Breaking News
Home / ರಾಜ್ಯ / ಹತ್ತಿ ಕಟಾವಿಗೂ ಕೊಡಬೇಕು ಪೊಲೀಸರ ರಕ್ಷಣೆ!

ಹತ್ತಿ ಕಟಾವಿಗೂ ಕೊಡಬೇಕು ಪೊಲೀಸರ ರಕ್ಷಣೆ!

Spread the love

ರಾಯಚೂರು: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದುದು. ಸಾರ್ವಜನಿಕವಾಗಿ ಎಷ್ಟೇ ಟೀಕೆ ವ್ಯಕ್ತಪಡಿಸಿದರೂ, ಪೊಲೀಸರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಿವಿಧ ಸಂದರ್ಭಗಳಲ್ಲಿ ಸೂಕ್ತ ಬಂದೋಬಸ್ತ್​​ ಮಾಡಿ, ಭದ್ರತೆ ಒದಗಿಸುವ ಕೆಲಸ ಮಾಡುತ್ತಾರೆ.

 

ಗಣ್ಯ ವ್ಯಕ್ತಿಗಳ ಭೇಟಿ, ಸಮಾವೇಶ, ಗಲಭೆ ಮುಂತಾದ ಸಂದರ್ಭದಲ್ಲಿ ಅಗತ್ಯಕ್ಕನುಗುಣವಾಗಿ ಅಗತ್ಯವಿದ್ದಾಗ ಸೂಕ್ತ ಭದ್ರತೆ ಪೊಲೀಸ್ ಇಲಾಖೆಯಿಂದ ಲಭಿಸುತ್ತದೆ. ಆದರೆ ಇದೀಗ ರಾಯಚೂರಿ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೊಬ್ಬರು ವಿಶೇಷ ಬಂದೋಬಸ್ತ್​​ ವ್ಯವಸ್ಥೆ ಮಾಡಿ ಸುದ್ದಿಯಾಗಿದ್ದಾರೆ.

ದೇವದುರ್ಗ ವ್ಯಾಪ್ತಿಯಲ್ಲಿನ ರೈತರು ತಮ್ಮ ಜಮೀನಿನಲ್ಲಿ ಹತ್ತಿ ಬೆಳೆಯನ್ನು ಕಟಾವು ಮಾಡುವಾಗ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ರೈತರಿಗೆ ಬಂದೋಬಸ್ತ್ ಮೂಲಕ ಭದ್ರತೆ ನೀಡಬೇಕೆಂದು ದೇವದುರ್ಗ ಜೆಎಂಎಫ್​ಸಿ ನ್ಯಾಯಾಲಯ ಆದೇಶ ನೀಡಿದೆ.

1 ಎಕರೆ 26 ಗುಂಟೆ ಹಾಗೂ 1 ಎಕರೆ 14 ಗುಂಟೆ ಇರುವ ಎರಡು ಜಮೀನುಗಳಲ್ಲಿ ರೈತರು ಹತ್ತಿ ಕೃಷಿ ಮಾಡಿದ್ದಾರೆ. ಬೆಳೆ ಸಮೃದ್ಧವಾಗಿ ಬೆಳೆದು ಕೊಯ್ಲಿಗೆ ಬಂದಿದೆ. ಹೀಗಾಗಿ ಮುಂದಿನ 5 ದಿನಗಳ ಕಾಲ ನಡೆಯುವ ಕಟಾವಿನ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡಬೇಕು ಎಂದು ದೇವದುರ್ಗ ಪೊಲೀಸ್ ಠಾಣಾಧಿಕಾರಿಗೆ ನೋಟೀಸ್ ಜಾರಿಯಾಗಿದೆ.


Spread the love

About Laxminews 24x7

Check Also

ಕೇಂದ್ರ ಸರ್ಕಾರದ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ : ವಿನಯ ಜವಳಿ

Spread the loveಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡನೆ ಮಾಡಿರುವ ಕೇಂದ್ರ ಬಜೆಟ್ ನಿಜಕ್ಕೂ ದೂರದೃಷ್ಟಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ