Breaking News
Home / ರಾಜಕೀಯ / ಸೈಬರ್ ಅಪರಾಧಗಳಿಂದಾಗಿ ಪ್ರತಿ ದಿನ ಕೋಟಿ-ಕೋಟಿ ಹಣ ಕಳೆದುಕೊಳ್ಳುತ್ತಿರುವ ಕರ್ನಾಟಕದ ಜನ

ಸೈಬರ್ ಅಪರಾಧಗಳಿಂದಾಗಿ ಪ್ರತಿ ದಿನ ಕೋಟಿ-ಕೋಟಿ ಹಣ ಕಳೆದುಕೊಳ್ಳುತ್ತಿರುವ ಕರ್ನಾಟಕದ ಜನ

Spread the love

ಬೆಂಗಳೂರು, ಫೆಬ್ರವರಿ 23: ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ, ಕರ್ನಾಟಕವು ಪ್ರತಿ ವರ್ಷ ಕೋಟ್ಯಾಂತರ ಹಣವನ್ನು ಕಳೆದುಕೊಳ್ಳುತ್ತಿದೆ. ಇದರಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮೈಸೂರು ಹಾಗೂ ಮಂಡ್ಯ ನಂತರದ ಸ್ಥಾನದಲ್ಲಿವೆ.

ಬೆಚ್ಚಿಬೀಳಿಸುವ ಈ ಮಾಹಿತಿಯನ್ನು ರಾಜ್ಯ ಗೃಹ ಇಲಾಖೆ ನೀಡಿದೆ.

ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಅಪರಾಧ ವರದಿ ಮಾಡುವಲ್ಲಿ ವಿಳಂಬವಾಗುತ್ತಿದೆ. ರಾಜ್ಯಗಳ ನಡುವೆ ಸಮನ್ವಯದ ಕೊರತೆ ಇದೆ. ಇದೆಲ್ಲ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹಣವನ್ನು ವಸೂಲಿ ಮಾಡುವುದು ನಿಜವಾಗಿಯೂ ಕಷ್ಟಕರವಾಗಿದೆ. ಡಿಜಿಟಲ್ ವ್ಯಾಲೆಟ್‌ಗಳಿಂದ ಹೆಚ್ಚಿನ ಅಪರಾಧಗಳು ಸಂಭವಿಸುತ್ತಿವೆ.

‘ಸೈಬರ್ ಕ್ರೈಮ್ ಮಾಹಿತಿ ವರದಿ (ಸಿಐಆರ್) ಸಹಾಯದಿಂದ ಚೇತರಿಕೆ ಕಂಡುಬಂದಿವೆ. ಬೆಂಗಳೂರಿನ ಪ್ರತಿ ವಿಭಾಗ ಮಟ್ಟದಲ್ಲಿ CEN ಪೊಲೀಸ್ ಠಾಣೆಗಳಲ್ಲಿ ಮತ್ತು ರಾಜ್ಯದ ಜಿಲ್ಲೆಗಳಲ್ಲಿ ತಲಾ ಒಂದರಂತೆ ಸೈಬರ್ ಅಪರಾಧಗಳನ್ನು ವರದಿ ಮಾಡಲು ರಾಜ್ಯವು ಉತ್ತಮ ಕಾರ್ಯವಿಧಾನವನ್ನು ಹೊಂದಿದೆ. ಇದು ವ್ಯವಸ್ಥೆಯು ಬೇರೆ ರಾಜ್ಯಗಳಿಗಿಂತ ಚೆನ್ನಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘The Indian Express’ ಗೆ ತಿಳಿಸಿದ್ದಾರೆ.

2022 ರಲ್ಲಿ ಕರ್ನಾಟಕದ ವ್ಯಕ್ತಿಗಳಿಂದ ಸೈಬರ್ ವಂಚಕರು ಪ್ರತಿದಿನ ಸರಾಸರಿ 1 ಕೋಟಿ ರೂ.ಗಳನ್ನು ಕದ್ದಿದ್ದಾರೆ. ಇದು ಇಂಟರ್ನೆಟ್ ಅಪರಾಧಗಳಲ್ಲಿ ಕಳೆದುಹೋದ ಹಣದಲ್ಲಿ ಶೇಕಡಾ 150 ರಷ್ಟು ಏರಿಕೆಯಾಗಿದೆ ಎಂದು ರಾಜ್ಯ ಗೃಹ ಇಲಾಖೆ ಹಂಚಿಕೊಂಡ ಮಾಹಿತಿಯನ್ನು ಹಂಚಿಕೊಂಡಿದೆ. ಇದರ ಪ್ರಕಾರ, ಕರ್ನಾಟಕವು 2022 ರಲ್ಲಿ 363 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ. 2019 ರಿಂದ 722 ಕೋಟಿ ರೂಪಾಯಿಗಳನ್ನು ವಂಚಕರು ಸುಲಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಎಂ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಇಲಾಖೆ, ‘2022 ರಲ್ಲಿ ಕರ್ನಾಟಕವು 363,11,54,443 ರೂ.ಗಳನ್ನು ಕಳೆದುಕೊಂಡಿದೆ. ಆದರೆ, ರಾಜ್ಯದ ಪೊಲೀಸ್‌ ಅಧಿಕಾರಿಗಳು ಈ ಮೊತ್ತದ 12 ಪ್ರತಿಶತವನ್ನು (46,87,89,415 ರೂಪಾಯಿ) ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ತಿಳಿಸಿದೆ.

ಅಂದರೆ, 2021 ರಲ್ಲಿ ರಾಜ್ಯವು 145,05,85,810 ರೂಪಾಯಿಗಳನ್ನು ಸೈಬರ್ ಅಪರಾಧಗಳಿಂದ ಕಳೆದುಕೊಂಡಿದೆ. 2023ರಲ್ಲಿಯೂ ಇಂತಹ ಅಪರಾಧಗಳಿಗೆ ಕಡಿವಾಣ ಬಿದ್ದಿಲ್ಲ. ಏಕೆಂದರೆ ರಾಜ್ಯದಲ್ಲಿ ಜನವರಿಯಲ್ಲಿಯೇ 1,325 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ. ಹಲವಾರು ವ್ಯಕ್ತಿಗಳು ವಂಚಕರಿಗೆ 36.63 ಕೋಟಿ ರೂಪಾಯಿಗಳಷ್ಟು ಜನವರಿಯಲ್ಲಿಯೇ ಕಳೆದುಕೊಂಡಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ