Breaking News
Home / ಅಂತರಾಷ್ಟ್ರೀಯ / ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಜಯ

ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಜಯ

Spread the love

ದುಬೈ: ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಗೆಲ್ಲಲು 173 ರನ್‌ಗಳ ಸವಾಲನ್ನು ಪಡೆದ ಚೆನ್ನೈ ಅಂತಿಮವಾಗಿ 20 ಓವರ್‌ಗಳಲ್ಲಿ 178 ರನ್‌ ಹೊಡೆಯಿತು. ಈ ಪಂದ್ಯವನ್ನು ಕೋಲ್ಕತ್ತಾ ಸೋತಿರುವ ಕಾರಣ ಪ್ಲೇ ಆಫ್‌ ಹಾದಿ ಕಠಿಣವಾಗಿದ್ದು ಉಳಿದ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.

ಚೆನ್ನೈ ಗೆದ್ದಿದ್ದು ಹೇಗೆ?
17. 2 ಓವರ್‌ ಆದಾಗ ಉತ್ತಮವಾಗಿ ಆಡುತ್ತಿದ್ದ ಋತುರಾಜ್‌ ಗಾಯಕ್‌ವಾಡ್‌ 72 ರನ್‌(53 ಎಸೆತ, 6 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರು. ಈ ವೇಳೆ ಕ್ರೀಸಿಗೆ ಬಂದ ಜಡೇಜಾ ಮೇಲೆ ದೊಡ್ಡ ಸವಾಲಿತ್ತು. ಕೊನೆಯ 12 ಎಸೆತಕ್ಕೆ 30 ರನ್‌ ಬೇಕಿತ್ತು. ಫರ್ಗ್ಯೂಸನ್‌ ಎಸೆದ 19ನೇ ಓವರ್‌ನಲ್ಲಿ ಜಡೇಜಾ ಎರಡು ಬೌಂಡರಿ, 1 ಸಿಕ್ಸರ್‌ ಹೊಡೆದರು. ಈ ಓವರಿನಲ್ಲಿ 20 ರನ್‌ ಬಂತು

ಕೊನೆಯ ಓವರ್‌ ಎಸೆಯಲು ಬಂದಿದ್ದು ನಾಗರಕೋಟಿ. ಮೊದಲ ಬಾಲಿನಲ್ಲಿ ಯಾವುದೇ ರನ್‌ ಬರಲಿಲ್ಲ. ಎರಡನೇ ಎಸೆತದಲ್ಲಿ 2 ರನ್‌ ಬಂದರೆ ಮೂರನೇ ಎಸೆತದಲ್ಲಿ ಕರ್ರನ್‌ ಒಂದು ರನ್‌ ತೆಗೆದು ಜಡೇಜಾಗೆ ಸ್ಟ್ರೈಕ್‌ ನೀಡಿದರು. 4ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. ಹೀಗಾಗಿ ಕೊನೆಯ 2 ಎಸೆತದಲ್ಲಿ 7 ರನ್‌ ಬೇಕಿತ್ತು. 5ನೇ ಎಸೆತದಲ್ಲಿ ಸಿಕ್ಸ್‌ ಬಂತು ಪಂದ್ಯ ಟೈ ಆಯಿತು. ಕೊನೆಯ ಎಸೆತವನ್ನೂ ಜಡೇಜಾ ಸಿಕ್ಸರ್‌ಗೆ ಅಟ್ಟಿ ಜಯವನ್ನು ತಂದಿಟ್ಟರು.

11 ಎಸೆತದಲ್ಲಿ 3 ಸಿಕ್ಸರ್‌, 2 ಬೌಂಡರಿಯೊದಿಗೆ ಜಡೇಜಾ 31 ರನ್‌ ಹೊಡೆದರು. ಸ್ಯಾಮ್‌ ಕರ್ರನ್‌ 13 ರನ್‌ ಹೊಡೆದರು. ಅಂಬಾಟಿ ರಾಯಡು 38 ರನ್‌(20 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರೆ ಧೋನಿ 1 ರನ್‌ ಹೊಡೆದು ಪೆವಿಲಿಯನ್‌ ಸೇರಿದರು. ಫರ್ಗ್ಯೂಸನ್‌ 4 ಓವರ್‌ ಎಸೆದು 54 ರನ್‌ ನೀಡಿ ದುಬಾರಿಯಾದರು.

ಕೋಲ್ಕತ್ತಾ ಪರ ನಿತೀಶ್‌ ರಾಣಾ 87 ರನ್‌(61 ಎಸೆತ, 10 ಬೌಂಡರಿ, 4 ಸಿಕ್ಸರ್)‌ ಹೊಡೆದರೆ ಶುಭಮನ್‌ ಗಿಲ್‌ 26 ರನ್‌ ಹೊಡೆದು ಔಟಾದರು. ಅಂತಿಮವಾಗಿ ಕೋಲ್ಕತ್ತಾ 20 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 172 ರನ್‌ ಹೊಡೆಯಿತು.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ