Home / Uncategorized / ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಲು ಚಿಂತನೆ: ಸಿಎಂ ಬೊಮ್ಮಾಯಿ

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಲು ಚಿಂತನೆ: ಸಿಎಂ ಬೊಮ್ಮಾಯಿ

Spread the love

ವಿಜಯಪುರ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡಲು ಅಗತ್ಯದ ಅನುದಾನ ನೀಡುತ್ತೇನೆ. ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಳಕ್ಕೂ ಕ್ರಮ‌ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಶನಿವಾರ ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ರಾಜ್ಯ ಮಟ್ಟದ 37ನೇ ಸಮ್ಮೇಳನಕ್ಕೆ ಚಾಲನೆ ಮಾತನಾಡಿದ ಅವರು, ಆದರೆ ನಕಲಿ ಪತ್ರಕರ್ತರಿಗೆ ಕಡಿವಾಣ ಅಗತ್ಯ ಎಂದರು.

 

ಪತ್ರಕರ್ತರನ್ನು ಕಾರ್ಮಿಕರನ್ನಾಗಿ ಪರಿಗಣಿಸಿ ಕಾರ್ಮಿಕ ಇಲಾಖೆಯ ಮೂಲಕ ಸೌಲಭ್ಯ ಕಲ್ಪಿಸುವುದು ಹಾಗೂ ಜಾಹೀರಾತು ದರ ಹೆಚ್ಚಳದ ಕುರಿತು ಪತ್ರಕರ್ತರ ಸಂಘದಿಂದ ಸಲ್ಲಿಸಿರುವ ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಸ್ಥಾನ ಎಂದರೆ ನಾಡಿನ ದೊರೆಯಲ್ಲ ಜನಸೇವಕನ ಸ್ಥಾನ. ಸಿದ್ದೇಶ್ವರ ಶ್ರೀಗಳ ಆತ್ಮಸಾಕ್ಷಿಯ ನಡೆ ಅನುಸರಿಸಬೇಕಿದೆ ಎಂದರು.

ಐತಿಹಾಸಿಕ ಆಧ್ಯಾತ್ಮಿಕ ಚಿಂತನೆಯ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನ ಅರ್ಥಪೂರ್ಣವಾಗಲಿ. ಬಸವೇಶ್ವರ, ಸಿದ್ದೇಶ್ವರರ ಆಶಯದಂತೆ ಅವರ ಜೀವಿತದ ಮೌಲ್ಯಗಳ ತುಂಬಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜಾಪುರ ಬಿಳಿಜೋಳ ಅತ್ಯಂತ ಪೌಷ್ಟಿಕ ಶ್ರೇಷ್ಠ ಆಹಾರ ಧಾನ್ಯ. ಜೋಳದಂತೆ ಬಿಜಾಪುರ ಜನರೂ ಗಟ್ಟಿಗರು, ಕಾಯಕ ಪರಿಶ್ರಮ ಜೀವಿಗಳು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಬಣ್ಣಿಸಿದರು.

ಕೃಷ್ಣೆಯ ಹನಿ‌ ನೀರಿನ ಬಳಕೆಗೆ ಅಗತ್ಯವಾಗಿದೆ. ಕೃಷ್ಣೆಯಿಂದ ವಿಜಯಪುರ ಭಾಗದ 5 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದ್ದು, ಇಡೀ ಭಾರತಕ್ಕೆ ಅನ್ನ ಹಾಕುವ ಶಕ್ತಿಯಿದೆ. ಕೃಷ್ಣೆಗಾಗಿ ಬದುಕನ್ನೇ ತ್ಯಾಗ ಮಾಡಿದ ನೆಲದ‌ ಮುಂದಿನ ಪೀಳಿಗೆ ಬದುಕು ಉತ್ತಮವಾಗಿ ಸೃಷ್ಟಿಯಾಗಲಿ ಎಂದು ಆಶಿಸಿದರು.


Spread the love

About Laxminews 24x7

Check Also

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

Spread the love ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ