Breaking News
Home / ರಾಜಕೀಯ / ರಾಜ್ಯದ ಎಲ್ಲ ವಾಹನಗಳು ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್​ ಪ್ಲೇಟ್‌ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ

ರಾಜ್ಯದ ಎಲ್ಲ ವಾಹನಗಳು ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್​ ಪ್ಲೇಟ್‌ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ

Spread the love

ಸುಳ್ಯ (ದಕ್ಷಿಣಕನ್ನಡ) : ಕರ್ನಾಟಕ ಸಾರಿಗೆ ಇಲಾಖೆಯು ಸಾರ್ವಜನಿಕವಾಗಿ ಸೂಚನೆಯೊಂದನ್ನು ಹೊರಡಿಸಿದ್ದು, ಕೂಡಲೇ ಸಾರ್ವಜನಿಕರು ಪಾಲಿಸುವಂತೆ ಮನವಿ ಮಾಡಿದೆ.

ಎಲ್ಲ ವಾಹನಗಳ ಮಾಲೀಕರು, ಕರ್ನಾಟಕ ಸರ್ಕಾರ ದಿನಾಂಕ 17-08-2023 ರಂದು ರಾಜ್ಯ ರಸ್ತೆ ಸುರಕ್ಷತಾ ಮತ್ತು ಸಾರಿಗೆ ಆಯುಕ್ತರ ಮೂಲಕ ಹೊರಡಿಸಿದ ಅಧಿಸೂಚನೆಯಂತೇ ಆದೇಶ ಸಂಖ್ಯೆ.TD 193 TDO 2021, ಮತ್ತು ಸುತ್ತೋಲೆ ಸಂಖ್ಯೆ.CT/RGN-1/PR-434/ 2022-23, ಪ್ರಕಾರ ರಾಜ್ಯದ ಎಲ್ಲ ವಾಹನಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೇಲರ್, ಟ್ರ್ಯಾಕ್ಟರ್ ಸೇರಿದಂತೆ ಎಲ್ಲಾ ವಾಹನಗಳ ಮೇಲೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (ಎಚ್‌ಎಸ್‌ಆರ್‌ಪಿ) ಅಳವಡಿಸುವಿಕೆ ಕಡ್ಡಾಯ ಮಾಡಲಾಗಿದೆ.

ಕರ್ನಾಟಕದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ನಂತರದಲ್ಲಿ ನೋಂದಾಯಿಸಲ್ಪಟ್ಟ ಬಹುತೇಕ ವಾಹನಗಳಲ್ಲಿ ಈ ನಂಬರ್ ಪ್ಲೇಟ್ ಇದೆ ಎನ್ನಲಾಗಿದೆ. ಆದರೆ, ಅದಕ್ಕೆ ಮೊದಲು ನೋಂದಾಯಿತವಾಗಿರುವ ಹಳೆಯ ಮತ್ತು ಅಸ್ತಿತ್ವದಲ್ಲಿರುವ ವಾಹನಗಳಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ಆದೇಶ ನೀಡಲಾಗಿದೆ.

ಹಳೆಯ ವಾಹನಗಳ ಮೇಲೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಏನು ಮಾಡಬೇಕು

  • https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಮತ್ತು ಕ್ಲಿಕ್ ಮಾಡಿ.
  • ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
  • ನಿಮ್ಮ ವಾಹನದ ವಿವರಗಳನ್ನು ಭರ್ತಿ ಮಾಡಿ.
  • ಎಚ್‌ಎಸ್‌ಆರ್‌ಪಿ ಜೋಡಣೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಡೀಲರ್‌ಗಳ ಸ್ಥಳವನ್ನು ಆಯ್ಕೆಮಾಡಿ.
  • HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಮಾಡಬೇಕಾಗಿಲ್ಲ.
  • ವಾಹನ ಮಾಲೀಕರ ಮೊಬೈಲ್‌ಗೆ OTP ಕಳುಹಿಸಲಾಗುತ್ತದೆ.
  • ನಿಮ್ಮ ಅನುಕೂಲಕ್ಕೆ ತಕ್ಕಂತೆ ನಂಬರ್‌ ಪ್ಲೇಟ್‌ ಅಳವಡಿಸುವಿಕೆಯ ದಿನಾಂಕ ಮತ್ತು ಸಮಯ ಆಯ್ಕೆಮಾಡಿ.
  • ನಿಮ್ಮ ಯಾವುದೇ ವಾಹನ ತಯಾರಕ ಅಥವಾ ನಂಬರ್‌ ಪ್ಲೇಟ್‌ ಮಾಡಿಸುವ ಡೀಲರ್‌ಗಳನ್ನೂ ಭೇಟಿ ಮಾಡಬಹುದು.
  • ಎಚ್‌ಎಸ್‌ಆರ್‌ ನಂಬರ್ ಪ್ಲೇಟ್ ಜೋಡಣೆಗಾಗಿ,ಆನ್ಲೈನ್ ಕಚೇರಿ ಅಥವಾ ಮನೆಯಿಂದಲೂ ಅರ್ಜಿ ಸಲ್ಲಿಸಬಹುದು.
    ಗಮನಿಸಬೇಕಾದ ಅಂಶಗಳು
  • ನಿಮ್ಮ HSRP ಅನ್ನು https://transport.karnataka.gov.in ಅಥವಾ www.siam.in ಮೂಲಕ ಮಾತ್ರವೇ ಬುಕ್ ಮಾಡಿ.
  • ಅನುಕರಣೆ HSRP / ಒಂದೇ ರೀತಿಯ ಪ್ಲೇಟ್‌ಗಳು / ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಂಟಿಸಬೇಡಿ. ಉದಾಹರಣೆಗೆ ನಕಲಿ ಹೊಲೊಗ್ರಾಮ್ / IND ಗುರುತು / INDIA ಅನ್ನುವ ಗುರುತುಗಳನ್ನು ಸರಿಯಾಗಿ ಗಮನಿಸಿ.
  • ಯಾವುದೇ ಮುಕ್ತ ಮಾರುಕಟ್ಟೆ, ರಸ್ತೆ ಬದಿಯ ಮಾರಾಟಗಾರರಿಂದ ನಂಬರ್ ಪ್ಲೇಟ್ ಖರೀದಿಸಬೇಡಿ ಅದು ಖಂಡೀತಾ ಎಚ್‌ಎಸ್‌ಆರ್‌ಪಿ ಆಗಿರಲ್ಲಾ. ವಾಹನಗಳ ಮಾಲೀಕತ್ವ, ವಿಳಾಸ ಬದಲಾವಣೆ, HPA HPT, ಫಿಟ್ನೆಸ್ ಸೇರಿದಂತೆ ಯಾವುದೇ ಬದಲಾವಣೆಗಳನ್ನು ಪ್ರಾದೇಶಿಕ ಆರ್‌ಟಿಓ ಕಚೇರಿಯಲ್ಲಿ ಮಾಹಿತಿ ನೀಡದೇ ಮಾಡಲು ಅನುಮತಿಸಲಾಗುವುದಿಲ್ಲ.
  • ಎಚ್‌ಎಸ್‌ಆರ್‌ಪಿ ಅಳವಡಿಕೆಯು ನಿಮ್ಮ ಅಪಾಯಿಂಟ್‌ಮೆಂಟ್ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ. ಎಚ್‌ಎಸ್‌ಆರ್‌ ನಂಬರ್ ಪ್ಲೇಟ್ ಜೋಡಣೆಯ ಅಂತಿಮ ದಿನಾಂಕವು 17.11.2023 ಆಗಿದ್ದು ತಕ್ಷಣವೇ ಅರ್ಜಿ ಸಲ್ಲಿಸಲು ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ