Breaking News
Home / ಜಿಲ್ಲೆ / ಬೆಳಗಾವಿ / ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ವಿವಾದ

ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ವಿವಾದ

Spread the love

ಡಿ ವಿಷಯದಲ್ಲಿ ಕರ್ನಾಟಕದ ಜತೆ ಸದಾ ತಂಟೆ ತೆಗೆಯುವ ಮಹಾರಾಷ್ಟ್ರ ಸರ್ಕಾರ ಈ ಬಾರಿ ಸ್ವಲ್ಪ ಭಿನ್ನ ಹಾದಿ ಹಿಡಿದಿದೆ. ಕರ್ನಾಟಕ ವ್ಯಾಪ್ತಿಯ ಸುಮಾರು 865 ಹಳ್ಳಿಗಳಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸುವ ಮೂಲಕ ಜಾಣ ಕಾರ್ಯತಂತ್ರ ಬಳಸಲು ಮುಂದಾಗಿದೆ. ಆರೋಗ್ಯ ವಿಷಯವಾಗಿದ್ದರಿಂದ ಯಾರೂ ತಕರಾರು ತೆಗೆಯಲಾಗದು ಎಂಬುದು ಅವರ ಭಾವನೆಯಿರಬೇಕು.

ಆದರೆ ಈ ತಂತ್ರದ ಹಿಂದೆ ಬೇರೆಯದೇ ಸಂಚನ್ನು ಗುರುತಿಸಿರುವ ರಾಜ್ಯದ ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಾಗಿ ಏಕದನಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದು ಸೂಕ್ತವಾಗಿಯೇ ಇದೆ.

ಆರೋಗ್ಯ ಯೋಜನೆಗೆ ಒಳಪಡಬೇಕಾದಲ್ಲಿ ಜನರಿಂದ ಘೋಷಣಾಪತ್ರ ಪಡೆಯುವುದರ ಹಿಂದೆ ದೂರಗಾಮಿ ಉದ್ದೇಶವನ್ನು ಗಡಿ ತಜ್ಞರು ಅಂದಾಜಿಸಿದ್ದಾರೆ. ಇನ್ನೊಂದು ರಾಜ್ಯದ ಎಲ್ಲೆಯೊಳಗೆ ಬೇರೊಂದು ಸರ್ಕಾರ ಅಧಿಕೃತವಾಗಿ ಯೋಜನೆ ಘೋಷಿಸುವುದು ಹಸ್ತಕ್ಷೇಪ ಎನ್ನದೆ ವಿಧಿಯಿಲ್ಲ. ಅಷ್ಟೇ ಅಲ್ಲ, ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರವೇ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಇಂಥ ನಡೆ ಅನಪೇಕ್ಷಣೀಯ ಮಾತ್ರವಲ್ಲ, ವಿವಾದವನ್ನು ಇನ್ನಷ್ಟು ಕೆದಕುವ ಕ್ರಮವಾಗಿಯೂ ಕಾಣುತ್ತದೆ. ಕೆಲ ತಿಂಗಳ ಹಿಂದೆ ಗಡಿ ವಿವಾದ ಜೋರಾದಾಗ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಂಧಾನ ಸಭೆ ನಡೆಸಿ, ಸುಪ್ರೀಂ ಕೋರ್ಟಿನ ತೀರ್ಪು ಬರುವವರೆಗೆ ಎರಡೂ ಕಡೆಯವರು ಸಂಯಮ ವಹಿಸುವಂತೆ ಹಾಗೂ ವಿಚಾರ ವಿನಿಮಯಕ್ಕಾಗಿ ಸಚಿವರ ಸಮಿತಿ ರಚಿಸಿಕೊಳ್ಳುವಂತೆ ಸೂಚಿಸಿದ್ದರು. ಮಹಾರಾಷ್ಟ್ರ ಸರ್ಕಾರದಲ್ಲಿ ಬಿಜೆಪಿಯೂ ಪ್ರಮುಖ ಪಾಲುದಾರ ಆಗಿರುವುದರಿಂದ, ಆ ನೈತಿಕ ಹೊಣೆಯೂ ಆ ಪಕ್ಷದ ನಾಯಕರ ಮೇಲಿದೆ. ಭಾರತವು ಫೆಡರಲ್ (ಒಕ್ಕೂಟ) ಸ್ವರೂಪವನ್ನು ಹೊಂದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೂಡಿ, ಒಕ್ಕೂಟ ರಚನೆಯಾಗಿದೆ. ಎರಡು ಸರ್ಕಾರಗಳಿಗೂ ಅವುಗಳದೇ ಆದ ಅಧಿಕಾರವ್ಯಾಪ್ತಿ, ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ವಿಧಿಸಲಾಗಿದೆ. ಒಬ್ಬರ ವ್ಯಾಪ್ತಿಯಲ್ಲಿ ಮತ್ತೊಬ್ಬರ ಪ್ರವೇಶವಾಗದಂತೆ ವ್ಯವಸ್ಥೆ ಇದೆ.

ಹೀಗಿದ್ದರೂ, ನೀರು, ಗಡಿ ಇತ್ಯಾದಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ತಂಟೆತಕರಾರುಗಳು ಉಂಟಾಗುವ ಸಾಧ್ಯತೆ ಇದ್ದೇ ಇರುತ್ತದೆ. ಅಂಥ ವಿವಾದ ಉಂಟಾದಾಗ ಪರಸ್ಪರ ಮಾತುಕತೆ-ಚರ್ಚೆ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಮುಕ್ತವಾಗಿರುತ್ತದೆ. ಅದಾಗದಿದ್ದಲ್ಲಿ, ನ್ಯಾಯಾಲಯಕ್ಕೂ ಹೋಗಬಹುದಾಗಿದೆ. ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾಜನ್ ಆಯೋಗ ರಚಿಸಲಾಗಿತ್ತು. ಆ ಆಯೋಗದ ವರದಿಯನ್ನು ಒಪ್ಪಿಕೊಳ್ಳಬೇಕು ಎಂದು ಎರಡೂ ರಾಜ್ಯಗಳು ಸಹಮತಿಸಿದ್ದವು ಕೂಡಾ. ಆದರೆ ವರದಿ ಬಂದ ನಂತರದಲ್ಲಿ ಮಹಾರಾಷ್ಟ್ರದ ದನಿಯೇ ಬದಲಾಗಿದೆ. ಮುಖ್ಯವಾಗಿ ಬೆಳಗಾವಿ ತನಗೆ ಸೇರಬೇಕು ಎಂಬುದು ಅದರ ವಾದ. ಆದರೆ ಅದು ಈಡೇರಿಸಲು ಸಾಧ್ಯವಿಲ್ಲದ ಬೇಡಿಕೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಬಲವಾಗಿದ್ದಾಗ ಪದೇಪದೆ ತಂಟೆತಕರಾರು ತೆಗೆಯುತ್ತಿತ್ತು. ಈಗ ಅದರ ದನಿ ಕ್ಷೀಣಿಸಿದೆಯಾದರೂ, ಒಟ್ಟಾರೆಯಾಗಿ ಮಹಾರಾಷ್ಟ್ರ ನಿಲುವಿನಲ್ಲಿ ಬದಲಾವಣೆ ಕಂಡುಬರುತ್ತಿಲ್ಲ. ವಾಸ್ತವ ಮತ್ತು ತರ್ಕದ ಆಧಾರವಿಲ್ಲದೆ ಅನಿರ್ದಿಷ್ಟ ಕಾಲ ವಿವಾದ ಮುಂದುವರಿಸಿದಲ್ಲಿ ಯಾರಿಗೂ ಲಾಭವಿಲ್ಲ ಎಂಬುದನ್ನು ಮಹಾರಾಷ್ಟ್ರ ಅರಿಯಲಿ.


Spread the love

About Laxminews 24x7

Check Also

ಚಿಕ್ಕೋಡಿ: ಹಾವು ಕಚ್ಚಿ ಬಾಲಕಿ ಸಾವು

Spread the love ಚಿಕ್ಕೋಡಿ: ತಾಲ್ಲೂಕಿನ ಕೇರೂರವಾಡಿಯಲ್ಲಿ ಶುಕ್ರವಾರ ರಾತ್ರಿ ಹಾವು ಕಚ್ಚಿ 4 ವರ್ಷದ ಬಾಲಕಿ ಶಿವಾನಿ ತುಳಸಿಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ