Breaking News
Home / ಜಿಲ್ಲೆ / ಬೆಳಗಾವಿ / ಕಿತ್ತೂರು / ಚಿಣ್ಣರಿಗೂ ಬಂತು ಉತ್ಸವದ ಹಿಗ್ಗು

ಚಿಣ್ಣರಿಗೂ ಬಂತು ಉತ್ಸವದ ಹಿಗ್ಗು

Spread the love

ಕಿತ್ತೂರು: ಐತಿಹಾಸಿಕ ಉತ್ಸವದಲ್ಲಿ ಒಂದೆಡೆ ವರ್ಣರಂಜಿತ ವೇದಿಕೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ ಮಕ್ಕಳು ವಿವಿಧ ಆಟಗಳನ್ನಾಡಿ ಸಂಭ್ರಮದಲ್ಲಿ ಮಿಂದೆದ್ದರು.

ಇಲ್ಲಿನ ಕೋಟೆ ಆವರಣದ ಮುಂಭಾಗದಲ್ಲಿ ಮಕ್ಕಳು ಹಾಗೂ ಯುವಕರಿಗಾಗಿ ವಿವಿಧ ಆಟಿಕೆಗಳನ್ನು ಅಳವಡಿಸಲಾಗಿದೆ.

ಎಲ್ಲವೂ ವಿದ್ಯುತ್ ಚಾಲಿತ ಆಟಿಕೆಗಳೇ ಇರುವುದು ಈ ಬಾರಿಯ ವಿಶೇಷ. ಚಿಣ್ಣರು ಬಾತುಕೋಳಿ, ಬೈಕ್‌ಗಳ ತಿರುಗುಂಡಿ ಮೇಲೆ ಕುಳಿತು ಸಂಭ್ರಮಿಸಿದರು. ಮತ್ತೆ ಕೆಲವರು ಜಾರುಬಂಡೆಯಿಂದ ಜಾರಿ ನಲಿದರು. ರಬ್ಬರ್‌ನಿಂದ ಮಾಡಿದ ಡಾನ್ಸಿಂಗ್‌ ರೋಪ್ ಮೇಲೆ ಜಿಗಿಜಿಗಿದು ಖುಷಿ ಪಟ್ಟರು.

ಆವರಣದಲ್ಲಿ ಸೇರಿದ ಪಾಲಕರು ಮಕ್ಕಳ ಆಟಗಳನ್ನು ನೋಡಿ ಹರ್ಷಪಟ್ಟರು.

ವ್ಯಾಪಾರ- ವಹಿವಾಟು ಜೋರು:

ಕಿತ್ತೂರು ಕೋಟೆ ಆವರಣವೂ ಸೇರಿ ಪಟ್ಟಣದ ವಿವಿಧ ಮಾರ್ಗಗಳಲ್ಲಿನ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಕಲಾವಿದರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡಿತ್ತು. ಆದರೂ ಹೋಟೆಲ್‌ಗಳಲ್ಲಿ ಊಟ, ಉಪಾಹಾರ ಸೇವನೆಗೆ ಜನ ಮುಗಿಬಿದ್ದಿರು. ಮಿಠಾಯಿ ಅಂಗಡಿಗಳ ಮುಂದೆ ಚಿಣ್ಣರ ದಂಡು, ಪಾನಿಪೂರಿ ಅಂಗಡಿ ಮುಂದೆ ಯುವತಿಯರ ಗುಂಪು ದಿನವೂ ಕಾಣಿಸಿತು.

ಹಿರಿಯರು ಕೂಡ ಭಜ್ಜಿ, ವಡಾಪಾವ್, ಮಸಾಲೆ ಪುರಿ, ಮಂಡಕ್ಕಿ, ಗೋಬಿ ಮಂಚೂರಿ, ಜಿಲೇಬಿ, ಕಬ್ಬಿನ ಹಾಲು, ಐಸ್ಕ್ರೀಂ ರುಚಿ ಸವಿದರು. ಸುತ್ತಮುತ್ತಲಿನ ಗ್ರಾಮದ ಜನರು ತಮ್ಮ ಕುಟುಂಬ ಸಮೇತವಾಗಿ ಉತ್ಸವದಲ್ಲಿ ನಾನಾ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು. ಮಹಿಳೆಯರು ಬಳೆ, ಸರ, ಕಿವಿಯೋಲೆ ಸೇರಿದಂತೆ ಇತರೆ ಆಲಂಕಾರಿಕ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

ವಿಶೇಷ ಬಸ್ ಸೌಲಭ್ಯ:

ಎರಡೂ ದಿನ ಕಿತ್ತೂರು ಉತ್ಸವ ವೀಕ್ಷಣೆ ನಗರ, ಪಟ್ಟಣ ಮಾತ್ರವಲ್ಲದೆ, ಹಳ್ಳಿಗಳಿಂದಲೂ ಹೆಚ್ಚಿನ ಜನ ಬಂದಿದ್ದರು. ನಗರ, ಪಟ್ಟಣ ಮತ್ತು ಸುತ್ತಲಿನ ಹಳ್ಳಿಗಳಿಂದ ಕಿತ್ತೂರು ಉತ್ಸವಕ್ಕೆ ಬರುವವರಿಗೆ ಅನುಕೂಲವಾಗಲೆಂದು ತಡರಾತ್ರಿಯವರೆಗೂ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ಸಂಚಾರ ನಿಯಂತ್ರಕ ಕೆ.ಕೆ. ಲಮಾಣಿತಿಳಿಸಿದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ