Breaking News
Home / ನವದೆಹಲಿ / 212 ವಿಧಾನಸಭೆ ಕ್ಷೇತ್ರಗಳು, 61 ಲೋಕಸಭೆ ಕ್ಷೇತ್ರಗಳ ಖರ್ಗೆ ಕಣ್ಣು.. ನಾಳೆ ಹೊಸ ಅಭಿಯಾನಕ್ಕೆ ಚಾಲನೆ

212 ವಿಧಾನಸಭೆ ಕ್ಷೇತ್ರಗಳು, 61 ಲೋಕಸಭೆ ಕ್ಷೇತ್ರಗಳ ಖರ್ಗೆ ಕಣ್ಣು.. ನಾಳೆ ಹೊಸ ಅಭಿಯಾನಕ್ಕೆ ಚಾಲನೆ

Spread the love

ನವದೆಹಲಿ: ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಸಾಂಪ್ರದಾಯಿಕ ದಲಿತ ಮತಬ್ಯಾಂಕ್‌ ತನ್ನತ್ತ ಸೆಳೆಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ 212 ಆಯ್ದ ವಿಧಾನಸಭೆ ಕ್ಷೇತ್ರಗಳು ಮತ್ತು 61 ಸಂಸದೀಯ ಕ್ಷೇತ್ರಗಳಲ್ಲಿ ಈ ಸಮುದಾಯವನ್ನು ಸಜ್ಜುಗೊಳಿಸಲು ಜುಲೈ 5ರಂದು ಅಭಿಯಾನ ಆರಂಭಿಸಲಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ತನ್ನ ಪ್ರಜಾಪ್ರಭುತ್ವದ ರುಜುವಾತುಗಳು ಹಾಗೂ ಅಂತರ್ಗತ ರಾಜಕೀಯದ ಸೂಚಕವಾಗಿ ದಲಿತ ನಾಯಕ ಖರ್ಗೆ ಅವರನ್ನು ಪಕ್ಷದ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿತ್ತು. ಅಧಿಕಾರ ವಹಿಸಿಕೊಂಡ ಕೂಡಲೇ ಅವರು, ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ತೆಕ್ಕೆಗೆ ಜಾರಿ ಇರುವ ಹಿಂದುಳಿದ ಸಮುದಾಯಗಳ ಮನ ಮರಳಿ ಗೆಲ್ಲಲು ದೀರ್ಘಾವಧಿಯ ಕಾರ್ಯಕ್ರಮವನ್ನು ಯೋಜಿಸುವಂತೆ ಪಕ್ಷದ ಹಿರಿಯ ಪದಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆಯೇ, ಈಗ ಕಾರ್ಯಕ್ರಮ ಸಜ್ಜಾಗಿದೆ.

”ಜುಲೈ 5ರಂದು ಖರ್ಗೆ ಅವರು ರಾಷ್ಟ್ರೀಯ ನಾಯಕತ್ವ ಅಭಿವೃದ್ಧಿ ಮಿಷನ್ (ಎಲ್‌ಡಿಎಂ) ಪ್ರಾರಂಭಿಸಲಿದ್ದಾರೆ. ಈಗಾಗಲೇ ನಾವು ಕಾರ್ಯಕ್ರಮದ ರೂಪರೇಷೆಯ ಎಲ್ಲ ಕೆಲಸ ಮಾಡಿದ್ದು, ಅದನ್ನು ಜಾರಿ ಮಾಡಲಾಗುತ್ತಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ