Breaking News
Home / ಜಿಲ್ಲೆ / ಬಾಗಲಕೋಟೆ / ಡಾ.ವಿಜಯ ಸಂಕೇಶ್ವರ ಅವರಿಗೆ ‘ಶ್ರೀ ಸಿದ್ಧಶ್ರೀ ಪ್ರಶಸ್ತಿ’, ವಿಜಯಾನಂದ ಚಿತ್ರಕ್ಕೆ ‘ಅತ್ಯುತ್ತಮ ಬಯೋಪಿಕ್​’ ಪ್ರದಾನ

ಡಾ.ವಿಜಯ ಸಂಕೇಶ್ವರ ಅವರಿಗೆ ‘ಶ್ರೀ ಸಿದ್ಧಶ್ರೀ ಪ್ರಶಸ್ತಿ’, ವಿಜಯಾನಂದ ಚಿತ್ರಕ್ಕೆ ‘ಅತ್ಯುತ್ತಮ ಬಯೋಪಿಕ್​’ ಪ್ರದಾನ

Spread the love

ಬಾಗಲಕೋಟೆ: ಪುಣ್ಯಕ್ಷೇತ್ರ ಸಿದ್ಧನಕೊಳ್ಳದ ಸಿದ್ಧೇಶ್ವರ ಮಠದಿಂದ 2023ನೇ ಸಾಲಿನ ‘ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ’ಯನ್ನು ವಿಆರ್​ಎಲ್​ ಸಮೂಹ ಸಂಸ್ಥೆ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು.

ಮೂರು ದಿನಗಳ ಸಿದ್ಧಶ್ರೀ ಉತ್ಸವದಲ್ಲಿ ಎರಡನೇ ದಿನವಾದ ಭಾನುವಾರ ರಾತ್ರಿ ನಡೆದ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಾ.ವಿಜಯ ಸಂಕೇಶ್ವರ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

‘ವಿಜಯಾನಂದ’ ಚಿತ್ರಕ್ಕೆ ಅತ್ಯುತ್ತಮ ಬಯೋಪಿಕ್​ ಪ್ರಶಸ್ತಿಯನ್ನೂ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ಸಿದ್ಧನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಮೈಸೂರು ಪೇಟ, ಶಾಲು, ಹಾರ ಹಾಕಿ ಪಾರಿತೋಷಕ ಹಾಗೂ ನಗದು ಹಣದೊಂದಿಗೆ ಶ್ರೀ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲೆ, ಕಲಾವಿದರನ್ನು ಪೋತ್ಸಾಹಿಸುವ ಮಠ ಎಂದು ಖ್ಯಾತಿ ಪಡೆದಿರುವ ಸಿದ್ಧನಕೊಳ್ಳದ ಮಠದಿಂದ ಉತ್ಸವ ವೇಳೆ ಚಲನಚಿತ್ರೋತ್ಸವ ನಡೆಯುತ್ತಾ ಬಂದಿದ್ದು, ಈ ವರ್ಷದ ಅತ್ಯುತ್ತಮ ಬಯೋಫಿಕ್​ ಚಿತ್ರ ಎಂದು ವಿಜಯಾನಂದ ಚಿತ್ರಕ್ಕೆ ಶ್ರೀಮಠದಿಂದ ಚಿತ್ರತಂಡದ ಪರವಾಗಿ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಯಕದಲ್ಲಿ ದೇವರನ್ನು ಕಾಣುವ ಡಾ. ಸಂಕೇಶ್ವರ ಅವರಿಗೆ ಈ ಪ್ರಶಸ್ತಿ ನೀಡಿದ್ದು, ಶ್ರೀಮಠ ಹಾಗೂ ಮಠದ ಭಕ್ತರಿಗೆ ಅಪಾರ ಸಂತೋಷ ತಂದಿದೆ. ಬಿಡುವಿಲ್ಲದ ಕರ್ತವ್ಯದ ಮಧ್ಯೆಯೂ ಸಿದ್ಧನಕೊಳ್ಳಕ್ಕೆ ಆಗಮಿಸಿ ನಮ್ಮ ಗೌರವ ಸ್ವೀಕರಿಸಿದ ಬಗ್ಗೆ ಮಠದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಸಂತೋಷ ವ್ಯಕ್ತಪಡಿಸಿದರು.

ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಡಾ. ವಿಜಯ ಸಂಕೇಶ್ವರ ಅವರು ಮಠ, ಮಂದಿರ, ಪೂಜ್ಯರ ದರ್ಶನ, ಆಶೀರ್ವಾದ ಪಡೆಯುವುದು ಅನೇಕ ವರ್ಷಗಳಿಂದಲೂ ನಡೆಯುತ್ತಿದೆ. ಇದು ನನ್ನ ಹಿಂದಿನ ಜನ್ಮದ ಪುಣ್ಯ. ಬ್ಯಾಂಕ್​ ಅಕೌಂಟ್​ ಇಲ್ಲ, ಟ್ರಸ್ಟ್​ ಇಲ್ಲ. ಬಂದ ಕಾಣಿಕೆಯನ್ನು ಭಕ್ತರಿಗೆ ಕೊಡುತ್ತಿರುವ ಈ ಮಠದ ಕಾರ್ಯ ಅಚ್ಚರಿ ಹಾಗೂ ಆಶ್ಚರ್ಯ ತಂದಿದೆ. ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಇಲ್ಲಿಗೆ ನಾನು ಪ್ರಥಮ ಸಲ ಬಂದಿದ್ದೇನೆ. ಈ ಸ್ಥಳಕ್ಕೆ ಅನೇಕ ಸಾಧಕರು ಬಂದು ಹೋಗಿದ್ದು, ಇಲ್ಲಿಯ ಮಹಿಮೆ ಅಪಾರ ಎನ್ನುವುದು ಮನವರಿಕೆ ಆಗಿದೆ ಎಂದರು.

ನನಗೆ ಯಾವುದೇ ಪ್ರಶಸ್ತಿ ಬಂದಾಗಲೂ ಹಣವನ್ನು ನಾನು ಪಡೆಯಲ್ಲ. ಬರೀ ಪ್ರಶಸ್ತಿ ಮಾತ್ರ ಪಡೆಯುತ್ತೇನೆ. ಎಂಪಿ, ಎಂಎಲ್ಸಿ ಪೆನ್ಶನ್​ ಸಹ ನಾನು ತೆಗೆದುಕೊಳ್ಳಲ್ಲ. ಇಲ್ಲಿಯೂ ಪ್ರಶಸ್ತಿ ಹಣ ಬೇಡ ಎಂದರೂ ಸ್ವಾಮೀಜಿ ಇದು ಆಶೀರ್ವಾದ ಪಡೆಯಲೇಬೇಕು ಅಂತಿದ್ದಾರೆ. ಈ ಹಣವನ್ನು ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡುತ್ತಿರುವ ದೇವಾಲಯಕ್ಕೆ ನಾಳೆಯೇ ಸಲ್ಲಿಸುತ್ತೇನೆ ಎಂದು ತಿಳಿಸಿದರು.


Spread the love

About Laxminews 24x7

Check Also

ಬಾಗಲಕೋಟೆಯಲ್ಲಿ ಓವರ್‌ ಟೇಕ್‌ ಮಾಡಲು ಹೋಗಿ ಎರಡು ಟ್ರ್ಯಾಕ್ಟರ್‌ ಪಲ್ಟಿ; ಸ್ಥಳದಲ್ಲೇ ಮೂವರ ದುರ್ಮರಣ

Spread the loveಬಾಗಲಕೋಟೆ ಜಿಲ್ಲೆಯ ಮೂದೋಳ ತಾಲೂಕಿನ ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ಘಟನೆ ನಡೆದಿದೆ.,.20 ವರ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ