Breaking News
Home / ರಾಜಕೀಯ / ಮಹಿಳಾ ಮೀಸಲಾತಿ ಯುಪಿಎ ಸರ್ಕಾರದ ಕೂಸು, ಬಿಜೆಪಿ ಮಾಡಿರುವುದರಲ್ಲಿ ವಿಶೇಷ ಏನೂ ಇಲ್ಲ: ಸಚಿವ ಕೆ ಎಚ್ ಮುನಿಯಪ್ಪ

ಮಹಿಳಾ ಮೀಸಲಾತಿ ಯುಪಿಎ ಸರ್ಕಾರದ ಕೂಸು, ಬಿಜೆಪಿ ಮಾಡಿರುವುದರಲ್ಲಿ ವಿಶೇಷ ಏನೂ ಇಲ್ಲ: ಸಚಿವ ಕೆ ಎಚ್ ಮುನಿಯಪ್ಪ

Spread the love

ಕೋಲಾರ: ಮಹಿಳಾ ಮೀಸಲಾತಿ ವಿಚಾರವಾಗಿ ಈ ಹಿಂದೆ ಯುಪಿಎ ಸರ್ಕಾರ ಇದ್ದಾಗಲೇ ಅಂಗೀಕಾರಕ್ಕೆ ಮುಂದಾಗಿದ್ದೆವು. ಆದರೆ ಕೆಲವರ ವಿರೋಧ ಇದ್ದ ಕಾರಣ ಅನುಮೋದನೆ ಸಿಗಲಿಲ್ಲ ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ವಿಚಾರವಾಗಿ ಕೋಲಾರದ ಕುರುಡುಮಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಚಾರ ಯುಪಿಎ ಸರ್ಕಾರ ಇದ್ದಾಗಲೇ ಚಿಂತನೆ ಮಾಡಿದ್ದೆವು. ಇದು ನಮ್ಮ ಕೂಸು. ಮಹಿಳಾ ಮೀಸಲಾತಿ ಕುರಿತಾಗಿ 10 ವರ್ಷಗಳ ಹಿಂದೆ ಚಿಂತನೆ ಮಾಡಿದ್ದೆವು. ಈಗ ಬಿಜೆಪಿ ಸರ್ಕಾರ ಮಾಡುತ್ತಿರುವುದರಲ್ಲಿ ವಿಶೇಷ ಏನೂ ಇಲ್ಲ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನದ ಹಕ್ಕು ಇರಬೇಕು ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಈ ದೇಶದಲ್ಲಿ ಮಹಿಳೆಯರು ಪುರುಷರು ಸಮಾನಾಗಿ ಬದುಕು ಬೇಕೆಂಬ ಗಾಂಧೀಜಿಯವರ ಕನಸು ಆಗಿತ್ತು. ಯುಪಿಎ ಸರ್ಕಾರ ಇದ್ದಾಗ ಮಹಿಳಾ ಮೀಸಲಾತಿಗೆ ಪೂರಕವಾಗಿ ಮನಮೋಹನ ಸಿಂಗ್, ಸೋನಿಯಾ ಗಾಂಧಿ ಸಾಕಷ್ಟು ಪ್ರಯತ್ನ ಮಾಡಿದ್ದರು ಎಂದು ಹೇಳಿದರು.

ಸಮಾನತೆಯ ದೃಷ್ಟಿಯಿಂದ ಮಹಿಳಾ ಮೀಸಲಾತಿ ಅಂಗೀಕಾರ ಮಾಡಿರುವುದು ಸ್ವಾಗತಾರ್ಹ ಎಂದ ಅವರು, ಇನ್ನೂ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಹೈಕಮಾಂಡ್ ನಿರ್ಧಾರ. ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಕಾಂಗ್ರೆಸ್​ ಹೈಕಮಾಂಡ್ ಸೂಚಿಸಿದರು. ಅದರಂತೆ ದೇವನಹಳ್ಳಿಯಿಂದ ಸ್ಪರ್ಧೆ ಮಾಡಿದೆ, ಜನಾಶೀರ್ವಾದ ಸಿಕ್ಕು ಗೆಲುವು ಸಾಧಿಸಿದ ಹಿನ್ನೆಲೆ ಸಚಿವ ಸ್ಥಾನವೂ ದೊರಕಿದೆ. ಹೀಗಾಗಿ ಮುಂದೆ ಹೈಕಮಾಂಡ್ ಏನು ಹೇಳಿದ್ರೂ ಅದನ್ನು ಪಾಲನೆ ಮಾಡುತ್ತೇನೆ ಎಂದು ಮುನಿಯಪ್ಪ ತಿಳಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ