ಗದಗ: ಬೆಂಗಳೂರಿನ ಇಬ್ಬರು ಸೇರಿದಂತೆ ಪ್ರಕೃತಿ ಪ್ರೇಮಿಗಳ ತಂಡವೊಂದು ಇತ್ತೀಚೆಗೆ ಗಜೇಂದ್ರಗಡದ ಗುಡ್ಡದ ಮೇಲಿನ ಸಣ್ಣ ಮರುಭೂಮಿಗೆ ತೆರಳಿತ್ತು. 30 ಎಕರೆ ಪ್ರದೇಶದಲ್ಲಿ ಹರಡಿರುವ ಈ ಮರುಭೂಮಿಯ ಕುರಿತು ಅಧ್ಯಯನ ನಡೆಸಲು ಈ ತಂಡ ಭೂವಿಜ್ಞಾನಿಗಳು ಮತ್ತು ಸಂಶೋಧಕರೊಂದಿಗೆ ಕೈಜೋಡಿಸಿದೆ.
ಸಂಶೋಧಕರ ಪ್ರಕಾರ, ಅಲ್ಲಿನ ಮರಳು ಮರುಭೂಮಿಗಳಲ್ಲಿ ಕಂಡುಬರುವ ಮರಳನ್ನು ಹೋಲುತ್ತದೆ ಮತ್ತು ಕಟ್ಟಡ ಅಥವಾ ನಿರ್ಮಾಣ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ. ಇದು ನದಿ ಮರಳಿನಂತೆ ಸಾಂದ್ರವಾಗಿಲ್ಲ. ಇದು ಮರುಭೂಮಿ ಮರಳಿನಂತೆ ಸಡಿಲವಾಗಿದೆ. ಉತ್ತರ ಕರ್ನಾಟಕದ ಮೊದಲ ಕಿರು ಮರುಭೂಮಿ ಇದಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಪ್ರಕೃತಿ ಪ್ರೇಮಿಗಳು ರೋಣ ಜೀವವೈವಿಧ್ಯ ಸಂಶೋಧಕ ಮಂಜುನಾಥ್ ನಾಯಕ್ ಮತ್ತು ಪರಿಸರವಾದಿ ಸಂತೋಷ್ ಅವರೊಂದಿಗೆ ಅಲ್ಲಿನ ಕಲ್ಲಿನ ರಚನೆಗಳನ್ನು ಅಧ್ಯಯನ ಮಾಡಲು ಬೆಟ್ಟಗಳಿಗೆ ತೆರಳಿದ್ದರು.