Breaking News
Home / ರಾಜಕೀಯ / ಬೆಳಗಾವಿ: ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್‌.ಡಿ.ಆರ್‌.ಎಫ್‌ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾ ಮತ್ತು ಅಣಕು ಪ್ರದರ್ಶನ ಸೋಮವಾರ ದೇಸೂರಿನ ಬಿಪಿಸಿಎಲ್‌-ಐಓಸಿಎಲ್‌ ಪೆಟ್ರೋಲಿಯಂ ಶೇಖರಣಾ ಕೇಂದ್ರದಲ್ಲಿ ನಡೆಯಿತು. ಪೆಟ್ರೋಲಿಯಂ ಸ್ಟೋರೇಜ್‌ಗಳಲ್ಲಿ, ಪೆಟ್ರೋಲಿಯಂ ವ್ಯಾಗನ್‌ ಟ್ಯಾಂಕರ್‌ ಸೋರಿಕೆ, ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನ ಕೈಗೊಳ್ಳಲಾಯಿತು. ಬೆಳಗಾವಿ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್‌ ಹಾಗೂ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೊಡ ಅವರ ನಿರ್ದೇಶನದಂತೆ ಅಣಕು ಪ್ರದರ್ಶನ ಜರುಗಿತು. ಅವಘಡ ಸಂಭವಿಸಿದ ಕುರಿತು ಮಾಹಿತಿ ಬಂದ ತಕ್ಷಣವೇ ಜಿಲ್ಲಾಡಳಿತದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚಿಸಿ, ಘಟನೆ ಸ್ಥಳಕ್ಕೆ ಭೇಟಿ ನೀಡಿ ಅವಘಡವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು. ಸನ್ನಿವೇಶದಲ್ಲಿ ಶೇಖರಣೆಯಾದ ಪೆಟ್ರೋಲಿಯಂ ಕಳುಹಿಸುವ ಸಂದರ್ಭದಲ್ಲಿ ವ್ಯಾಗನ್‌ ಟ್ಯಾಂಕರ್‌ ಸೋರಿಕೆಯಾಗಿದ್ದು, ಅದರಿಂದ ಪೆಟ್ರೋಲಿಯಂ ಶೇಖರಣಾ ಕೇಂದ್ರದ ಒಳಗಡೆ ಬೆಂಕಿ ಸಂಭವಿಸಿತು. ಅವಘಡದಲ್ಲಿ ಗಾಯಗೊಂಡಿರುವ 25 ಕಾರ್ಮಿಕರನ್ನು ಆಂಬ್ಯುಲೆನ್ಸ್‌ ಮೂಲಕ ಸ್ಥಳಾಂತರಿಸಿ, ಮೆಡಿಕಲ್‌ ಪೋಸ್ಟ್‌ ಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಸನ್ನಿವೇಶವನ್ನು ಅಣಕು ಪ್ರದರ್ಶನದಲ್ಲಿ ಕೈಗೊಳ್ಳಲಾಯಿತು. ತಾಲೂಕು ಆರೋಗ್ಯಾಧಿಕಾರಿ ಮಾಸ್ತಿಹೊಳಿ, ವಡಗಾಂವ ಸಿಪಿಐ ಶ್ರೀನಿವಾಸ ಹಾಂಡ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ, ಭಾರತ ಪೆಟ್ರೋಲಿಯಂ ಟೆರಟರಿ ಮ್ಯಾನೇಜರ್‌ ಸುರೇಶ ಅಲಾಟೆ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನೀಲಗಾರ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಕಿರಣ್‌ ನಾಯಕ್‌, ಎನ್‌.ಡಿ.ಆರ್‌. ಎಫ್‌ ಇನಸ್ಪೆಕ್ಟರ್‌ ಶಿವಕುಮಾರ, ಸಬ್‌ ಇನಸ್ಪೆಕ್ಟರ್‌ ಶಾಂತಿ ಲಾಲ್‌ ಜಟಿಯಾ, ಬಿಪಿಸಿಎಲ್‌ ರಕ್ಷಣಾ ಅಧಿಕಾರಿ ವಿಮಲ್‌ ಸಿ. ಪಿ, ಐಓಸಿಎಲ್‌ ಡಿಪೋ ಮ್ಯಾನೇಜರ್‌ ಪುನೀತ್‌ ಮುರುಡೇಶ್ವರ ಅಣಕು ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

ಬೆಳಗಾವಿ: ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್‌.ಡಿ.ಆರ್‌.ಎಫ್‌ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾ ಮತ್ತು ಅಣಕು ಪ್ರದರ್ಶನ ಸೋಮವಾರ ದೇಸೂರಿನ ಬಿಪಿಸಿಎಲ್‌-ಐಓಸಿಎಲ್‌ ಪೆಟ್ರೋಲಿಯಂ ಶೇಖರಣಾ ಕೇಂದ್ರದಲ್ಲಿ ನಡೆಯಿತು. ಪೆಟ್ರೋಲಿಯಂ ಸ್ಟೋರೇಜ್‌ಗಳಲ್ಲಿ, ಪೆಟ್ರೋಲಿಯಂ ವ್ಯಾಗನ್‌ ಟ್ಯಾಂಕರ್‌ ಸೋರಿಕೆ, ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನ ಕೈಗೊಳ್ಳಲಾಯಿತು. ಬೆಳಗಾವಿ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್‌ ಹಾಗೂ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೊಡ ಅವರ ನಿರ್ದೇಶನದಂತೆ ಅಣಕು ಪ್ರದರ್ಶನ ಜರುಗಿತು. ಅವಘಡ ಸಂಭವಿಸಿದ ಕುರಿತು ಮಾಹಿತಿ ಬಂದ ತಕ್ಷಣವೇ ಜಿಲ್ಲಾಡಳಿತದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚಿಸಿ, ಘಟನೆ ಸ್ಥಳಕ್ಕೆ ಭೇಟಿ ನೀಡಿ ಅವಘಡವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು. ಸನ್ನಿವೇಶದಲ್ಲಿ ಶೇಖರಣೆಯಾದ ಪೆಟ್ರೋಲಿಯಂ ಕಳುಹಿಸುವ ಸಂದರ್ಭದಲ್ಲಿ ವ್ಯಾಗನ್‌ ಟ್ಯಾಂಕರ್‌ ಸೋರಿಕೆಯಾಗಿದ್ದು, ಅದರಿಂದ ಪೆಟ್ರೋಲಿಯಂ ಶೇಖರಣಾ ಕೇಂದ್ರದ ಒಳಗಡೆ ಬೆಂಕಿ ಸಂಭವಿಸಿತು. ಅವಘಡದಲ್ಲಿ ಗಾಯಗೊಂಡಿರುವ 25 ಕಾರ್ಮಿಕರನ್ನು ಆಂಬ್ಯುಲೆನ್ಸ್‌ ಮೂಲಕ ಸ್ಥಳಾಂತರಿಸಿ, ಮೆಡಿಕಲ್‌ ಪೋಸ್ಟ್‌ ಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಸನ್ನಿವೇಶವನ್ನು ಅಣಕು ಪ್ರದರ್ಶನದಲ್ಲಿ ಕೈಗೊಳ್ಳಲಾಯಿತು. ತಾಲೂಕು ಆರೋಗ್ಯಾಧಿಕಾರಿ ಮಾಸ್ತಿಹೊಳಿ, ವಡಗಾಂವ ಸಿಪಿಐ ಶ್ರೀನಿವಾಸ ಹಾಂಡ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ, ಭಾರತ ಪೆಟ್ರೋಲಿಯಂ ಟೆರಟರಿ ಮ್ಯಾನೇಜರ್‌ ಸುರೇಶ ಅಲಾಟೆ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನೀಲಗಾರ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಕಿರಣ್‌ ನಾಯಕ್‌, ಎನ್‌.ಡಿ.ಆರ್‌. ಎಫ್‌ ಇನಸ್ಪೆಕ್ಟರ್‌ ಶಿವಕುಮಾರ, ಸಬ್‌ ಇನಸ್ಪೆಕ್ಟರ್‌ ಶಾಂತಿ ಲಾಲ್‌ ಜಟಿಯಾ, ಬಿಪಿಸಿಎಲ್‌ ರಕ್ಷಣಾ ಅಧಿಕಾರಿ ವಿಮಲ್‌ ಸಿ. ಪಿ, ಐಓಸಿಎಲ್‌ ಡಿಪೋ ಮ್ಯಾನೇಜರ್‌ ಪುನೀತ್‌ ಮುರುಡೇಶ್ವರ ಅಣಕು ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

Spread the love

ಬೆಳಗಾವಿ: ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್‌.ಡಿ.ಆರ್‌.ಎಫ್‌ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾ ಮತ್ತು ಅಣಕು ಪ್ರದರ್ಶನ ಸೋಮವಾರ ದೇಸೂರಿನ ಬಿಪಿಸಿಎಲ್‌-ಐಓಸಿಎಲ್‌ ಪೆಟ್ರೋಲಿಯಂ ಶೇಖರಣಾ ಕೇಂದ್ರದಲ್ಲಿ ನಡೆಯಿತು.

 

ಪೆಟ್ರೋಲಿಯಂ ಸ್ಟೋರೇಜ್‌ಗಳಲ್ಲಿ, ಪೆಟ್ರೋಲಿಯಂ ವ್ಯಾಗನ್‌ ಟ್ಯಾಂಕರ್‌ ಸೋರಿಕೆ, ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನ ಕೈಗೊಳ್ಳಲಾಯಿತು. ಬೆಳಗಾವಿ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್‌ ಹಾಗೂ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೊಡ ಅವರ ನಿರ್ದೇಶನದಂತೆ ಅಣಕು ಪ್ರದರ್ಶನ ಜರುಗಿತು.

ಅವಘಡ ಸಂಭವಿಸಿದ ಕುರಿತು ಮಾಹಿತಿ ಬಂದ ತಕ್ಷಣವೇ ಜಿಲ್ಲಾಡಳಿತದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚಿಸಿ, ಘಟನೆ ಸ್ಥಳಕ್ಕೆ ಭೇಟಿ ನೀಡಿ ಅವಘಡವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು.

ಸನ್ನಿವೇಶದಲ್ಲಿ ಶೇಖರಣೆಯಾದ ಪೆಟ್ರೋಲಿಯಂ ಕಳುಹಿಸುವ ಸಂದರ್ಭದಲ್ಲಿ ವ್ಯಾಗನ್‌ ಟ್ಯಾಂಕರ್‌ ಸೋರಿಕೆಯಾಗಿದ್ದು, ಅದರಿಂದ ಪೆಟ್ರೋಲಿಯಂ ಶೇಖರಣಾ ಕೇಂದ್ರದ ಒಳಗಡೆ ಬೆಂಕಿ ಸಂಭವಿಸಿತು. ಅವಘಡದಲ್ಲಿ ಗಾಯಗೊಂಡಿರುವ 25 ಕಾರ್ಮಿಕರನ್ನು ಆಂಬ್ಯುಲೆನ್ಸ್‌ ಮೂಲಕ ಸ್ಥಳಾಂತರಿಸಿ, ಮೆಡಿಕಲ್‌ ಪೋಸ್ಟ್‌ ಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಸನ್ನಿವೇಶವನ್ನು ಅಣಕು ಪ್ರದರ್ಶನದಲ್ಲಿ ಕೈಗೊಳ್ಳಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಮಾಸ್ತಿಹೊಳಿ, ವಡಗಾಂವ ಸಿಪಿಐ ಶ್ರೀನಿವಾಸ ಹಾಂಡ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ, ಭಾರತ ಪೆಟ್ರೋಲಿಯಂ ಟೆರಟರಿ ಮ್ಯಾನೇಜರ್‌ ಸುರೇಶ ಅಲಾಟೆ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನೀಲಗಾರ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಕಿರಣ್‌ ನಾಯಕ್‌, ಎನ್‌.ಡಿ.ಆರ್‌. ಎಫ್‌ ಇನಸ್ಪೆಕ್ಟರ್‌ ಶಿವಕುಮಾರ, ಸಬ್‌ ಇನಸ್ಪೆಕ್ಟರ್‌ ಶಾಂತಿ ಲಾಲ್‌ ಜಟಿಯಾ, ಬಿಪಿಸಿಎಲ್‌ ರಕ್ಷಣಾ ಅಧಿಕಾರಿ ವಿಮಲ್‌ ಸಿ. ಪಿ, ಐಓಸಿಎಲ್‌ ಡಿಪೋ ಮ್ಯಾನೇಜರ್‌ ಪುನೀತ್‌ ಮುರುಡೇಶ್ವರ ಅಣಕು ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ