Home / ಜಿಲ್ಲೆ / ಬೆಳಗಾವಿ / ಬಿಜೆಪಿಯಲ್ಲಿ ಕಿರುಕುಳ ಅನುಭವಿಸುವವರು ಕಾಂಗ್ರೆಸ್​ಗೆ ಬರಬಹುದು: ಗೃಹ ಸಚಿವ

ಬಿಜೆಪಿಯಲ್ಲಿ ಕಿರುಕುಳ ಅನುಭವಿಸುವವರು ಕಾಂಗ್ರೆಸ್​ಗೆ ಬರಬಹುದು: ಗೃಹ ಸಚಿವ

Spread the love

ಬೆಳಗಾವಿ: ನಮ್ಮಲ್ಲಿಂದ ಹೋಗಿರುವ ಶಾಸಕರಿಗೆ ಬಿಜೆಪಿಯಲ್ಲಿ ಕಿರುಕುಳ ಇರೋದು ಸತ್ಯವಾದರೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ನಾವು ಯಾರಿಗೂ ಬರಬೇಡಿ ಅಂತ ಹೇಳಿಲ್ಲ. ನಮ್ಮ ಸಿದ್ಧಾಂತ ಒಪ್ಪಿ ಬರೋದಾದರೆ ಬರಲಿ ಅವರನ್ನು ಸ್ವಾಗತ ಮಾಡುತ್ತೇವೆ. ಯಾವ ಶಾಸಕರು ಬರ್ತಾರೆ ಅಂತ ನನಗೆ ಗೊತ್ತಿಲ್ಲ. ಆದರೆ, ಬರ್ತಾರೆ ಎನ್ನುವ ಮಾತಿದೆ ಬರುವವರನ್ನು ನಾವು ಕರೆದುಕೊಳ್ಳುತ್ತೇವೆ ಎಂದರು.

135 ಶಾಸಕರಿದ್ದರೂ ಬೇರೆ ಶಾಸಕರ ಅವಶ್ಯಕತೆ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವಶ್ಯಕತೆ ಪ್ರಶ್ನೆ ಅಲ್ಲ, ಅವರು ನಮ್ಮ ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ದಾಂತ ಒಪ್ಪುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರಬೇಕಾಗುತ್ತೆ ಎಂದರು. ಬಿಜೆಪಿಯಲ್ಲಿ ನಮಗೆ ಕಿರುಕುಳ ಕೊಡ್ತಿದ್ದಾರೆ ಎಂಬ ಶಿವರಾಮ್ ಹೆಬ್ಬಾರ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮಲ್ಲಿಂದ ಹೋದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ, ಅದು ಸತ್ಯವಾಗಿದ್ದರೆ ಬಿಜೆಪಿ ಬಿಟ್ಟು ಬರಬಹುದು ಎಂದು ಪರಮೇಶ್ವರ ಬಹಿರಂಗವಾಗಿ ತಮ್ಮ ಹಳೇ ಸ್ನೇಹಿತರಿಗೆ ಸ್ವಾಗತಿಸಿದರು.

ಪಕ್ಷ ಬಿಟ್ಟು ಹೋದವರು ನಿಮ್ಮನ್ನು ಸಂಪರ್ಕ ಮಾಡಿದ್ದಾರಾ ಎಂಬ ಪ್ರಶ್ನೆಗೆ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಆದರೆ, ಅಧ್ಯಕ್ಷರಿಗೆ ಸಂಪರ್ಕ ಮಾಡಿರಬಹುದು ಎಂದ ಪರಮೇಶ್ವರ್​, ಸರ್ಕಾರ ಉಳಿಸಲು ಕಾಂಗ್ರೆಸ್ ಆಪರೇಷನ್ ಅನಿವಾರ್ಯತೆ ಇದೆಯಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅನಿವಾರ್ಯತೆ ಏನಿಲ್ಲ, ನಾವೇನೂ ಯಾವುದೇ ಆಪರೇಷನ್ ಮಾಡ್ತಿಲ್ಲ. ಅವರು ರಾಜೀನಾಮೆ ಕೊಟ್ಟು ಪಕ್ಷ ಸೇರ್ತೀವಿ ಅಂದಾಗ ಬೇಡ ಎನ್ನುವುದಿಲ್ಲ ಎಂದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ