Home / Uncategorized / ಹೆಸರಿಡದ ಸಿನಿಮಾಗೆ ದೊಡ್ಮನೆ ಕುಡಿ ರೆಡಿ: ಧೀರೇನ್ ರಾಮ್‌ಕುಮಾರ್ ಕಟ್ಟುಮಸ್ತ್‌ ದೇಹ ನೋಡಿ

ಹೆಸರಿಡದ ಸಿನಿಮಾಗೆ ದೊಡ್ಮನೆ ಕುಡಿ ರೆಡಿ: ಧೀರೇನ್ ರಾಮ್‌ಕುಮಾರ್ ಕಟ್ಟುಮಸ್ತ್‌ ದೇಹ ನೋಡಿ

Spread the love

ಡಾ.ರಾಜ್​ ಕುಮಾರ್​ ಕುಟುಂಬದ ಮೂರನೇ ತಲೆಮಾರಿನ ಕುಡಿ ಧೀರೇನ್ ರಾಮ್‌ಕುಮಾರ್ ಸದ್ಯ ತಮ್ಮ ಎರಡನೇ ಸಿನಿಮಾದ ಸಿದ್ಧತೆಯಲ್ಲಿದ್ದಾರೆ.

2020ರಲ್ಲಿ ಶಿವ 143 ಎಂಬ ಚಿತ್ರದಿಂದ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ದೊಡ್ಮನೆ ಕುಡಿ ಧೀರೇನ್ ರಾಮ್‌ಕುಮಾರ್ ಬಾಡಿ ಬಿಲ್ಡ್ ಮಾಡಿರುವ ಫೋಟೊಗಳು ಇದೀಗ ಚಿತ್ರರಂಗದಲ್ಲಿ ಸುದ್ದಿಯಾಗುತ್ತಿದೆ.

​ಹೆಸರಿಡದ ಎರಡನೇ ಸಿನಿಮಾಗೆ ಭರ್ಜರಿಯಾಗಿ ತಯಾರಾಗಿದ್ದಾರೆ.

 ಧೀರೇನ್ ರಾಮ್‌ಕುಮಾರ್ಇವರ ಮೊದಲ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದರು. ಜಯಣ್ಣ ಭೋಗೆಂದ್ರ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಈ ಚಿತ್ರದಲ್ಲಿ ಧೀರೇನ್ ರಾಮ್ ಚೆನ್ನಾಗಿ ಅಭಿನಯಿಸಿದರೂ ಕೂಡ ಯಾಕೋ ಕನ್ನಡ ಸಿನಿಪ್ರೇಮಿಗಳು ಧೀರೇನ್ ರಾಮ್ ಕುಮಾರ್ ಅವರನ್ನು ಅಷ್ಟೊಂದು ಒಪ್ಪಿಕೊಂಡಿರಲಿಲ್ಲ.

ಈ ಚಿತ್ರದ ನಂತರ ಧೀರೇನ್ ರಾಮ್ ಒಳ್ಳೆ ಕಥೆ ಜತೆಗೆ ತಮ್ಮನ್ನು ತಾವು ಇನ್ನೂ ಮೇಕ್ ಓವರ್ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು‌. ಈಗ ಬಹಳ ದಿನಗಳ ನಂತರ ಧೀರೇನ್ ರಾಮ್ ವಾಹ್ ಅನಿಸುವಂತೆ ಬಾಡಿ ಬಿಲ್ಡ್ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ‌. ಧೀರೇನ್ ರಾಮ್ ಹೆಸರಿಡದ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‌ಭರ್ಜರಿ, ಬಹದ್ದೂರ್ ಮತ್ತು ಜೇಮ್ಸ್‌ನಂತಹ ಚಿತ್ರಗಳಿಂದ ತನ್ನದೇ ಬೇಡಿಕೆ ಹೊಂದಿರುವ ಚೇತನ್ ಕುಮಾರ್ ಪವರ್ ಸ್ಟಾರ್ ಬಳಿಕ ದೊಡ್ಮನೆಯ ಕುಡಿಗೆ ಆಯಕ್ಷನ್ ಕಟ್ ಹೇಳಲಿದ್ದಾರೆ‌.

 ಧೀರೇನ್ ರಾಮ್‌ಕುಮಾರ್ಹೀಗಾಗಿ ಧೀರೇನ್ ರಾಮ್ ಕುಮಾರ್ ಸತತ ಆರು ತಿಂಗಳು ಜಿಮ್​ನಲ್ಲಿ ಬೆವರು ಸುರಿಸಿ ಸಖತ್ ಬಾಡಿ ಬಿಲ್ಡ್ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್​ಗೆ ಪರ್ಸನಲ್ ಜಿಮ್ ಟ್ರೈನರ್​ ಆಗಿದ್ದ ಶುಭಾಕರ್​ ಶೆಟ್ಟಿ ಧೀರೇನ್ ರಾಮ್ ಕುಮಾರ್ ಟ್ರೈನ್ ಮಾಡುವ ಮೂಲಕ ಒಬ್ಬ ಯೂತ್ ಹೀರೋಗೆ ಬೇಕಾಗುವ ಕಟ್ಟು ಮಸ್ತಾದ ದೇಹ ಬಿಲ್ಡ್ ಮಾಡಿದ್ದಾರೆ.

ಸದ್ಯ ನಿರ್ದೇಶಕ ಚೇತನ್ ಪ್ರಸ್ತುತ ನಟ ರಕ್ಷ್​ ರಾಮ್ ಅವರೊಂದಿಗೆ ಬರ್ಮಾ ಎಂಬ ಶೀರ್ಷಿಕೆಯ ಸಿನಿಮಾ ಮಾಡುತ್ತಿದ್ದಾರೆ. ಕಮರ್ಷಿಯಲ್ ಎಂಟರ್‌ ಟೈನರ್‌ನ ಮೊದಲ ಶೆಡ್ಯೂಲ್ ಇತ್ತೀಚೆಗೆ ಮಂಗಳೂರಿನಲ್ಲಿ ಮುಗಿಸಿದ್ದಾರೆ‌. ಈ ಸಿನಿಮಾ ಮುಗಿದ ನಂತರ ಧೀರೆನ್ ರಾಮ್ ಕುಮಾರ್ ಹಾಗು ನಿರ್ದೇಶಕ ಚೇತನ್ ಕುಮಾರ್ ಸಿನಿಮಾ ಶುರುವಾಗಲಿದೆ. ಧೀರೇನ್​ ಅವರ ಎರಡನೇ ಚಿತ್ರವು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿದ್ದು ಮುಂದಿನ ವರ್ಷ ಧೀರೇನ್ ರಾಮ್ ಕುಮಾರ್ ಚಿತ್ರ ಸೆಟ್ಟೇರಲಿದೆ. ಇನ್ನು ಈ ಚಿತ್ರದ ನಾಯಕಿ, ಯಾವ ನಿರ್ಮಾಣ ಸಂಸ್ಥೆ, ಯಾರೆಲ್ಲ ತಾಂತ್ರಿಕ ವರ್ಗದವರು ಕಲಾವಿದರು ಇರಲಿದ್ದಾರೆ ಅನ್ನೋದು ಸದ್ಯದಲ್ಲೇ ಬಹಿರಂಗವಾಗಲಿದೆ.


Spread the love

About Laxminews 24x7

Check Also

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

Spread the love ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ