Breaking News
Home / ರಾಜಕೀಯ / ವಿಕೋಪಕ್ಕೆ ತಿರುಗಿದ ಪ್ರತಿಭಟನೆ: ಸಿಪಿಐ ಎದೆಗೇ ಬಿತ್ತು ಪ್ರತಿಭಟನಾಕಾರರು ಎಸೆದ ಕಲ್ಲು, ಪೊಲೀಸರಿಗೆ ಗಾಯ

ವಿಕೋಪಕ್ಕೆ ತಿರುಗಿದ ಪ್ರತಿಭಟನೆ: ಸಿಪಿಐ ಎದೆಗೇ ಬಿತ್ತು ಪ್ರತಿಭಟನಾಕಾರರು ಎಸೆದ ಕಲ್ಲು, ಪೊಲೀಸರಿಗೆ ಗಾಯ

Spread the love

ಬಾಗಲಕೋಟೆ: ಕಬ್ಬು ಬೆಲೆ ನಿಗದಿ ವಿಚಾರವಾಗಿ ಬಾಗಲಕೋಟೆಯ ಸಕ್ಕರೆ ಕಾರ್ಖಾನೆಯ ಬಳಿ ನಡೆಯುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತೆರಳಿದ್ದು, ಕಲ್ಲು ತೂರಾಟವೂ ನಡೆದಿದೆ. ಮಾತ್ರವಲ್ಲ, ಇನ್​ಸ್ಪೆಕ್ಟರ್ ಸೇರಿ ಮೂವರು ಪೊಲೀಸರಿಗೆ ಗಾಯವಾಗಿದೆ.

ಬಾಗಲಕೋಟೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಬೆಲೆ ನಿಗದಿ ವಿಚಾರವಾಗಿ ರೈತರ ಪ್ರತಿಭಟನೆ ನಡೆಸುತ್ತಿದ್ದು, ಅದು ಇದೀಗ ವಿಕೋಪಕ್ಕೂ ತಿರುಗಿದೆ. ಪ್ರತಿಭಟನಾಕಾರರು ಎಸೆದ ಕಲ್ಲು ಸರ್ಕಲ್ ಪೊಲೀಸ್ ಇನ್​ಸ್ಪೆಕ್ಟರ್ ಎದೆಗೇ ಬಿದ್ದಿದ್ದು, ಅವರೂ ಸೇರಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ರಬಕವಿ-ಬನಹಟ್ಟಿಯ ಮಠಪತಿ ಗಾಯಗೊಂಡಿರುವ ಇನ್​ಸ್ಪೆಕ್ಟರ್​, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬಾಗಲಕೋಟೆ ಎಸ್​ಪಿ ಜಯಪ್ರಕಾಶ್ ಧಾವಿಸಿದ್ದಾರೆ.

ಕಲ್ಲು ತೂರಾಟ ಹಾಗೂ ಕಬ್ಬು ಬೆಳೆಗಾರರ ಗದ್ದಲದಲ್ಲಿ ಕಾರ್ಖಾನೆಯ ಅನೇಕ ವಸ್ತುಗಳು ಜಖಂಗೊಂಡಿಗೆ. ಕಾರ್ಖಾನೆ ಗೇಟ್, ಬಾಗಿಲು, ಕಿಟಕಿ, ಗಾಜುಗಳು ಹಾನಿಗೀಡಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ಕಾರ್ಖಾನೆಯವರು ಪ್ರತಿ ಟನ್​ಗೆ 2,900 ಬೆಲೆ ಘೋಷಣೆ ಮಾಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿದೆ.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ