Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ: ‘ಸಾಂಪ್ರದಾಯಿಕ ತಂತ್ರಜ್ಞಾನದಿಂದ ಸ್ವಾವಲಂಬನೆ’

ಬೆಳಗಾವಿ: ‘ಸಾಂಪ್ರದಾಯಿಕ ತಂತ್ರಜ್ಞಾನದಿಂದ ಸ್ವಾವಲಂಬನೆ’

Spread the love

ಬೆಳಗಾವಿ: ‘ಸಾಂಪ್ರಾದಾಯಿಕ ತಂತ್ರಜ್ಞಾನವು ಆಧುನಿಕ ಯುಗದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬಲ್ಲದು. ಮಹಿಳಾ ಸ್ವಾವಲಂಬನೆಗೆ ಇದು ಅತ್ಯಂತ ಸುಲಭ ಮಾರ್ಗ’ ಎಂದು ಪುಣೆಯ ದಿ ಎಕೊಸೋಸಿಯೊ ಟ್ರೈಬ್‌ನ ಸಂಸ್ಥಾಪಕಿ ಅಮಿತಾ ದೇಶಪಾಂಡೆ ಸಲಹೆ ನೀಡಿದರು.

 

ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಾಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್‌ನಿಂದ ಆದಿವಾಸಿ ಮಹಿಳೆಯರ ಜೀವನಮಟ್ಟ ಸುಧಾರಿಸಲು ಸಾಧ್ಯ. ಸಾಂಪ್ರದಾಯಿಕ ವಿಧಾನಗಳ ಮೂಕವೇ ಆದಿವಾಸಿ ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಿಷ್ಠ ಮಾಡಲು ಸಾಧ್ಯವಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಅನೇಕ ಉತ್ಪನ್ನಗಳನ್ನು ತಯಾರಿಸಿ, ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆಯರು ಸ್ವಾವಲಂಬನೆ ಕಂಡುಕೊಂಡ ಉದಾಹರಣೆಗಳು ನಮ್ಮಲ್ಲಿವೆ’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಡಾ.ಬಾಳಪ್ಪ ಈರಪ್ಪ ಚಿನಗುಡಿ, ‘ಕಿತ್ತೂರ ರಾಣಿ ಚನ್ನಮ್ಮನಿಗಿಂತ 150 ವರ್ಷ ಮೊದಲೇ ಬೆಳವಡಿ ಮಲ್ಲಮ್ಮ 2 ಸಾವಿರ ಮಹಿಳೆಯರ ಸೈನ್ಯ ಕಟ್ಟಿದ್ದರು. ಇದು ಜಗತ್ತಿನ ಪ್ರಪ್ರಥಮ ಮಹಿಳಾ ಸೈನ್ಯವಾಗಿದೆ. ಈ ನೆಲದ ವನಿತೆಯರು ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ’ ಎಂದರು.

‘ಸಹಕಾರ ರತ್ನ’ ಪ್ರಶಸ್ತಿ ಪಡೆದ ಸ್ವಶಕ್ತಿ ಸಂಘದ ಅಧ್ಯಕ್ಷೆ ಆಶಾತಾಯಿ ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಹೆಣ್ಣು ಮಗುವಿಗೆ ಉನ್ನತ ಶಿಕ್ಷಣಕ್ಕಾಗಿ ಆಶಾ ಕೋರೆ ವಿದ್ಯಾರ್ಥಿ ವೇತನ ಪ್ರಾರಂಭಿಸಲಾಯಿತು.

ಕಾಹೇರ್‌ನ ಉಪಕುಲಪತಿ ಡಾ.ನಿತಿನ ಗಂಗಾನೆ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ.ಪ್ರೀತಿ ಕೋರೆ, ಡಾ.ಸೋನಲ್ ಜೋಶಿ, ಡಾ.ನೇಹಾ ಧಡೆದ, ಡಾ.ರೇಣುಕಾ ವೇದಿಕೆ ಮೇಲಿದ್ದರು.

ವಿವಿಧೆಡೆಯಿಂದ ಬಂದಿದ್ದ 600ಕ್ಕೂ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡರು. ಡಾ.ಹರಪ್ರೀತ್‌ ಕೌರ್‌ ಕಾರ್ಯಕ್ರಮ ನಿರೂಪಿಸಿದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ