Breaking News
Home / ಜಿಲ್ಲೆ / ಬೆಳಗಾವಿ / ಅಂತರಾಷ್ಟ್ರೀಯ ಮಟ್ಟದ 2022ನೇ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ

ಅಂತರಾಷ್ಟ್ರೀಯ ಮಟ್ಟದ 2022ನೇ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ

Spread the love

ದೈಹಿಕ ಅಂಗವಿಕಲತೆಯನ್ನು ಲೆಕ್ಕಿಸದೆ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ 2022ನೇ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದು ಭಾರತದ ಕೀರ್ತಿ ಪತಾಕೆ ಹಾರಿಸಿದ ಎಲ್ಲ ವಿಕಲಚೇತನ ಕ್ರೀಡಾ ಪಟುಗಳಿಗೆ ಸರ್ಕಾರದಿಂದ ಹೆಚ್ಚಿನ ಸಹಾಯ, ಸಹಕಾರ ಸಿಗುವಂತಾಗಬೇಕು ಎಂದು ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ ಸುರೇಶ ಯಾದವ ಅಭಿಪ್ರಾಯ ಪಟ್ಟರು.

ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ, ಒಲಂಪಿಕ್ ಕಮಿಟಿ ಆಫ್ ಇಂಡಿಯಾ ಹಾಗೂ ಇಂಟನ್ರ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ ಇವುಗಳ ಸಹಯೋಗದಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಉತ್ತರ ಪ್ರದೇಶದ ನೋಯಿಡಾದಲ್ಲಿ ಇದೇ ನವೆಂಬರ್ 7ರಿಂದ 11 ರವರೆಗೆ ಜರುಗಿದ ಇಂಡಿಯಾಜ್ ಫಸ್ಟ್ ಇಂಟನ್ರ್ಯಾಷನಲ್ ವೀಲ್ ಚೇರ್ ಬಾಸ್ಕೆಟ್ ಬಾಲ್ ಟೋರ್ನಾಮೆಂಟ್’ನಲ್ಲಿ ಭಾರತಕ್ಕೆ ಬೆಳ್ಳಿಪದಕ ತಂದುಕೊಟ್ಟ ಪುರುಷರ ತಂಡದಲ್ಲಿ ಆಡಿದ ಕರ್ನಾಟಕದ ಬಸಪ್ಪ ಸುಣಧೋಳಿ ಹಾಗೂ ಮಹಿಳಾ ತಂಡದಲ್ಲಿ ಆಡಿದ ಕರ್ನಾಟಕದ ಮಾಯವ್ವಾ ಸನ್ನಿಂಗನವರ ಹಾಗೂ ಲಲಿತಾ ಗವಸ ಅವರನ್ನು ಫೌಂಡೇಶನ್ ವತಿಯಿಂದ ಸತ್ಕರಿಸಿ ಮಾತನಾಡಿದ ಸುರೇಶ ಯಾದವ ಅವರು “ವಿಕಲ ಚೇತನರಿಗೆ ಸರ್ಕಾರದಿಂದ ಸಿಗಬೇಕಾದ ಉದ್ಯೋಗ, ಅನುದಾನಗಳು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ” ಎಂದು ಹೇಳಿದರು.

ನಗರ ಸೇವಕ ರಾಜಶೇಖರ ಡೋಣಿ ಅವರು ಮಾತನಾಡಿ, ” ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಈ ಸಲ ಬೆಳ್ಳಿ ಪದಕ ಪಡೆದ ತಂಡ ಮುಂಬರುವ ವರ್ಷಗಳಳ್ಳಿ ಚಿನ್ನದ ಪದಕ ಪಡೆಯುವಂತಾಗಲಿ. ಆ ನಿಟ್ಟಿನಲ್ಲಿ ಅವರಿಗೆ ಸರ್ಕಾರದಿಂದ ಸಹಾಯ, ಸಹಕಾರ ಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ” ಎಂದರು.

ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ ಮಾತನಾಡಿ, ” ದೈಹಿಕ ವೈಕಲ್ಯಕ್ಕಿಂತ ಮಾನಸಿಕ ವೈಕಲ್ಯ ಅಪಾಯಕಾರಿಯಾಗಿದೆ. ವಿಕಲಚೇತನರು ಅನೇಕ ರಂಗಗಳಲ್ಲಿ ವಿಶೇಷ ಆಸಕ್ತಿ ಮತ್ತು ಸಾಧನೆ ಮೆರೆಯುತ್ತಿದ್ದಾರೆ. ಅವರಿಗೆ ಅನುಕಂಪಕ್ಕಿಂತ ಸಹಾಯ, ಸಹಕಾರ ಮತ್ತು ಪ್ರೀತಿಯ ಅವಶ್ಯಕತೆಯಿದೆ. ಹೀಗಾಗಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ವಿಕಲಚೇತನರಿಗೆ ಬೆಂಬಲವಾಗಿ ನಿಂತು ಪೆÇ್ರೀತ್ಸಾಹಿಸಬೇಕಾದ ಅಗತ್ಯತೆ ಇದೆ” ಎಂದು ಹೇಳಿದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ