Home / ಜಿಲ್ಲೆ / ಬೆಳಗಾವಿ / ವಂಟಮುರಿ ಕಾಲೋನಿಯಲ್ಲಿ ಆಶ್ರಯ ಯೋಜನೆ ಕಾಲೋನಿ ನಿವಾಸಿಗಳ ಸಂಘದ ವತಿಯಿಂದ ವಿಭಿನ್ನ ರೀತಿಯಲ್ಲಿ ಬಸವ ಪಂಚಮಿ ಆಚರಿಸಲಾಯಿತು

ವಂಟಮುರಿ ಕಾಲೋನಿಯಲ್ಲಿ ಆಶ್ರಯ ಯೋಜನೆ ಕಾಲೋನಿ ನಿವಾಸಿಗಳ ಸಂಘದ ವತಿಯಿಂದ ವಿಭಿನ್ನ ರೀತಿಯಲ್ಲಿ ಬಸವ ಪಂಚಮಿ ಆಚರಿಸಲಾಯಿತು

Spread the love

ಬೆಳಗಾವಿಯ ವಂಟಮುರಿ ಕಾಲೋನಿಯಲ್ಲಿ ಆಶ್ರಯ ಯೋಜನೆ ಕಾಲೋನಿ ನಿವಾಸಿಗಳ ಸಂಘದ ವತಿಯಿಂದ ಇಂದು ಬಸವ ಪಂಚಮಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗಿತ್ತು.
ಈ ಬಾರಿಯ ಬಸವ ಪಂಚಮಿಯನ್ನು ನಾಗದೇವತೆಗೆ ಹಾಲಿನ ಅಭಿಷೇಕದ ಬದಲು ಮಕ್ಕಳಿಗೆ ಹಾಲು, ಸಿಹಿತಿಂಡಿ ನೀಡಿ ಆಚರಿಸಲಾಯಿತು.

ಸಮಾಜದಲ್ಲಿ ದೇವರ ಹೆಸರಿನಲ್ಲಿ ಮೂಢನಂಬಿಕೆ ಹೋಗಲಾಡಿಸಲು, ಆಹಾರ ಪೋಲು ಮಾಡುವದನ್ನು ನಿಲ್ಲಿಸಲು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಗಜು ಧರನಾಯಕ್, ಸಂಸ್ಥೆಯ ಸಂಸ್ಥಾಪಕ ಅಕ್ಷಯ್ ಪಿ. ಕೋಲ್ಕಾರ,

ನಿರ್ದೇಶಕ ಅಂಜನಕುಮಾರ ಗಂದಗುದರಿ, ಉಪಾಧ್ಯಕ್ಷ ಚೆನ್ನಬಸಪ್ಪ ಟೋಪಿ, ಕಾರ್ಯದರ್ಶಿ ಪ್ರಮೋದ ಎ. ಮೇತ್ರಿ, ಅಜಿತ ಕಾಂಬಳೆ, ಸದಸ್ಯರಾದ ಜ್ಯೋತಿಪ್ರಕಾಶ ಕೋಲ್ಕಾರ, ಸುಚೇತಾ ಗಂದಗುದರಿ, ಬಾಬು ಮೇತ್ರಿ, ಮಲ್ಲಿಕಾರ್ಜುನ ತಳವಾರ, ಅಜಿಂಕ್ಯ ಮೇತ್ರಿ, ಬಾಬನ್ ಮಲೈ ಮೊದಲಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ