Breaking News
Home / ರಾಜಕೀಯ / 14 ದಸರಾ ಗಜಪಡೆಗೆ ವಿಮೆ; ಸೆಪ್ಟೆಂಬರ್ 1ರಿಂದ ಆಕ್ಟೋಬರ್ ಅಂತ್ಯದವರೆಗೆ ವಿಮೆ ಅವಧಿ

14 ದಸರಾ ಗಜಪಡೆಗೆ ವಿಮೆ; ಸೆಪ್ಟೆಂಬರ್ 1ರಿಂದ ಆಕ್ಟೋಬರ್ ಅಂತ್ಯದವರೆಗೆ ವಿಮೆ ಅವಧಿ

Spread the love

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸುವ 14 ಗಜಪಡೆಗೆ ಹಾಗೂ ಮಾವುತರು, ಕಾವಾಡಿಗರು ಹಾಗೂ ಆನೆ ಜೊತೆ ಇರುವ ಅರಣ್ಯ ಸಿಬ್ಬಂದಿಗೆ ಮುಂಜಾಗೃತಾ ಕ್ರಮವಾಗಿ ವಿಮೆ ಮಾಡಿಸಲಾಗಿದೆ. ಇದು ಸೆಪ್ಟೆಂಬರ್ 1ರಿಂದ ಆಕ್ಟೋಬರ್ ಅಂತ್ಯದವರೆಗೆ ವಿಮೆ ಚಾಲ್ತಿಯಲ್ಲಿರುತ್ತದೆ.

ಪ್ರತಿ ವರ್ಷ ಮುಂಜಾಗೃತಾ ಕ್ರಮವಾಗಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಗೆ, ಮಾವುತರಿಗೆ ಹಾಗೂ ಕಾವಾಡಿಗರಿಗೆ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಮೆ ಮಾಡಿಸಲಾಗುತ್ತದೆ. ಈಗಾಗಲೇ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ 9 ಗಜಪಡೆ ಜೊತೆಗೆ ಎರಡನೇ ಹಂತದಲ್ಲಿ ಆಗಮಿಸುವ 5 ಗಜಪಡೆಗೆ ಈ ವಿಮೆ ಮಾಡಿಸಲಾಗಿದೆ. ವಿಮೆಯಲ್ಲಿ 14 ಆನೆಗಳು, 14 ಮಾವುತರು, 14 ಮಂದಿ ಕಾವಾಡಿಗರು, 6 ಮಂದಿ ವಿಶೇಷ ಮಾವುತರು, ಅರಣ್ಯಾಧಿಕಾರಿಗಳಾದ ಆರ್​ಎಫ್‌ಓ, ಡಿಆರ್​ಎಫ್​ಓ, ಪಶುವೈದ್ಯರು, ಸಹಾಯಕರು ಸೇರಿದಂತೆ ಇತರ ಸಿಬ್ಬಂದಿಗೆ ಮುಂಜಾಗೃತಾ ಕ್ರಮವಾಗಿ ಸೆಪ್ಟೆಂಬರ್ 1ರಿಂದ ಆಕ್ಟೋಬರ್ ಅಂತ್ಯದವರೆಗೆ ಅನ್ವಯವಾಗುವ ರೀತಿ, ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿಯಿಂದ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದರು.

 14 ದಸರಾ ಗಜಪಡೆಗೆ ವಿಮೆ

ಗಜಪಡೆಯ ವಿಮೆ ಮೊತ್ತ ಎಷ್ಟು?: ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಒಟ್ಟು 14 ಆನೆಗಳ ಪೈಕಿ, 10 ಗಂಡಾನೆ 4 ಹೆಣ್ಣಾನೆಗಳಿಗೆ ವಿಮೆ ಮಾಡಿಸಲಾಗಿದೆ. ಪ್ರತಿ ಗಂಡಾನೆಗೆ 5 ಲಕ್ಷ, ಹೆಣ್ಣಾನೆಗಳಿಗೆ 4.50 ಲಕ್ಷ‌ ರೂ. ಹಾಗೂ ಮಾವುತರು, ಕಾವಾಡಿಗರು, ಸಿಬ್ಬಂದಿಗೆ 2 ಲಕ್ಷ ರೂ. ಇದರ ಜೊತೆಗೆ ಆಸ್ತಿ ಹಾಗೂ ಜೀವ ಹಾನಿಗೆ 50 ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. ಈ ವಿಮೆ ಸೆಪ್ಟೆಂಬರ್ 1ರಿಂದ ಜಂಬೂಸವಾರಿ ಮುಗಿಯುವವರೆಗೂ ಅಂದರೆ, ಆಕ್ಟೋಬರ್ 26ರವರೆಗೆ ಗಜಪಡೆ ಮರಳಿ ಕಾಡಿಗೆ ಹೋಗುವವರೆಗೂ ವಿಮೆ ಚಾಲ್ತಿಯಲ್ಲಿರುತ್ತದೆ.

 ಸೆಪ್ಟೆಂಬರ್ 1ರಿಂದ ಆಕ್ಟೋಬರ್ ಅಂತ್ಯದವರೆಗೆ ವಿಮೆ ಅವಧಿ

14 ಆನೆಗಳಲ್ಲಿ 10 ಗಂಡಾನೆಗೆ 50 ಲಕ್ಷ ರೂ., ನಾಲ್ಕು ಹೆಣ್ಣಾನೆಗಳಿಗೆ 18 ಲಕ್ಷ ರೂ. ಆಸ್ತಿ ಮತ್ತು ಜೀವ ಹಾನಿಗೆ ೫೦ ಲಕ್ಷ ರೂ. ಇದರ ಜೊತೆಗೆ ಮಾವುತರು, ಕಾವಾಡಿಗರು, ವಿಶೇಷ ಮಾವುತರು, ಅರಣ್ಯ ಇಲಾಖೆಯ ಸಿಬ್ಬಂದಿ, ಮೇಲುಸ್ತುವಾರಿ ಸಿಬ್ಬಂದಿ ಸೇರಿದಂತೆ ಇತರ 42 ಮಂದಿಗೆ ತಲಾ 2 ಲಕ್ಷದಂತೆ 84 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆ ಮಾವುತರು, ಕಾವಾಡಿಗರು, ಅರಣ್ಯ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಒಟ್ಟಾಗಿ 2.02 ಕೋಟಿ ರೂಪಾಯಿ ವಿಮೆಯನ್ನು ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪನಿಯಿಂದ ಮಾಡಿಸಲಾಗಿದೆ ಎಂದು ಡಿಸಿಎಫ್ ಸೌರವ್ ಕುಮಾರ್ ತಿಳಿಸಿದ್ದಾರೆ.

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ