Breaking News
Home / ರಾಜಕೀಯ / ಸರ್ಕಾರಕ್ಕೆ ಧಮ್ಮು, ತಾಕತ್ತು ಎರಡೂ ಇಲ್ಲ: H.D.K.

ಸರ್ಕಾರಕ್ಕೆ ಧಮ್ಮು, ತಾಕತ್ತು ಎರಡೂ ಇಲ್ಲ: H.D.K.

Spread the love

ಬೆಂಗಳೂರು: ಮಣ್ಣಿನ ಮಕ್ಕಳಿಂದ‌ ಕಾವೇರಿಗೆ ದ್ರೋಹ ಆಗಿರೋದು ಅಂತ ಹೇಳಿದ್ದಾರೆ. ಎರಡು ವರ್ಷ ಸಿಎಂ ಆಗಿ ಮನೆಗೆ ಹೋಗುವಾಗ ಸಂಬಳ ಕೊಡಲು ವೆಸ್ಟ್‌ ಬೆಂಗಾಲ್‌ ಪಿಯರ್‌ಲೆಸ್‌ನಿಂದ ಸಾಲ ತಂದು ರಾಜ್ಯವನ್ನು ಅಡ ಇಟ್ಟ ಮಹಾನುಭಾವ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ನಿನ್ನೆಯ ದಿನ ನೆಲಮಂಗಲದಲ್ಲಿ ರಾಜ್ಯದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದಾರೆ. ಓಹೋ ಇವರು ಕವಿಸರ್ವೋತ್ತೋಮರು, ರಾಮಾಯಣದ ಮಹಾನ್ವೇಷಣೆ ಮಾಡಿದವರು. ಕಾವೇರಿ ಟ್ರಿಬ್ಯುನಲ್ ರಚಿಸುವಾಗ ಈ ಮಹಾನುಭಾವನ ಕೊಡುಗೆ ಏನು?. ದೇವೇಗೌಡರನ್ನು ಸೋಲಿಸಿ ಮನೆಗೆ ಕಳಿಸಿದ್ರಲ್ಲ ಇವರ ಕೊಡುಗೆ ಏನು?. ಇವರಿಂದ ಹೇಳಿಸಿಕೊಳ್ಳಬೇಕಾ ನಾವು. ಪಾಪ ಅವರನ್ನು ಕರೆಸಿ ಕೂರಿಸಿಕೊಂಡು ಸಲಹೆ ಪಡೆದುಕೊಳ್ಳಿ ಎಂದು ಕಾಂಗ್ರೆಸ್​ ನಾಯಕರಿಗೆ ಹೇಳಿದರು.

ನಮ್ಮ ಕುವೆಂಪುಗಿಂತ ಮೇಲ್ದರ್ಜೆಯ ಮಹಾನ್ವೇಷಣೆ ಮಾಡಿದವರಲ್ಲವೇ?. ಅಂತಹ ಮಹಾನುಭಾವರನ್ನು ಇಟ್ಕೊಂಡು ನಾವೇನು ಸಲಹೆ ಕೊಡೋದು. ಇವತ್ತು ನಮ್ಮನ್ನು ಕರೆದು ಏನ್‌ ಸಲಹೆ ಕೇಳುತ್ತಿರೀ, ನಮ್ಮ ಅವಶ್ಯಕತೆ ಇಲ್ಲ, ಯಾವ ಯಾವ ಸಂದರ್ಭದಲ್ಲಿ ಆ ಮಹಾನುಭಾವನಿಂದ ಏನೇನಾಯ್ತು. ಧರ್ಮಸಿಂಗ್ ಅವರಿಗೆ ದಾರಿ ತಪ್ಪಿಸಿದ್ದ ಈ ವ್ಯಕ್ತಿಯನ್ನು ಇಟ್ಟುಕೊಳ್ಳಿ ಎಂದು ಕಿಡಿಕಾರಿದರು.

ಈ ಸರ್ಕಾರಕ್ಕೆ ನಾಡಿನ ಜನರ ಹಿತರಕ್ಷಣೆಯ ತಿಳುವಳಿಕೆಯೂ ಇಲ್ಲ. ತಾಕತ್ತು ಇಲ್ಲ, ಧಮ್ಮು ಇಲ್ಲ. ಬೆಂಗಳೂರಿಗೆ ಕುಡಿಯುವ ನೀರು ಎಲ್ಲಿಂದ ತಂದು ಕೊಡುತ್ತಾರೆ ಎಂದು ಪ್ರಶ್ನಿಸಿದರು. ತಮಿಳುನಾಡಿನಲ್ಲಿ ಎಷ್ಟು ಎಕರೆ ಬೆಳೆ ಬೆಳೆದಿದ್ದಾರೆ, ಎಷ್ಟು ನೀರು ಬಿಟ್ರು ಅಂತ ಅಲ್ಲಿ ಮನದಟ್ಟು ಮಾಡಬೇಕಲ್ಲವೆ?. ಹಿಂದೆ ಕಾವೇರಿ ವಾಟರ್ ಮ್ಯಾನೇ‌ಜ್‌ಮೆಂಟ್ ಬೋರ್ಡ್ ಮಾಡುವಾಗ ಪ್ರತಿಭಟಿಸಿದ್ದೇವೆ. ಸಂಕಷ್ಟ‌ದ ಬಗ್ಗೆ ತೀರ್ಮಾನ ಮಾಡದೆ ಪದೇ ಪದೆ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಆಗುತ್ತಿದೆ. ನನಗೆ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗಿಲ್ಲ. ಹದಿನೈದು ದಿನಗಳ ಹಿಂದೆಯೇ ಹಾಸನ ಕಾರ್ಯಕ್ರಮ‌ ನಿಗದಿಯಾಗಿತ್ತು. ನಾನು ಇವತ್ತು ಸರ್ವಪಕ್ಷ ಸಭೆಗೆ ಭಾಗಿಯಾಗಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ