Breaking News
Home / Uncategorized / ಬೆಳಗಾವಿ-ಸಿಕಂದರಾಬಾದ್ ರೈಲು, ಮಂತ್ರಾಲಯ ಭಕ್ತರಿಗೆ ಅನುಕೂಲ

ಬೆಳಗಾವಿ-ಸಿಕಂದರಾಬಾದ್ ರೈಲು, ಮಂತ್ರಾಲಯ ಭಕ್ತರಿಗೆ ಅನುಕೂಲ

Spread the love

ಬೆಳಗಾವಿ, ಜನವರಿ 15; ನೈಋತ್ಯ ರೈಲ್ವೆಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ವಿಶೇಷ ರೈಲು ಘೋಷಣೆ ಮಾಡಿದೆ. ಈ ರೈಲು ಸೇವೆಯಿಂದಾಗಿ ಪುಣ್ಯ ಕ್ಷೇತ್ರ ಮಂತ್ರಾಲಯಕ್ಕೆ ಪ್ರಯಾಣ ಮಾಡಲು ಭಕ್ತರಿಗೆ ಅನುಕೂಲವಾಗಲಿದೆ.

 

ಬೆಳಗಾವಿಯ ಬಿಜೆಪಿ ಸಂಸದೆ ಮಂಗಲ ಸುರೇಶ್ ಅಂಗಡಿ ರೈಲು ಸಂಚಾರದ ಬಗ್ಗೆ ಫೇಸ್‌ಬುಕ್ ಮೂಲಕ ಮಾಹಿತಿ ನೀಡಿದ್ದಾರೆ. ಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 17ರಂದು ಪ್ರಾರಂಭವಾಗಲಿದೆ.

 

ಮಂಗಲ ಸುರೇಶ್ ಅಂಗಡಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಬೆಳಗಾವಿ-ಸಿಕಂದರಾಬಾದ್ ನಡುವೆ ವಿಶೇಷ ರೈಲು ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಇದರಿಂದಾಗಿ ಮಂತ್ರಾಲಯ ಭಕ್ತರಿಗೂ ಅನುಕೂಲವಾಗಲಿದೆ ಎಂದು ಹೇಳಿದ್ದರು. ರೈಲು ಸಂಚಾರಕ್ಕೆ ಈಗ ಅನುಮತಿ ಸಿಕ್ಕಿದೆ.

 

ನೈಋತ್ಯ ರೈಲ್ವೆ ವಿಶೇಶ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು ಅನುಮತಿ ನೀಡಿದೆ. ಈ ವಿಶೇಷ ರೈಲಿನ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ರೈಲು, ಖಾನಾಪುರ, ಧಾರವಾಡ, ಹುಬ್ಬಳ್ಳಿ, ಮಂತ್ರಾಲಯ ರೋಡ್, ರಾಯಚೂರು ಹಾಗೂ ಯಾದಗಿರಿ ಮಾರ್ಗವಾಗಿ ಸಿಕಂದರಾಬಾದ್ ತಲುಪಲಿದೆ.

ವೇಳಾಪಟ್ಟಿ ರೈಲು ಸಂಖ್ಯೆ 07335/07336 ಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ನಡುವೆ ಸಂಚಾರ ನಡೆಸಲಿದೆ.

ರೈಲು ಸಂಖ್ಯೆ 07335 ಜನವರಿ 17ರಂದು ಮಧ್ಯಾಹ್ನ 1.10ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಸಿಕಂದರಾಬಾದ್ ನಗರವನ್ನು ಜನವರಿ 18ರಂದು ಬೆಳಗ್ಗೆ 5.50ಕ್ಕೆ ತಲುಪಲಿದೆ.

ಜನವರಿ 18ರಂದು ರಾತ್ರಿ 10.20ಕ್ಕೆ ರೈಲು ಸಂಖ್ಯೆ 07336 ಸಿಕಂದರಾಬಾದ್‌ನಿಂದ ಹೊರಟು ಮರುದಿನ ಮಧ್ಯಾಹ್ನ 3.55ಕ್ಕೆ ಬೆಳಗಾವಿಗೆ ಬರಲಿದೆ.

 

ಸಂಸದೆ ಮಂಗಲ ಸುರೇಶ್ ಅಂಗಡಿ ಎಲ್ಲಾ ಪ್ರಯಾಣಿಕರು ಈ ರೈಲು ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರೈಲು ಸಂಚಾರ ಆರಂಭಿಸಿದ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

712 ಕಿ. ಮೀ. ವಿದ್ಯುದೀಕರಣ 2022ರಲ್ಲಿ ನೈಋತ್ಯ ರೈಲ್ವೆ ದಾಖಲೆಯ 712 ಕಿ. ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಿದೆ. ಈ ವರ್ಷದ ಮಾರ್ಚ್ ತನಕ 541 ಕಿ. ಮೀ. ವಿದ್ಯುದೀಕರಣ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದ್ದಾರೆ.

ನೈಋತ್ಯ ರೈಲ್ವೆ ವಲಯದ 3629 ಕಿ. ಮೀ. ಮಾರ್ಗದಲ್ಲಿ 2174 ಕಿ. ಮೀ. ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಹುಬ್ಬಳ್ಳಿ-ಬೆಂಗಳೂರು ದ್ವಿಪಥ ಮಾರ್ಗ ಕಾಮಗಾರಿ ವಿದ್ಯುದೀಕರಣ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ.

2022ರಲ್ಲಿ ಒಟ್ಟು 7509 ಕೋಟಿ ರೂ. ಆದಾಯ ಬಂದಿದೆ. ಪ್ರಯಾಣಿಕರಿಂದ 2534 ಕೋಟಿ ರೂ. ಆದಾಯ ಬಂದಿದೆ. ರೈಲ್ವೆ ಮಾರ್ಗ ವಿದ್ಯುದೀಕರಣ ಮಾಡುವುದರಿಂದ ತೈಲ ವೆಚ್ಚ ಉಳಿತಾಯವಾಗಲಿದೆ.

ಲೋಂಡಾ-ಮೀರಜ್, ಹುಬ್ಬಳ್ಳಿ-ಚಿಕ್ಕಜಾಜೂರು ದ್ವಿಪಥ ಮಾರ್ಗ ನಿರ್ಮಾಣ ಇದೇ ಫೆಬ್ರವರಿ ಅಥವ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಗದಗ-ವಾಡಿ ಯೋಜನೆಯಡಿ ಸಂಗನಾಳ-ಕುಷ್ಟಗಿ (34 ಕಿ. ಮೀ.), ಗಿಣಿಗೆರ-ರಾಯಚೂರು ಮಾರ್ಗದ ಕಾರಟಗಿ-ಸಿಂಧನೂರು (18) ಕಿ. ಮೀ. ಹೊಸ ಮಾರ್ಗವನ್ನು ಈ ವರ್ಷ ಪೂರ್ಣಗೊಳಿಸುವ ಗುರಿಯನ್ನು ಇಲಾಖೆ ಹೊಂದಿದೆ.

ಧಾರವಾಡ-ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ಶೀಘ್ರವೇ ಆರಂಭವಾಗಲಿದೆ. ಇದು ಬೆಳಗಾವಿ ತನಕ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಸಂಜೀವ್ ಕಿಶೋರ್ ಹೇಳಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈಗಾಗಲೇ ಬೆಂಗಳೂರು ಮತ್ತು ಉತ್ತರ ಕರ್ನಾಟಕ ನಡುವೆ ವಂದೇ ಭಾರತ್ ರೈಲು ಓಡಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದು ರಾಜ್ಯದ 2ನೇ ವಂದೇ ಭಾರತ್ ರೈಲು ಸೇವೆಯಾಗಿದೆ. ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ರೈಲು ಸಂಚಾರ ನಡೆಸುತ್ತಿದೆ.


Spread the love

About Laxminews 24x7

Check Also

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Spread the loveಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ