Breaking News
Home / ಜಿಲ್ಲೆ / ಬೆಳಗಾವಿ / ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ.

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ.

Spread the love

ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ.

ನಿನ್ನೆ ಸಂಜೆ 7 ಗಂಟೆಗೆ ಮತ ಎಣಿಕೆ ಆರಂಭವಾಗಿ, ಮದ್ಯರಾತ್ರಿ 2 ಗಂಟೆಗೆ ಮುಕ್ತಾಯವಾಯಿತು. ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ ಪ್ರಕಾಶಗೌಡ ಪಾಟೀಲ ಅವರ ತಂಡ ಸೋಲು ಅನುಭವಿಸಿದೆ.

ಆರಂಭದಲ್ಲಿ ನಾಸೀರ್ ಬಾಗವಾನ್ ಬೆಂಬಲಿತ ತಂಡದ ಮಹಿಳಾ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿದ್ದರು. ಬಳಿಕ ಅ ವರ್ಗ, ಬ ವರ್ಗ ಮತ್ತು ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳು ಗೆಲವು ತಮ್ಮದಾಗಿಸಿ ನಾಸೀರ್ ಬಾಗವಾನ್ ಅವರ ಗುಂಪಿಗೆ ಭರ್ಜರಿ ಜಯ ದೊರಕಿಸಿಕೊಟ್ಟರು.

ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2452 ಮತಗಳಲ್ಲಿ,2049 ಮತಗಳು ಚಲಾವಣೆ ಆಗಿದ್ದವು

ಗೆಲವು ಸಾಧಿಸಿದ ಅಭ್ಯರ್ಥಿಗಳ ವಿವರ:  ಗಂದಿಗವಾಡದ ನಾಶೀರುದ್ದಿನ ಬಾಗವಾನ್, ಅಶೋಕ ಯಮಕನಮರಡಿ, ಚಿಕ್ಕಮುನವಳ್ಳಿಯ ಅಶೋಕ ಬೆಂಡಿಗೇರಿ, ದಾಸ್ತಿಕೊಪ್ಪದ ಮಂಜುನಾಥ ಪಾಟೀಲ, ಮಲ್ಲಾಪುರ ಕೆ.ಎ.ಲಕ್ಷ್ಮಣ ಎಮ್ಮಿ, ಹುಲಿಕಟ್ಟಿ ಸಿದ್ದಪ್ಪ ದೊರೆಪ್ಪನವರ, ದೇವರಶಿಗಿಹಳ್ಳಿ ಭರತೇಶ ಶೇಬಣ್ಣವರ, ಎಂ.ಕೆ.ಹುಬ್ಬಳ್ಳಿ ಬಸವರಾಜ ಬೆಂಡಿಗೇರಿ, ಸಂಜೀವ್ ಹುಬಳ್ಯೆಪ್ಪನವರ, ಕಾದರವಳ್ಳಿ ಗ್ರಾಮದ ಜ್ಯೋತಿಬಾ ಹೈಬತ್ತಿ, ಇಟಗಿ ಬಸವರಾಜ ಪುಂಡಿ, ಬೈಲೂರು ಶಂಕರಗೌಡ ಪಾಟೀಲ, ತಿಗಡೊಳ್ಳಿ ಸಾವಂತ ಕಿರಬನವರ, ಬೋಗೂರ ಗ್ರಾಮದ ಮೀನಾಕ್ಷಿ ನೆಲಗಳಿ, ಹಿರೇಬಾಗೇವಾಡಿಯ ಲಕ್ಷ್ಮಿ ಅರಳಿ ಕಟ್ಟಿ  ಗೆಲವು ಸಾಧಿಸಿದ ಅಭ್ಯರ್ಥಿಗಳಾಗಿದ್ದಾರೆ.

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ