Breaking News
Home / ರಾಜಕೀಯ / ಹೊಲದಲ್ಲಿ ಹಾರಿ ಬಂತು ಸಂದೇಹಾಸ್ಪದ ಬೆಲೂನ್; ಸುದ್ದಿ ಕೇಳಿ ಬೆಚ್ಚಿಬಿತ್ತು ಬೈಲಹೊಂಗಲ ಜನತೆ !

ಹೊಲದಲ್ಲಿ ಹಾರಿ ಬಂತು ಸಂದೇಹಾಸ್ಪದ ಬೆಲೂನ್; ಸುದ್ದಿ ಕೇಳಿ ಬೆಚ್ಚಿಬಿತ್ತು ಬೈಲಹೊಂಗಲ ಜನತೆ !

Spread the love

ಬೈಲಹೊಂಗಲ: ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿರುವ ಬೆಲೂನ್ ಒಂದು ಜನತೆ ಬೆಚ್ಚಿಬೀಳುವಂತೆ ಮಾಡಿದೆ.

ಇತ್ತೀಚೆಗಷ್ಟೇ ಚೀನಾ ಹಾರಿ ಬಿಟ್ಟಿದ್ದು ಎನ್ನಲಾದ ಗೂಢಚಾರ ಬೆಲೂನ್ ಗಳು ಅಮೆರಿಕ ಮತ್ತಿತರೆಡೆ ಪತ್ತೆಯಾಗಿರುವ ಹಾಗೂ ಅವುಗಳನ್ನು ವೈಮಾನಿಕ ದಾಳಿಯಿಂದ ನಾಶಪಡಿಸಿದ ಘಟನೆಗಳು ಸ್ಮೃತಿಪಟಲದಿಂದ ಮಾಸಿ ಹೋಗುವ ಮುನ್ನ ವಿಚಿತ್ರ ಬೆಲೂನ್ ಹೊಲದಲ್ಲಿ ಹಾರಿಬಂದಿರುವುದು ನಾನಾ ರೀತಿಯ ಸಂದೇಹಗಳು, ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತು.

 

 

ಬಿಳಿಯ ಬಣ್ಣದ ಈ ಬೆಲೂನ್ ನಲ್ಲಿ ಬ್ಯಾಟರಿ ಹಾಗೂ ಕೆಲ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಲಾಯಿತು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ “ನಾವು ಪ್ರಾಥಮಿಕ ವಿಚಾರಣೆ ನಡೆಸಿದ್ದೇವೆ. ಇದು ಎತ್ತರದ ಪ್ರದೇಶಗಳಲ್ಲಿ ಹವಾಮಾನವನ್ನು ನಿರ್ಧರಿಸಲು ಬಳಸುವ ಸಾಧನವಾಗಿದೆ. ಇದರ ಕುರಿತು ಯಾವುದೇ ಚಿಂತೆ ಮಾಡಬೇಕಾಗಿಲ್ಲ. ನಾವು ಬಲೂನಿನ ಮೂಲವನ್ನು ಪತ್ತೆ ಮಾಡಿದ್ದೇವೆ. ಅವರು ಅದನ್ನು ಖಚಿತಪಡಿಸಿದ ನಂತರ, ವಿವರಗಳನ್ನು ಹಂಚಿಕೊಳ್ಳಲಾಗುವುದು.
ಇದು ಎತ್ತರದ ತಾಪಮಾನದ ಆರ್ದ್ರತೆ ಗಾಳಿಯ ವೇಗದ ಗಾಳಿಯ ಒತ್ತಡ ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಏಕೈಕ ಬಳಕೆಯ ಸಾಧನವಾಗಿದೆ” ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ