Breaking News
Home / ರಾಜಕೀಯ / ಸಮಾಜ ಮುಖಿ ಸಂತ ಶ್ರೇಷ್ಠ ಶ್ರೀ ತರಳಬಾಳು ಶ್ರೀಗಳಿಗೆ ಆದಿಕವಿ ಪ್ರಶಸ್ತಿ

ಸಮಾಜ ಮುಖಿ ಸಂತ ಶ್ರೇಷ್ಠ ಶ್ರೀ ತರಳಬಾಳು ಶ್ರೀಗಳಿಗೆ ಆದಿಕವಿ ಪ್ರಶಸ್ತಿ

Spread the love

ವಿದ್ವತ್ ಪೂರ್ಣ ಸಮಾಜ ಮುಖಿ ಸಂತ ಶ್ರೇಷ್ಠ ಶ್ರೀ ತರಳಬಾಳು ಮಹಾಗುರು ಹಾಗೂ ಜನರ ಮನದ ಆರಾಧ್ಯರಿಗೆ ಪ್ರಶಸ್ತಿ ನೀಡಿ ಪುರಸ್ಕಾರದ ಘನತೆ ಹೆಚ್ಚಿಸಿಕೊಂಡ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ವಾರ್ಷಿಕ ಆದಿ ಕವಿ ಪ್ರಶಸ್ತಿ ನೀಡಲು ಚಿತ್ರದುರ್ಗ ಜಿ¯್ಲÉ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಆಯ್ಕೆ ಮಾಡಿರುವುದು ಒಂದು ಸಂತಸದ ವಿಚಾರ.

ಪ್ರಶಸ್ತಿಗಾಗಿ ಅರ್ಜಿ ಹಾಕಿ, ಶಿಫಾರಸ್ಸಿಗಾಗಿ ದುಂಬಾಲು ಬಿದ್ದು , ಒಲೈಕೆಯ ಮೂಲಕ ಪುರಸ್ಕಾರಕ್ಕೆ ಭಾಜನರಾಗಿ ಅದರ ನೆಪವಾಗಿ ನಿತ್ಯವೂ ಸನ್ಮಾನ್ಯ ಗಿಟ್ಟಿಸಿಕೊಳ್ಳುವವರ ನಡುವೆ ಜಾತಿ, ಧರ್ಮ, ರಾಜಕೀಯದ ಕರಾಳ ಹಸ್ತಕ್ಷೇಪ ಆಕ್ರಮಣದಲ್ಲಿ ಮೌಲ್ಯ ಕಳೆದುಕೊಂಡಿರು ಪ್ರಸ್ತುತ ದಿನಮಾನಗಳಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವಾರ್ಷಿಕ ಆದಿ ಕವಿ ಪ್ರಶಸ್ತಿಯನ್ನು ತರಳಬಾಳು ಶ್ರೀಗಳಿಗೆ ಘೋಷಿಸುವ ಮೂಲಕ ಪರಿಷತ್ತಿಗೆ ಹಾಗೂ ಪ್ರಶಸ್ತಿಗೆ ಹೆಚ್ಚು ಗೌರವ ಬಂದಂತಾಗಿದೆ.

ಸಮಾಜಮುಖಿ ಕೈಂಕರ್ಯಗಳಲ್ಲಿ ಶಿಕ್ಷಣಮುಖಿ ಸಮಾಜಮುಖಿ ರೈತಮುಖಿಯಾಗಿ ಶರಣರ ವಚನ ಪ್ರಭೆಯನ್ನು ಜಗದಾದ್ಯಂತ ಸಾರಿ ವಿದ್ವತ್ ಪ್ರಭೆಯನ್ನು ದೇಶದ ಶ್ರೇಷ್ಠ ಬಹು ಭಾಷಾ ಪಂಡಿತರಾಗಿ ನೊಂದ ಮನಗಳಿಗೆ ಸಾಂತ್ವನದ ನ್ಯಾಯಧೀಶರಾಗಿ ದೇಶ ಕಂಡ ಶ್ರೇಷ್ಠ ದಾರ್ಶನಿಕರಾಗಿ ನಾಲ್ಕು ದಶಕಗಳಿಂದಲೂ ಸದ್ದು ಗದ್ದಲವಿಲ್ಲದೆ ಸರ್ವವನ್ನು ಸಮ ಸಮಾಜದ ಉತ್ಕøಷ್ಠಾಭಿವೃದ್ಧಿಗೆ ಅಹರ್ನಿಶಿ ಕಾಯಕ ಬದ್ದರಾಗಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರದು ಸಾರ್ಥಕ ಸಮಾಜಸೇವೆಯ ದೀಕ್ಷಾ ತಪೋಜೀವನವಾಗಿದೆ.

ನಾಲ್ಕು ದಶಕದಿಂದಲೂ ಪ್ರತಿ ದಿನ 16 ರಿಂದ 18 ಗಂಟೆ ಕರ್ತವ್ಯ ಮಗ್ನರಾಗಿರುವ ಅವರ ದಿನಚರಿಗೆ ಬೆಕ್ಕಸ ಬೆರಗಾಗಲೇ ಬೇಕು. ಪ್ರಾತಃಕಾಲ ದೀರ್ಘ ವಾಯು ವಿಹಾರದೊಂದಿಗೆ ಆರಂಭವಾಗಿ ಧ್ಯಾನ, ಇಷ್ಠಲಿಂಗ ಪೂಜೆ ದಿನದ ತ್ರಿಕಾಲವೂ ತಪಸ್ಸಿನಂತೆ ನಿಷ್ಠರಾಗಿರುವ ಶ್ರೀ ಜಗದ್ಗುರುಗಳು ಮಿತ ಪ್ರಸಾದಿಗಳು. ಎಲ್ಲಾ ದಿನಚರಿಯ ನಂತರ ವಿಶ್ರಾಂತಿ ಬಯಸುವುದು ನಡು ರಾತ್ರಿ ದಾಗ.

ನೂರಾರು ದೇಶಗಳ ಅಂತಾರಾಷ್ಟೀಯ ಧಾರ್ಮಿಕ ವಿಚಾರ ಸಂಕೀರ್ಣಗಳಲ್ಲಿ ಭಾರತ ದೇಶದ ಧಾರ್ಮಿಕ ಪ್ರತಿನಿಧಿಯಾಗಿ ವಿದೇಶಗಳ ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವ ಧಾರ್ಮಿಕ, ವೈಚಾರಿಕ, ಶೈಕ್ಷಣಿಕ, ಶಾಂತಿ, ಭಯೋತ್ಪಾದನೆ, ಮತ್ತು ಅಂತಾರಾಷ್ಟೀಯ ಜ್ವಲಂತ ಸಮಸ್ಯೆಗಳ ಪರಿಹಾರ ವಿಚಾರ ಸಂಕೀರ್ಣಗಳ ನೇತೃತ್ವವಹಿಸಿ ಸಮಕಾಲೀನ ಜÁಗತಿಕ ಸಮಸ್ಯೆಗಳಿಗೆ ಜರ್ಮನ್, ಫ್ರೆಂಚ್, ಇಂಗ್ಲಿಷ್,ಹಿಂದಿ, ತಮಿಳು, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ವಿಷಯ ಮಂಡಿಸಿದ ಬಹುಭಾಷಾ ವಿದ್ವಾಂಸರಾಗಿ ತಮ್ಮ ವಿದ್ವತ್ಪೂರ್ಣ ಸಂದೇಶಗಳನ್ನು ವಿಶ್ವಕ್ಕೆ ಸಾರಿ ಶಾಂತಿಧೂತರೆನಿಸಿದ್ದಾರೆ.

ಮಹಿಳೆಯರ ಕಲ್ಯಾಣಾಭಿವೃದ್ಧಿಗಾಗಿ ಎರಡುಸಾವಿರ ಸ್ವಸಹಾಯ ಸಂಘಗಳ ಸ್ಥಾಪನೆ, ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯಲ್ಲಿ ಸ್ಥಾಪನೆ. ಸದ್ಧರ್ಮ ನ್ಯಾಯಪೀಠ ಸ್ಥಾಪಿಸಿ ನೊಂದವರಿಗೆ ಸಾಂತ್ವನ , ಪಾನ ನಿಷೇಧ ಆಂದೋಲನ, 421 ಹಳ್ಳಿಗಳಲ್ಲಿ 4426 ಶೌಚಾಲಯಗಳ ನಿರ್ಮಾಣ, 1980 ರ ದಶಕದಲ್ಲಿ ಕೂಡಲ ಸಂಗಮದ ಅಳಿವು ಉಳಿವಿನ ಸ್ಥಿತಿ ನಿರ್ಮಾಣವಾದಾಗ ಕೂಡಲಸಂಗಮದ ಪುನರುಜ್ಜೀವನಕ್ಕೆ ಅಂದಿನ ರಾಷ್ಟ್ರಪತಿಯವರಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಯೋಜನೆಯ ಲೋಪಗಳನ್ನು ಅಮೂಲಾಗ್ರವಾಗಿ ಮನವರಿಕೆ ಮಾಡಿ ಕೂಡಲ ಸಂಗಮದ ಇಂದಿನ ಉಚ್ಛ್ರಾಯ ಸ್ಥಿತಿಗೆ ಹಗಲಿರುಳು ಶ್ರಮ ಪಟ್ಟು ಬಸವಾಸ್ಮಿತೆಯನ್ನು ಶಾಶ್ವತವಾಗಿಸಿದ ಮಹಾಗುರು.

ಇಪ್ಪತ್ತಕ್ಕೂ ಹೆಚ್ಚು ಮಲಿಕ ಕೃತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ರಚಿಸಿ, ಸಂಪಾದಿಸಿ, ಸಾಹಿತ್ಯ ಲೋಕದ ಅನಘ್ರ್ಯ ಕವಿ ಹೃದಯ ಸಂಪನ್ನರಾಗಿ ನೂರಾರು ಅಮೂಲ್ಯ ಕೃತಿಗಳ ಪ್ರಕಟಣೆಗೆ ಪ್ರೋತ್ಸಾಹಿಸಿ, ಬಿಸಿಲು ಬೆಳದಿಂಗಳು ಅಂಕಣ ಬರಹದ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಎಲ್ಲ ವರ್ಗದ ಓದುಗರ, ಸಾಹಿತಿಗಳ, ಚಿಂತಕರ, ರಾಜಕಾರಣಿಗಳಿಂದ ಮಾನ್ಯರಾಗಿದ್ದಾರೆ.

ಬಸವಣ್ಣನವರ ಸಂಪೂರ್ಣ ವಚನಗಳನ್ನು ಮೂರು ದಶಕಗಳ ಹಿಂದೆಯೇ ಇಂಟರ್ ನೆಟ್ ನಲ್ಲಿ ಅಳವಡಿಸಿ ವಿಶ್ವಾದ್ಯಂತ ವಚನಗಳು ಮತ್ತು ಅದರ ಸ್ವಾರಸ್ಯಾರ್ಥವನ್ನು ಸರಳವಾಗಿ ವಿಶ್ಲೇಷಿಸಿ ವಚನ ಗಣಕ ಸಂಪುಟ ಹಾಗೂ ಸಂಸ್ಕøತ ಮಹಾಕವಿ ಪಾಣಿನಿಯ ಅಷ್ಟಾಧ್ಯಾಯಿ ವ್ಯಾಕರಣ ಗ್ರಂಥವನ್ನು ಗಣಕಾಷ್ಟಾಧ್ಯಾಯವಾಗಿಸಿ ವಚನಸುಧೆಯನ್ನು ವಿಶ್ವವಿದ್ವಾಂಸರಿಗೆ ಇಂಟರ್‍ನೆಟ್‍ನಲ್ಲಿ ಉಣಬಡಿಸಿ ಪ್ರಥಮ ಗಣಕ ಋಷಿ ಎಂದೇ ಖ್ಯಾತಿಯಾಗೊಳಿಸಿದ್ದಾರೆ. ಬಸವಣ್ಣನವರನ್ನು ನಿಜರ್ಥದಲ್ಲಿ ವಿಶ್ವಗುರುವಾಗಿಸಿದ ಕರ್ಮಯೋಗಿಗಳಾಗಿದ್ದಾರೆ.

ಬಸವಣ್ಣನವರ ತತ್ವ ಪ್ರಸಾರಕ್ಕೆ ನೂರಾರು ಕಾರ್ಯಕ್ರಮಗಳು, ಸಾಹಿತ್ಯ ಕೃತಿಗಳ ರಚನೆ,ಶರಣರ ಸಿದ್ದಾಲ್ಲಾತಗಳನ್ನು ನಾಟಕಗಳ ಮೂಲಕ ದೇಶದಲ್ಲಿಯೇ ಮೊದಲ ಪ್ರಯೋಗವೆಂಬಂತೆ ಅಭಿವ್ಯಕ್ತಿಗೊಳಿಸಿದ್ದಾರೆ. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ರಾಜ್ಯದ 14 ಜಿ¯ಲ್ಲಾಗಳಲ್ಲಿ 250 ಕ್ಕೂ ಹೆಚ್ಚು
ಸಂಸ್ಥೆಗಳಲ್ಲಿ 45000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದಯಪಾಲಿಸುವ ವಿದ್ಯಾ ಸಂತರಾಗಿದ್ದಾರೆ.

#ರೈತ ಮೆಚ್ಚಿದ ತರಳಬಾಳು ಶ್ರೀ ಗಳು :
ಅನ್ನದಾತರ ಹಿತಕ್ಕಾಗಿ ಜಗಳೂರು, ಚನ್ನಗಿರಿ, ದಾವಣಗೆರೆ, ತರೀಕೆರೆ, ಹಳೇಬೀಡು, ಭರಮಸಾಗರ, ಸಿರಿಗೆರೆ, ವ್ಯಾಪ್ತಿಯ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಬರದ ನಾಡಿನ ಭಗೀರಥರಾಗಿರೆನಿಸಿದ್ದಾರೆ. ರೈತ ಸಮುದಾಯ ಅತ್ಯಂತ ಶೋಷಣೆಯಲ್ಲಾ ಬದುಕುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ ಆನೆಯ ಹೊಟ್ಟೆಗೆ ಅರೆಕಾಸಿ ಮಜ್ಜಿಗೆ ಎಂಬಂತಾಗಿರುವಾಗ ರೈತರಿಗೆ ಬೆಳದಿಂಗಳಾಗಿ ಬಂದ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು 2016ರ ಸೆಪ್ಟಂಬರ್ 19 ರಂದು ಬೆಳೆ ಪರಿಹಾರ ಸಂವಾದ ಏರ್ಪಡಿಸಿ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ಒದಗಿಸುವ ಬೆಳೆ ವಿಮಾ ಕಂಪನಿಗಳ ಬೇಜವಬ್ದಾರಿತನದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ರೈತರ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡುವ ದೇಶದ¯್ಲÉ ಪ್ರಪ್ರಥಮ ಹಾಗೂ ಮಾದರಿ ಯೋಜನೆಯನ್ನು ಕರ್ನಾಟಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸರ್ಕಾರದ ಅಧಿಕಾರಿಗಳ ತಂಡದೊಂದಿಗೆ ಸ್ವತಃ ಕಾರ್ಯ ನಿರ್ವಹಿಸಿ ಭೂಮಿ ಆನ್ ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಿದ ಕೀರ್ತಿ ಸಲ್ಲುತ್ತದೆ.

1980ರಿಂದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಲಾ ಸಂಘಕ್ಕೆ ಹೊಸ ರೂಪನೀಡಿ ನುರಿತ ರಂಗಕರ್ಮಿಗಳಿಂದ ವೈಚಾರಿಕ ಹಾಗೂ ತಾತ್ವಿಕ ನಾಟಕಗಳನ್ನು ಸಿದ್ದಗೊಳಿಸಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರೀ ಮಠವು ನಾಲ್ಕು ದಶಕಗಳಿಂದಲೂ ಸಿರಿಗೆರೆಯಲ್ಲಿ ಪ್ರತಿ ವರ್ಷ ವೀರಗಾಸೆ, ಭಜನೆ, ಸೋಬಾನೆ ಮೇಳಗಳನ್ನು ಜಾನಪದ ಸಿರಿ ಸಂಭ್ರಮ 2017ರಲ್ಲಿ ಯುವ ಜನಾಂಗಕ್ಕೆ ಪರಿಚಯಿಸುವ ಮಹಾಮಣಿಹವನ್ನು ಶ್ರೀ ಗಳು ಕೈಗೊಂಡು ಯಶಸ್ವಿಯಾಗಿಗಿದ್ದಾರೆ.

ಗಗನಂ ಗಗನಾಕಾರಂ, ಸಾಗರಂ ಸಾಗರೋಪಮಃ |
ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ-
ಆಕಾಶ, ಆಕಾಶದ ಹಾಗೆ,ಸಮುದ್ರ ಸಮುದ್ರದ ಹಾಗೆ,
ರಾಮ-ರಾವಣರ ಯುದ್ಧ, ರಾಮ-ರಾವಣರ ಯುದ್ಧದ ಹಾಗೆ-

ಎಂದು ಹೇಳುವ ಹಾಗೆ ಡಾ.ಶ್ರೀ ಶಿವಮೂರ್ತಿ ಶಿವಾಚರ್ಯ ಮಹಾಸ್ವಾಮಿಗಳವರು ಹೇಗೆ ಎಂದು ಕೇಳಿದರೆ ಡಾ.ಶ್ರೀ ಶಿವಮೂರ್ತಿ ಶಿವಾಚರ್ಯ ಮಹಾಸ್ವಾಮಿಗಳವರು ಹಾಗೆಯೆ ಎಂದು ಹೇಳಬೇಕು ಅಷ್ಟೆ. ಅವರನ್ನು ಅವರ ಹಾಗೆ, ಇವರ ಹಾಗೆ ಎಂದೂ ಹೋಲಿಸಿ ಹೇಳಲು ಸಾಧ್ಯವಿಲ್ಲ ಪೂಜ್ಯರ ಸಮಾಜ ಜೀವನ, ವಿದ್ವತ್ತು, ವ್ಯಕ್ತಿತ್ವ, ಲೋಕಮುಖಿ ಸಾಧನೆಗೆ ಪರ್ಯಾಯ ಹೋಲಿಕೆ ಇಲ್ಲವೇ ಇಲ್ಲ !!

#ಬಸವರಾಜ ಸಿರಿಗೆರೆ, ಶಿವಮೊಗ್ಗ


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ