Breaking News
Home / ರಾಜಕೀಯ / ಟಿಪ್ಪು ಅವತಾರವೇ ಸಿದ್ದು – ಮತ್ತೆ ವಿವಾದವೆಬ್ಬಿಸಿದ ಯತ್ನಾಳ್‌!

ಟಿಪ್ಪು ಅವತಾರವೇ ಸಿದ್ದು – ಮತ್ತೆ ವಿವಾದವೆಬ್ಬಿಸಿದ ಯತ್ನಾಳ್‌!

Spread the love

ಬೆಂಗಳೂರು : ಶಾಲಾಕಾಲೇಜುಗಳಲ್ಲಿ ಹಿಜಾಬ್‌ (Hijab) ನಿರ್ಬಂಧಿಸಿ ಬಿಜೆಪಿ (BJP) ಸರ್ಕಾರದಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದಪಡಿಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಕ್ರಮಕ್ಕೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ (Basanagowda patil yatnal) ಕಿಡಿಕಾಡಿದ್ದಾರೆ.

ಟಿಪ್ಪು ಸುಲ್ತಾನ್‌ (Tippu sultan) ಪುನರಾವತಾರವೇ ಸಿಎಂ ಸಿದ್ದರಾಮಯ್ಯ ಆಗಿದ್ದು, ಈ ನಿರ್ಧಾರದಲ್ಲಿ ಆಶ್ಚರ್ಯವೇನಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಾಲೆಗಳಲ್ಲಿ ಸಮಾನತೆ ಇರಲಿ ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸದಂತೆ ಆದೇಶ ಹೊರಡಿಸಿತ್ತೇ ಹೊರತು ಹಿಜಾಬ್‌ ನಿಷೇಧಿಸರಲಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಸಮವಸ್ತ್ರದ ಕಾಯಿದೆ ಮಾಡಿದ್ದೇ ಈ ಉದ್ದೇಶದಿಂದ ಎಂದು ಯತ್ನಾಳ್‌ ಹೇಳಿದ್ದಾರೆ.

ನಾಳೆ ಹಿಂದೂ ಸಮುದಾಯದ ಹುಡುಗರು ಕೇಸರಿ ಶಾಲು ಧರಸಿ ಬಂದರೆ ಸಂಘರ್ಷಕ್ಕೆ ದಾರಿಯಾಗಲಿದೆ ಎಂದು ಯತ್ನಾಳ್‌ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ