Breaking News
Home / ಹುಬ್ಬಳ್ಳಿ / ಡಾ.ರಾಜೇಂದ್ರ ಚೆನ್ನಿ, ಡಾ.ಜಿನದತ್ತ ದೇಸಾಯಿಗೆ ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ

ಡಾ.ರಾಜೇಂದ್ರ ಚೆನ್ನಿ, ಡಾ.ಜಿನದತ್ತ ದೇಸಾಯಿಗೆ ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ

Spread the love

ಧಾರವಾಡ: ವರಕವಿ ಡಾ.ದ.ರಾ.ಬೇಂದ್ರೆ ಅವರ 127ನೇ ಜನ್ಮದಿನಾಚರಣೆ ಪ್ರಯುಕ್ತ ಡಾ.ದ.ರಾ.ಬೇಂದ್ರೆ ರಾಷ್ಟೀಯ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡ ಮಾಡುವ 2023ನೇ ಸಾಲಿನ ಅಂಬಿಕಾತನಯದತ್ತ ರಾಷ್ಟೀಯ ಪ್ರಶಸ್ತಿಗೆ ಈ ಸಲ ಇಬ್ಬರು ಭಾಜನರಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಹೇಳಿದರು.

 

ನಗರದ ಬೇಂದ್ರೆ ಭವನದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಲಕ್ಷ ನಗದು, ಸ್ಮರಣಿಕೆ ಫಲಕ ಒಳಗೊಂಡ ಈ ಪ್ರಶಸ್ತಿಯನ್ನು ಪ್ರತ್ಯೇಕ ತಲಾ 50 ಸಾವಿರದಂತೆ ಮೂಲತ: ಧಾರವಾಡದವರೇ ಆದ ಒಬ್ಬರು ಹಿರಿಯ ಸಾಹಿತಿಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಾದ ವಿಮರ್ಶಕ, ಚಿಂತಕರಾದ ಡಾ.ರಾಜೇಂದ್ರ ಚೆನ್ನಿ ಹಾಗೂ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಡಾ.ಜಿನದತ್ತ ದೇಸಾಯಿ ಅವರಿಗೆ ಜ.31 ರಂದು ಸಂಜೆ 4:30 ಗಂಟೆಗೆ ನಗರದ ಸಾಧನಕೇರಿಯ ಡಾ.ದ.ರಾ.ಬೇಂದ್ರೆ ಭವನದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದರು‌.

 

ವಿಧಾನ ಪರಿಷತ ಸದಸ್ಯ ಎಚ್.ವಿಶ್ವನಾಥ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಆಗಮಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತರಾದ ಡಾ.ಜಿನದತ್ತ ದೇಸಾಯಿ ಅವರ ಕುರಿತು ಡಾ.ಶಾಂತಾ ಇಮ್ರಾಪೂರ ಹಾಗೂ

ಡಾ.ರಾಜೇಂದ್ರ ಚೆನ್ನಿ ಅವರ ಕುರಿತು ಕುಮಟಾದ ಡಾ.ಎಂ‌.ಜಿ.ಹೆಗಡೆ ಅಭಿನಂದನಾಪರ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಿರಸಿಯ ಪ್ರೊ.ಎಚ್.ಆರ್. ಅಮರನಾಥ ಸಂಪಾದಕತ್ವದ ಪ್ರೊ.ಬೇಂದ್ರೆ ಮಾಸ್ತರರ ಅಮರವಾಣಿ ಕೈಪಿಡಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

Spread the loveಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ