Breaking News
Home / ಹುಬ್ಬಳ್ಳಿ / ಮಾರ್ಚ್ 11 ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ : ಧಾರವಾಡ `IIT’ ನೂತನ ಕಟ್ಟಡ ಉದ್ಘಾಟನೆ

ಮಾರ್ಚ್ 11 ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ : ಧಾರವಾಡ `IIT’ ನೂತನ ಕಟ್ಟಡ ಉದ್ಘಾಟನೆ

Spread the love

ಧಾರವಾಡ : ಮಾ.11 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಐಐಟಿ ಕಟ್ಟಡ ಹಾಗೂ ರಾಜ್ಯದ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸುವರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.

 

ಮುಮ್ಮಿಗಟ್ಟಿಯ ಐಐಟಿಯ ನೂತನ ಕಟ್ಟಡದ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದ ಅವರು ಮಾತನಾಡುತ್ತಾ, ಶೀಘ್ರವೇ ಉಳಿದೆಲ್ಲ ಕೆಲಸವನ್ನು ಬೇಗನೆ ಮುಕ್ತಾಯಗೊಳಿಸುವಂತೆ ಐಐಟಿಯ ಕಟ್ಟಡ ನಿರ್ಮಾಣದ ಕಂಪನಿಯ ಸಿಇಓಗೆ ತಿಳಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರಲಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರಾದ ಅಮೃತ ದೇಸಾಯಿ, ಚಂದ್ರಕಾಂತ ಬೆಲ್ಲದ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಐಐಟಿಯ ನೂತನ ನಿರ್ದೇಶಕರಾದ ಪ್ರೊ: ವೆಂಕಪಯ್ಯ ದೇಸಾಯಿ, ರಜಿಸ್ಟ್ರಾರ್ ಪ್ರೊ. ಬಸವರಾಜಪ್ಪ, ಪ್ರೊ: ಸನತ್ ಕುಮಾರ್ ರಾಜಮಾನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜೂ.12 ರಂದು ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ

Spread the love ಧಾರವಾಡ : ಕರ್ನಾಟಕ ಲೋಕಾಯುಕ್ತ, ಧಾರವಾಡ ಕಚೇರಿಯ ಪೊಲೀಸ್ ಅಧಿಕಾರಿಗಳು ಜೂನ್ 12, 2024 ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ