಲ್ಲಿ ತಿಪ್ಪೆಗಳು ಮಾತ್ರವಲ್ಲ; ಚರಂಡಿಗಳನ್ನು ಶುಚಿಗೊಳಿಸಿ ಎಷ್ಟೋ ವರ್ಷಗಳು ಗತಿಸಿವೆ. ಇಲ್ಲಿ ಜನ ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ. ಪಂಚಾಯಿತಿ ಕಚೇರಿ, ಸ್ಮಶಾನ, ಕೆರೆ ಮುಂತಾದ ಕಡೆ ಕಸದ ರಾಶಿಯೇ ತುಂಬಿಕೊಂಡಿವೆ. ಪ್ರಸಿದ್ಧ ತೋರಣಹಳ್ಳಿ ಹನುಮಾನ್‌ ದೇವಸ್ಥಾನಕ್ಕೆ ಹೋಗುವ ದಾರಿಯುದ್ದಕ್ಕೂ ತಿಪ್ಪೆಗಳ ರಾಶಿ ಇದೆ. ಸಹಜವಾಗಿಯೇ ಸೊಳ್ಳೆಗಳ ಕಾಟ ವಿಪರೀತವಾಗಿದೆ.

ತಿಪ್ಪೆ ತೆರವು ಮಾಡುವಂತೆ ನೋಟಿಸ್‌ ನೀಡಿದರೂ ಜನ ತೆರವು ಮಾಡಿಲ್ಲ ಎನ್ನುವುದು ಇಲ್ಲಿನ ‍ಪಿಡಿಒ ಅವರ ಉತ್ತರ.

ಕೋಟ್ಯಂತರ ಹಣ ಸುರಿದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಆದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಗ್ರಾಮ ಪಂಚಾಯಿತಿಗೆ ಸೇರಿದ 23 ಸಾರ್ವಜನಿಕ ಕೊಳವೆ ಬಾವಿಗಳಿದ್ದು, ಐದು ಮಾತ್ರ ಬಳಕೆಯಲ್ಲಿವೆ. ‌ಊರ ಕೆರೆ ಬತ್ತಿದ್ದು ಅಂತರ್ಜಲ ಕುಸಿದಿದೆ. ನೀರಿಗಾಗಿ ಜನರು ಟ್ಯಾಂಕರ್‌ಗೆ ಕಾಯಬೇಕು ಅಥವಾ ತೋಟಪಟ್ಟಿಗಳಿಗೆ ಅಲೆಯಬೇಕು.

ಶೌಚಾಲಯಕ್ಕೂ ನೀರಿಲ್ಲ: ಅಲ್ಲಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರೆ, ನೀರಿನ ಸಂಪರ್ಕವಿಲ್ಲ. ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಊರಾಚೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಅದಕ್ಕೆ ಹಾಕಿದ ಬೀಗವೂ ತುಕ್ಕು ಹಿಡಿದಿದೆ. ಯಾವ ಉದ್ದೇಶಕ್ಕೆ ಇದನ್ನು ನಿರ್ಮಿಸಲಾಗಿದೆ ಎಂಬುದನ್ನು ಈ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಮರೆತೇ ಬಿಟ್ಟಿದ್ದಾರೆ ಎಂಬುದು ಜನರ ದೂರು.

ಕ್ರಷರ್‌ ಸಂಕಷ್ಟ: ಊರಿನ ತುಂಬ ಕ್ರಷರ್‌ ಯಂತ್ರಗಳ ಸದ್ದೇ ಹೆಚ್ಚು. ಇದರಿಂದ ದೂಳು ಇಡೀ ಊರನ್ನು ಆವರಿಸಿ, ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ.

 

ಚಿಕ್ಕೋಡಿ: ಗ್ರಾಮದ ಸುತ್ತ ಸಮಸ್ಯೆಗಳ ಹುತ್ತ, ಕಣ್ತೆರೆದು ನೋಡದ ಅಧಿಕಾರಿಗಳು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ