Breaking News
Home / ಜಿಲ್ಲೆ / ಬೆಂಗಳೂರು / ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಹಸಿರು ಶಾಲಿನ ಒಳಗಿದ್ದ ಅವರ ರೈತ ವಿರೋಧಿ ಮನೋಭಾವ ಹೊರಬಂದಿದೆ

ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಹಸಿರು ಶಾಲಿನ ಒಳಗಿದ್ದ ಅವರ ರೈತ ವಿರೋಧಿ ಮನೋಭಾವ ಹೊರಬಂದಿದೆ

Spread the love

ಬೆಂಗಳೂರು: ಸರ್ಕಾರದ ಕೃಷಿ ಮಸೂದೆಗಳು ರೈತ ವಿರೋಧಿಯಾಗಿವೆ. ಭೂ ಸುಧಾರಣೆ ಮತ್ತು ಎಪಿಎಂಎಸಿ ಕಾಯ್ದೆ ತಿದ್ದುಪಡಿ ಮಾಡುತ್ತೇವೆಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರಲಿಲ್ಲ. ಇವನ್ನ ಜಾರಿಗೆ ತರುವ ಯಾವ ನೈತಿಕತೆಯೂ ಅದಕ್ಕೆ ಇಲ್ಲ. ಈ ತಿದ್ದುಪಡಿಗಳಿಂದ ರೈತರ ಕಲ್ಯಾಣ ಆಗುತ್ತದೆ ಎಂಬ ಭರವಸೆ ಸರ್ಕಾರಕ್ಕೆ ಇದ್ದರೆ ಮೊದಲು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಧರಣಿ ಆರಂಭಿಸಿದ ಸಿದ್ದರಾಮಯ್ಯ ಈ ವೇಳೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ವಿಧಾನಸಭೆ ವಿಸರ್ಜನೆಗೆ ಆಗ್ರಹಿಸಿದ್ದಾರೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ಈ ಕಾಯ್ದೆ ಜಾರಿಗೆ ತಂದರೆ ರೈತರು ಬೀದಿಗೆ ಬರಲಾರರು ಎಂಬ ಭ್ರಮೆ ನಿಮಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಷಾಮೀಲಾಗಿ ರೈತ ವಿರೋಧಿ ಮಸೂದೆಗಳನ್ನ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿವೆ. ಆದರೆ, ಇಂದು ಇಡೀ ದೇಶದ ರೈತರು ಪ್ರಾಣವನ್ನು ಲೆಕ್ಕಿಸದೆ ಬೀದಿಗೆ ಇಳಿದು ಹೋರಾಟ ಮಾಡಿದ್ದಾರೆ. ಈ ಮೂಲಕ ಬಿಜೆಪಿಯ ಹುನ್ನಾರವನ್ನು ವಿಫಲಗೊಳಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯಡಿಯೂರಪ್ಪ ಮಾತುಮಾತಿಗೂ ತಾನು ರೈತ ನಾಯಕನೆಂದು ಹೇಳುತ್ತಾರೆ. ಸಂಘ ಪರಿವಾರದ ಕೇಸರಿಶಾಲು ಕಿತ್ತುಹಾಕಿ ಹಸಿರುಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಹಸಿರು ಶಾಲಿನ ಒಳಗಿದ್ದ ಅವರ ರೈತ ವಿರೋಧಿ ಮನೋಭಾವ ಹೊರಬಂದಿದೆ ಎಂದು ಮುಖ್ಯಮಂತ್ರಿಗಳನ್ನ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
“ಯಡಿಯೂರಪ್ಪ ಮೊದಲ ಬಾರಿ ಸಿಎಂ ಆಗಿದ್ದ ವೇಳೆ ರಸಗೊಬ್ಬರ ಕೇಳಿದ ರೈತರನ್ನ ಗುಂಡಿಟ್ಟು ಸಾಯಿಸಿದರು. ಈ ಬಾರಿ ರೈತ ಸಮುದಾಯವನ್ನೇ ಸಾಯಿಸಲು ಹೊರಟಿದ್ದಾರೆ. ರೈತರ ಕಣ್ಣಿರ ಶಾಪ ಪಕ್ಷ ಹಾಗೂ ಸರ್ಕಾರಕ್ಕೆ ತಟ್ಟಲಿದೆ.
“ಬಿಜೆಪಿ ಹುಟ್ಟಿನಿಂದಲೇ ರೈತ ವಿರೋಧಿ ಪಕ್ಷ. ಬಂಡವಾಳಿಗರು, ಉದ್ಯಮಿಗಳು ಹಾಗು ವರ್ತಕರ ಬೆಂಬಲಕ್ಕೆ ಅದು ನಿಂತಿದೆ. ಬಿಜೆಪಿ ಡಿಎನ್​ಎಯಲ್ಲೇ ರೈತ ವಿರೋಧಿ ವಿಚಾರ ಇದೆ” ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ

Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ