Breaking News
Home / ರಾಜಕೀಯ / ಅಂಗನವಾಡಿಗೆ ಅವಧಿ ಮೀರಿದ ಆಹಾರ ಪದಾರ್ಥ ಪೂರೈಕೆ?

ಅಂಗನವಾಡಿಗೆ ಅವಧಿ ಮೀರಿದ ಆಹಾರ ಪದಾರ್ಥ ಪೂರೈಕೆ?

Spread the love

ಬೆಂಗಳೂರು: ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಹೆಸರಿನಲ್ಲಿ ಬಳಕಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಪೂರೈಸಿದೆಯೇ? ಹೌದು ಎನ್ನುತ್ತಿವೆ ತುಮಕೂರು ಜಿಲ್ಲೆಯ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಆಹಾರದ ಪಟ್ಟಣಗಳ ಮೇಲೆ ನಮೂದಾಗಿರುವ ದಿನಾಂಕಗಳು.

 

ತಿಪಟೂರು, ತುಮಕೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ತೊಗರಿ ಬೇಳೆ, ಹೆಸರು ಕಾಳು ಮತ್ತು ಮಿಶ್ರಿತ ಪೌಷ್ಠಿಕ ಆಹಾರದ ಪೊಟ್ಟಣಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕವನ್ನು 2022ರ ನವೆಂಬರ್‌ ಎಂದು ಅಚ್ಚು ಹಾಕಲಾಗಿದೆ. ಉಪಯೋಗಿಸಬಹುದಾದ ಕೊನೆಯ ದಿನಾಂಕವನ್ನು 2022 ಜನವರಿ 31 ಎಂದು ಮುದ್ರಿಸಲಾಗಿದೆ.

ಅಂಗನವಾಡಿಗೆ ಅವಧಿ ಮೀರಿದ ಆಹಾರ ಪದಾರ್ಥ ಪೂರೈಕೆ?

ಈ ಪೊಟ್ಟಣಗಳ ಚಿತ್ರಗಳು ಅಂಗನವಾಡಿ ನೌಕರರ ವಾಟ್ಸ್‌ಆಯಪ್ ಗ್ರೂಪ್‌ಗಳನ್ನು ಹರಿದಾಡುತ್ತಿವೆ. ಇವಗಳ ಜತೆ ಸಂದೇಶವೊಂದು ರವಾನೆಯಾಗುತ್ತಿದ್ದು, ‘ಈ ತಿಂಗಳು ಸರಬರಾಜಾಗಿರುವ ಆಹಾರ ದಸ್ತಾನಿನಲ್ಲಿ ಉಪಯೋಗಿಸುವ ಕೊನೆಯ ದಿನಾಂಕದಲ್ಲಿ 2023 ಬದಲು 2022 ಎಂದು ನಮೂದಾಗಿದೆ. ತಕ್ಷಣವೇ ಅದನ್ನು ಪೆನ್ನಿನಲ್ಲಿ ತಿದ್ದುವುದು’ ಎಂದು ತಿಳಿಸಲಾಗಿದೆ.

‘2023ರ ಬದಲು 2022 ಎಂದು ಅಚ್ಚಾಗಿದ್ದರೆ ಈ ಕುರಿತು ಸ್ಪಷ್ಟನೆಯನ್ನಾದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಬೇಕಿತ್ತು. ಅದ್ಯಾವನ್ನೂ ಮಾಡದೆ ಇಲಾಖೆ ಮೌನ ವಹಿಸಿದರೆ ಯಾರು ಜವಾಬ್ದಾರರು. ಬಳಕೆಗೆ ಯೋಗ್ಯವಲ್ಲದ ಆಹಾರ ಸೇವಿಸಿ ಮಹಿಳೆ ಅಥವಾ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ’ ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಪ್ರಶ್ನಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ