Breaking News
Home / ರಾಜಕೀಯ / ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ .. ಭಯ ಬೇಡ, ಜಾಗ್ರತೆಯಿರಲಿ ಎಂದ ಸಿಎಂ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ .. ಭಯ ಬೇಡ, ಜಾಗ್ರತೆಯಿರಲಿ ಎಂದ ಸಿಎಂ

Spread the love

ಬೆಂಗಳೂರು : ರಾಜ್ಯಾದ್ಯಂತ ಕಳೆದ ಕೆಲವು ದಿನಗಳ ಅವಧಿಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ. ಡೆಂಗ್ಯೂ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಜೌಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ ಎಂದು ಸಿಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿ. ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಡೆಂಗ್ಯೂ ಬಗ್ಗೆ ಭಯ ಬೇಡ. ಜಾಗ್ರತೆಯಿರಲಿ ಎಂದು ಸಾರ್ವಜನಿಕರಿಗೆ ಸಿಎಂ ಸಲಹೆ ನೀಡಿದ್ದಾರೆ.

ವಿವಿಧ ರೀತಿಯ ಲಕ್ಷಣಗಳು : ಸೊಳ್ಳೆ ಕಡಿತದ ನಂತರ 3-14 ದಿನಗಳಲ್ಲಿ ಡೆಂಗ್ಯೂ ಸೋಂಕು ಕಾಣಿಸಿಕೊಳ್ಳಬಹುದು. ಇದರಲ್ಲಿ ಪ್ರಾರಂಭಿಕ, ಗಂಭೀರ ಹಾಗೂ ಗುಣಮುಖ ಎಂಬ ಹಂತಗಳಿರುತ್ತವೆ. ಮೊದಲ ಹಂತದಲ್ಲಿ 5 ದಿನಗಳು ಹಾಗೂ ಗಂಭೀರ ಹಂತದಲ್ಲಿ 2-3 ದಿನಗಳಿರುತ್ತವೆ.

ರೋಗಪತ್ತೆ ಹೇಗೆ?: ಜ್ವರ ಕಾಣಿಸಿಕೊಂಡ ನಂತರ ಎಸ್‌ಎಸ್‌1 ಆಂಟಿಜೆನ್‌ ಪರೀಕ್ಷೆಯನ್ನು ನಡೆಸಬೇಕು. ಒಂದು ವೇಳೆ ಫಲಿತಾಂಶ ಧನಾತ್ಮಕವಾದರೆ, ರೋಗಿಗೆ ಡೆಂಗ್ಯೂ ಬಂದಿದೆ ಎಂದರ್ಥ. ಒಂದು ವೇಳೆ ಇದು 5 ದಿನಗಳ ನಂತರ ಆಗಿದ್ದರೆ, ಐಜಿಎಂ ಆಂಟಿಬಾಡಿ ಟೆಸ್ಟ್‌ ಮಾಡಿಸಬೇಕು. ಏಕೆಂದರೆ, ಎಸ್‌ಎಸ್‌1 ಆಂಟಿಜೆನ್‌ ಈ ಹಂತದಲ್ಲಿ ಗೋಚರಿಸದು. ಒಂದು ವೇಳೆ ಐಜಿಎಂ ಧನಾತ್ಮಕವಾದರೆ, ಡೆಂಗ್ಯೂ ಇನ್ನೂ ಇದೆ ಎಂದರ್ಥ. ಕ್ಷಿಪ್ರ ರೋಗಪತ್ತೆ ಪರೀಕ್ಷೆಗಳಲ್ಲಿ ಡೆಂಘಿ ಧನಾತ್ಮಕವಾಗಿದ್ದರೂ, ದೃಢಪಡಿಸಿಕೊಳ್ಳಲು ನಿಗದಿತ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲೇಬೇಕು. ಅವಶ್ಯ ಬಿದ್ದರೆ, ಐಜಿಜಿ ಆಂಟಿಬಾಡಿ ಪರೀಕ್ಷೆಯನ್ನು ನಡೆಸಬೇಕು. ಈ ಮುಂಚೆ ಡೆಂಘಿ ಬಾಧಿತರಾಗಿದ್ದರೆ, ಇದು ಧನಾತ್ಮಕವಾಗಿರುತ್ತದೆ. ಅಂದರೆ, ಡೆಂಘಿ ಎರಡನೇ ಅಥವಾ ಮೂರನೇ ಸಲ ಬಂದಿದೆ ಎಂದರ್ಥ. ಇಂತಹ ಡೆಂಗ್ಯೂ ಅಪಾಯಕಾರಿಯಾಗಿರುವುದರಿಂದ, ಐಜಿಜಿ ಪರೀಕ್ಷೆಯನ್ನು ಹೆಚ್ಚಿನ ಎಚ್ಚರಿಕೆಯಿಂದ ನಡೆಸಬೇಕು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ