Breaking News
Home / ರಾಜಕೀಯ / ಆನೆದಂತ ಕಳ್ಳರ ಬಂಧನ

ಆನೆದಂತ ಕಳ್ಳರ ಬಂಧನ

Spread the love

ನಿಪ್ಪಾಣಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೌಂದಲಗಾ ಗ್ರಾಮದ ಮಾಂಗೂರು ವೃತ್ತದಲ್ಲಿ ಆನೆ ದಂತವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ಸಿಐಡಿ ತಂಡ ಬಂಧಿಸಿದೆ.

ಬಂಧಿತ ಇಬ್ಬರು ಶಂಕಿತರ ಹೆಸರುಗಳು ನಿತೀಶ ಅಂಕುಶ ರಾವುತ ( 35) ಅಹಮದನಗರದ ಜಿಲ್ಲೆಯ ಪೆಡಗಾಂವ ನಿವಾಸಿ ಮತ್ತು ಖಂಡು ಪೋಪಟ್ ರಾವುತ್ (34) ಸೋಲಾಪುರ ಜಿಲ್ಲೆಯ ಕರ್ಮಲಾ ಗ್ರಾಮದ ನಿವಾಸಿಗಳಾಗಿದ್ದು,.. ಇಬ್ಬರು ಶಂಕಿತರಿಂದ 12 ಕೆಜಿ ತೂಕದ ಆನೆ ದಂತವನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವರ್ಷದಲ್ಲಿ ಸಿಐಡಿ ತಂಡ ನಡೆಸುತ್ತಿರುವ ಮೂರನೇ ಕಾರ್ಯಾಚರಣೆ ಇದಾಗಿದೆ.
ಬಂಧಿತ ನಿತೀಶ ಮತ್ತು ಖಂಡು ಅವರು ದಂತವನ್ನು ಕಳ್ಳಸಾಗಣೆ ಮಾಡಲು ಮತ್ತು ಮಾರಾಟ ಮಾಡಲು ಹೆದ್ದಾರಿಯಲ್ಲಿರುವ ಮಾಂಗೂರ ವೃತ್ತದಲ್ಲಿ ನಿಂತಿದ್ದರು.

ಖಚಿತ ಮಾಹಿತ ಮೇರೆ ಸಿಐಡಿ ಪೊಲೀಸ್ ಮಹಾನಿರ್ದೇಶಕ ಶರಚಂದ್ರ ಕೆ. ವಿ. ಬೆಳಗಾವಿ ಸಿಐಡಿ ಅರಣ್ಯ ಇಲಾಖೆ ಉಪ ಅಧೀಕ್ಷಕ ಮುತ್ತಣ್ಣ ಸರವಗೋಳ ಅವರ ಮಾರ್ಗದರ್ಶನದಲ್ಲಿ ಎಸ್

ಸಬ್ ಇನ್ಸ್ ಪೆಕ್ಟರ್ ರೋಹಿಣಿ ಪಾಟೀಲ್ ಅವರು ಸೌಂದಲಗಾ ವ್ಯಾಪ್ತಿಯ ಮಾಂಗೂರು ವೃತ್ತದಲ್ಲಿ ನಿತೀಶ ಮತ್ತು ಖಂಡು ಬ್ಯಾಗ್‌ನಲ್ಲಿ ದಂತವನ್ನು ಇಟ್ಟುಕೊಂಡು ನಿಂತಿರುವುದು ಕಂಡುಬಂದಿದೆ. ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಪುಣೆಯಿಂದ ಆನೆ ದಂತಗಳನ್ನು ಕಳ್ಳಸಾಗಣೆ ಮಾಡಿ ಗ್ರಾಹಕರನ್ನು ಹುಡುಕಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ

.ಕಾರ್ಯಾಚರಣೆಯಲ್ಲಿ ತಂಡದ ಸಿಬ್ಬಂದಿ. ಆರ್. ಪಟೇಲ, ಕೆ. ಬಿ. ಕಂಠಿ, ಎಸ್. ಎಲ್. ನಾಯಕ, ಎಂ. ಎ. ನಾಯಕ್ಲ, ಎಸ್. ಆರ್. ಅರ್ವಿನ್ಸಿ, ಆರ್. ಬಿ. ಕವಲಿಕಟ್ಟಿ ಭಾಗವಹಿಸಿದ್ದರು


Spread the love

About Laxminews 24x7

Check Also

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಜೋಶಿ

Spread the love ಹುಬ್ಬಳ್ಳಿ : ಮುಸ್ಲಿಂ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ