Breaking News
Home / ರಾಜಕೀಯ / ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ಮೋಸ

ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ಮೋಸ

Spread the love

ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ಮೋಸಗೈದಿರುವ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಹೇಳಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಕಂಕನವಾಡಿ, ಈರಣ್ಣ ಕೌಜಲಗಿ, ಅಪ್ಪಾಸಾಹೇಬ್ ಇಂಚಲ್, ಸುನೀಲ ದೊಡಮನಿ ಅವರನ್ನು ಬಂಧನ ಮಾಡಲಾಗಿದೆ.

ಅಲ್ಲದೇ, ಬಬಲೇಶ್ವರದ ರೈತ ಚಂದ್ರಶೇಖರ ಕನ್ನೂರ ಅವರಿಗೆ ನಾಲ್ವರು ಮೋಸ ಮಾಡಿದ್ದಾರೆ . ವೈಟ್ ಮನಿ ನೀಡಿದ್ರೇ ದುಪ್ಪಟ್ಟು ಹಣದ ಆಸೆ ತೋರಿಸಿದ್ದಾರೆ. ಇದನ್ನು ನಂಬಿ ರೈತ ಅವರಿಗೆ 20 ಲಕ್ಷ ನೀಡುತ್ತಾನೆ ಹಣ ತೆಗೆದುಕೊಂಡು ಖಾಲಿ ಪೇಪರ್ ಹಾಗೂ ನೋಟ್‌ಬುಕ್‌ ಹಾಕಿ ಪ್ಯಾಕ್ ಮಾಡಿದ ಒಂದು ರಟ್ಟಿನ ಬಾಕ್ಸ್ ತೋರಿಸಿ ಅದರಲ್ಲಿ ಒಂದು ಕೋಟಿ ಇದೆ ಎಂದು ನಂಬಿಸಿ 20 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ.

ಸಿಇಎನ್ ಪೊಲೀಸ ಠಾಣಾ ಇನ್ಸ್‌ಪೆಕ್ಟರ್ ರಮೇಶ ಅವಜಿ ನೇತೃತ್ವದ ತಂಡದವರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ . ಅದಕ್ಕಾಗಿ ಹಣದ ಆಸೆಗಾಗಿ ಜನತೆ ಮೋಸ ಹೋಗಬಾರದು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೊಲೀಸ ಠಾಣೆ ಅಥವಾ 112ಗೆ ಸಂಪರ್ಕಿಸಿ ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ