Breaking News
Home / ಜಿಲ್ಲೆ / ಬೀದರ್ / ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಸವಕಲ್ಯಾಣ ಲೇಡಿ ಪಿಎಸ್​ಐ, ಪೇದೆ!

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಸವಕಲ್ಯಾಣ ಲೇಡಿ ಪಿಎಸ್​ಐ, ಪೇದೆ!

Spread the love

ಬೀದರ್: ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆಗೆ ಲಾರಿಗಳಿಗೆ ಅನುಮತಿ ನೀಡಲು 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ರನ್ನು ಲೋಕಾಯುಕ್ತ ಪೊಲೀಸರು ರೆಡ್​ಹ್ಯಾಂಡ್​ ಆಗಿ ಬಲೆಗೆ ಕೆಡವಿದ್ದಾರೆ.

 

ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣೆಯ ಪಿಎಸ್‌ಐ ಶೀಲಾ ನ್ಯಾಮನ್ ಹಾಗು ಕಾನ್​ಸ್ಟೆಬಲ್ ಪರಶುರಾಮರೆಡ್ಡಿ ಲೋಕಾಯುಕ್ತ ಬಲೆಗೆ ಬಿದ್ದವರು. ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆ ಲಾರಿಗಳಿಗೆ ಅನುಮತಿ ನೀಡಲು ದೂರುದಾರ ಇರ್ಷಾದ್​ ಪಟೇಲ್‌ನಿಂದ 21 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

 

ಸಾಗಾಣಿಕೆಗೆ ಅನುಮತಿ‌ ಪಡೆದಿದ್ದ ಇರ್ಷಾದ್​ ಮೂರು ಲಾರಿ ಮುಖಾಂತರ ಮರಳು ಸಾಗಾಣಿಕೆ ನಡೆಸುತ್ತಿದ್ದ. ಪ್ರತಿ ಲಾರಿಗೆ ಪ್ರತಿ ತಿಂಗಳು 7 ಸಾವಿರ ರೂ. ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮರಳು ಲಾರಿಯ ಮಾಲೀಕ ಇರ್ಷಾದ ಪಟೇಲ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುವಾಗಲೇ ದಾಳಿ ಮಾಡಿ, ಪಿಎಸ್​ಐ ಮತ್ತು ಕಾನ್​ಸ್ಟೆಬಲ್​ನನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧವು ಪ್ರಕರಣವನ್ನು ದಾಖಲಿಸಲಾಗಿದೆ. 

 

 

 


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ